Advertisement
ದಂತಕ್ಷಯ ಹೇಗೆ ಉಂಟಾಗುತ್ತದೆ?ನಾವು ತಿಂದ ಆಹಾರದಲ್ಲಿರುವ ಸಕ್ಕರೆಯ ಅಂಶವು ಹಲ್ಲಿನ ಪದರದಲ್ಲಿ ಶೇಖರಗೊಂಡಿರುತ್ತದೆ. ಬಾಯಿಯ ಬ್ಯಾಕ್ಟೀರಿಯಾಗಳಿಗೆ ಸಕ್ಕರೆಯೇ ಪ್ರಮುಖ ಆಹಾರ. ಬ್ಯಾಕ್ಟೀರಿಯಾ ಮತ್ತು ಆಹಾರ ಅವಶೇಷಗಳನ್ನು ಒಳಗೊಂಡಿರುವ ಹಲ್ಲಿನ ಮೇಲ್ಮೆಯ ಪದರವನ್ನು “ಪ್ಲಾಕ್’ ಎನ್ನುತ್ತೇವೆ. ನಿಯಮಿತವಾಗಿ ಬ್ರಷ್ ಮಾಡದಿದ್ದಾಗ ಈ ಪದರದಲ್ಲಿ ಬ್ಯಾಕ್ಟೀರಿಯಾಗಳು ಆಮ್ಲವನ್ನು ಉತ್ಪತ್ತಿ ಮಾಡಿ ಹಲ್ಲಿನ ಖನಿಜಾಂಶವನ್ನು ನಿರ್ನಾಮ ಮಾಡುತ್ತದೆ. ಇದರಿಂದ ದಂತ ಕ್ಷಯ ಅಥವಾ ದಂತಕುಳಿ ಉಂಟಾಗುತ್ತದೆ.
1. ಹಲ್ಲಿನ ಮೊದಲ ಪದರ Enamel (ಎನಾಮಲ್) ಮೇಲೆ ದಾಳಿಯಿಂದ ಖನಿಜಾಂಶಗಳ ನಿರ್ನಾಮವಾಗುತ್ತದೆ.
2. ಎರಡನೆ ಪದರ Dentin (ಡೆಂಟಿನ್)ಗೆ ದಂತಕ್ಷಯ ಹರಡಿದಾಗ ಬಿಸಿ, ತಂಪು ಪಾನಿಯ, ಸಿಹಿ ತಿನಿಸುಗಳನ್ನು ತಿಂದಾಗ ಹಲ್ಲುಗಳು “”ಜುಂ” ಎನ್ನಲು ಶುರುವಾಗುತ್ತವೆ.
3. ಮೂರನೇ ಪದರ pulpಗೆ (ಹಲ್ಲಿನ ನರತಂತುಗಳು) ದಂತಕ್ಷಯ ಹರಡಿದಾಗ ಹಲ್ಲು ನೋವು ಉಂಟಾಗುತ್ತದೆ.
4. ಕೊನೆಯ ಹಂತದಲ್ಲಿ ದಂತಕ್ಷಯ ಹಲ್ಲಿನ ಬೇರುಗಳನ್ನು ತಲುಪಿ ಕೀವು ಉಂಟಾಗುತ್ತದೆ. ಹಾಗೂ ಹಲ್ಲಿನ ಬೇರಿನ ಭಾಗದಲ್ಲಿ ಊತ ಹಾಗೂ ಸಹಿಸಲಾಗದಷ್ಟು ವಿಪರೀತ ನೋವು ಉಂಟಾಗುತ್ತದೆ. ಚಿಕಿತ್ಸಾ ವಿಧಾನಗಳು
1. ಮೊದಲೆರಡು ಹಂತಗಳಲ್ಲಿ ದಂತ ವೈದ್ಯರು ದಂತಕ್ಷಯ ಉಂಟಾದ ಭಾಗವನ್ನು ಸ್ವತ್ಛಗೊಳಿಸಿ ಹಲ್ಲಿಗೆ ಬೆಳ್ಳಿ (Silver Amalgam) ಅಥವಾ ಹಲ್ಲಿನ ಬಣ್ಣದ ಸಿಮೆಂಟ್ ತುಂಬಿ ಫಿಲ್ಲಿಂಗ್ ಮಾಡುತ್ತಾರೆ.
2. ದಂತಕ್ಷಯ ನರತಂತುಗಳು ಹಾಗೂ ಬೇರುಗಳಿಗೆ ಹರಡಿದಾಗ (ಹಂತ 3 ಮತ್ತು 4) ದಂತ ವೈದ್ಯರು ಹಲ್ಲಿನ ಬೇರುಗಳನ್ನು ರೂಟ್ ಕೆನಾಲ್ ಚಿಕಿತ್ಸೆ (Root Canal treatment) ಮೂಲಕ ಶುಚಿಗೊಳಿಸುತ್ತಾರೆ.
3. ಕೆಲವೊಮ್ಮೆ ದಂತಕ್ಷಯ ತೀವ್ರವಾಗಿ ಆಳವಾದ
ಕುಳಿಯಾದಾಗ
ಹಲ್ಲನ್ನು ಕೀಳಿಸ
ಬೇಕಾಗುತ್ತದೆ.
