Advertisement

ಸೋಂಕಿತರ ಚಿಕಿತ್ಸೆಗೆ ನೆರವಿನ ಜತೆ ಧೈರ್ಯ ತುಂಬುತ್ತೇನೆ

06:03 PM May 28, 2021 | Team Udayavani |

ಗೌರಿಬಿದನೂರು ತಾಲೂಕಿನಲ್ಲೂ ಕೊರೊನಾ ಸೋಂಕು ತನ್ನ ಕಬಂಧಬಾಹು ಹರಡಿದೆ. ನಗರ ಅಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲೂ ಸೋಂಕು ಕಾಣಿಸಿಕೊಂಡು ಹಲವು ಸೋಂಕಿತರು ಹೋಂ ಕ್ವಾರಂಟೈನ್‌, ಕೆಲವರುಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಜೊತೆಗೆ ಮಾಜಿ ಸಚಿವ ಹಾಗೂ ಕ್ಷೇತ್ರದ ಹಾಲಿ ಶಾಸಕ ಶಿವಶಂಕರರೆಡ್ಡಿ ಕೂಡ ದವಸ ಧಾನ್ಯ, ಮಾಸ್ಕ್, ಆಕ್ಸಿಜನ್‌ ವಿತರಣೆಸೇರಿದಂತೆ ಸೋಂಕಿತರ ಮನೆ ಬಾಗಿಲಿಗೆ ಹೋಗಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ಕುರಿತಂತೆ ಉದಯವಾಣಿಯೊಂದಿಗೆ ಕೋವಿಡ್‌ ಸೇವಾ ಕಾರ್ಯಗಳ ಬಗ್ಗೆ  ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

ಕೊರೊನಾ ನಿಯಂತ್ರಿಸಲುಸರ್ಕಾರ ಕೈಗೊಂಡಿರುವಕ್ರಮಗಳ ಬಗ್ಗೆ ನಿಮಗೆ ತೃಪ್ತಿತಂದಿದೆಯೇ?

ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಇಂದಿನಸಾವು ನೋವಿಗೆ ಕಾರಣ. ಸಕಾಲಕ್ಕೆ ಸೂಕ್ತ ಕ್ರಮಕೈಗೊಂಡಿದ್ದರೆ ಕೊರೊನಾ