Related Articles
1. ಐಸ್‌ಕ್ರೀಮ್, ಚಿಪ್ಸ್, ಬ್ರೆಡ್, ಕ್ಯಾಂಡಿಯಂತಹ ಸಿಹಿ ಹಾಗೂ ಜಿಗುಟು ಪದಾರ್ಥಗಳು.
2. ಅನುವಂಶಿಕ ಮತ್ತು ವಂಶಪಾರಂಪರ್ಯ ಕಾರಣಗಳು.
3. ಹಲ್ಲಿನ ಮೇಲ್ಮೆಯ ಪದರದಲ್ಲಿ ಆಳವಾದ ಚಡಿ ಹಾಗೂ ಗೀರುಗಳು (Pits and fissures)
4. ವಕ್ರದಂತತೆ
5. ಜೊಲ್ಲು ರಸ ಕಡಿಮೆಯಾಗಿ: ಮದ್ಯಪಾನ, ಧೂಮಪಾನದಿಂದ, ಹಾಗೂ ಕ್ಯಾನ್ಸರ್ ರೋಗಕ್ಕೆ ನೀಡುವ ಕ್ಷಕಿರಣ ಚಿಕಿತ್ಸೆಯಿಂದ “”ವಿಕಿರಣ ದಂತ ಕ್ಷಯ” ಉಂಟಾಗಬಹುದು.
6. ಎದೆಹಾಲಿನ ಬದಲಾಗಿ ಮಕ್ಕಳಿಗೆ ಸಕ್ಕರೆಯುಕ್ತ ಹಾಲನ್ನು ನೀಡಿದಾಗ ಹಲ್ಲಿನ ಸಂದಿಯಲ್ಲಿ ಸಕ್ಕರೆಯ ಅಂಶ ಸೇರಿಕೊಂಡು ದಂತಕ್ಷಯ ಉಂಟಾಗುತ್ತದೆ.
Advertisement
ದಂತ ಪರೀಕ್ಷೆಯ ಮಹತ್ವಕ್ರಮಬದ್ಧ ಹಾಗೂ ನಿಯಮಿತವಾಗಿ ದಂತ ವೈದ್ಯರಲ್ಲಿ ಹೋಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದರಿಂದ ದಂತ ಕ್ಷಯವನ್ನು ತಡೆಗಟ್ಟಬಹುದು. ಇಂದಿನ ದಿನಗಳಲ್ಲಿ “ಬೈಟ್ ವಿಂಗ್’ x ray ಮೂಲಕ, “ಡಯಾಗ್ನೊಡೆಂಟ್ ಲೇಸರ್’ ಮತ್ತು ಹಲವಾರು ಹೊಸ ಆವಿಷ್ಕಾರಗಳಿಂದ ದಂತ ವೈದ್ಯರು ದಂತಕ್ಷಯವನ್ನು
ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ದಂತ ವಿಜ್ಞಾನದಲ್ಲಿ ಬಯೋಸಿರಾಮಿಕ್ಸ್
(Bioceramics) ನಂತಹ ಅದ್ಭುತ ಜೈವಿಕ ವಸ್ತುಗಳ ಬಳಕೆಯಿಂದ ಆಳವಾದ ಹುಳುಕಿನಿಂದ ಹಲ್ಲಿನ ನರತಂತು (Pulp) ಗಳನ್ನು ರಕ್ಷಿಸಬಹುದಾಗಿದೆ. ದಂತಕ್ಷಯ ಹೇಗೆ ತಡೆಗಟ್ಟಬಹುದು?
1. ನಿಯಮಿತವಾಗಿ ಹಲ್ಲುಜ್ಜುವುದು ಹಾಗೂ ಆಹಾರ ಸೇವನೆಯ ಬಳಿಕ ಬಾಯಿ ಮುಕ್ಕಳಿಸುವುದು.
2. ಪ್ಲೋರೈಡ್‌ಯುಕ್ತ ಟೂತ್‌ಪೇಸ್ಟ್ ಬಳಕೆ.
3. ಹಲ್ಲಿನ ಸಂಧಿಗಳಲ್ಲಿ ಸಿಕ್ಕ ಆಹಾರವನ್ನು ಶುಚಿಗೊಳಿಸಲು ಪ್ಲೋಸ್ (Floss) ಅನ್ನು ಉಪಯೋಗಿಸುವುದು.
4. ವಿಟಮಿನ್, ಮಿನರಲ್ ಹಾಗೂ ಫೈಬರ್‌ಯುಕ್ತ ಸಮೃದ್ಧವಾದ ಸಮತೋಲನ ಆಹಾರ ಸೇವನೆ.
5. ನಿಯಮಿತ ಹಲ್ಲಿನ ತಪಾಸಣೆ. ಡಾ| ನೀತಾ ಶೆಣೈ, MDS
ಕನ್ಸರ್ವೇಟಿವ್ ಡೆಂಟಿಸ್ಟ್ರಿ ಆ್ಯಂಡ್ ಎಂಡೊಡಾಂಟಿಕ್ಸ್, ಮಣಿಪಾಲ ದಂತ ವೈದ್ಯಕೀಯ ಕಾಲೇಜು,
ಮಣಿಪಾಲ.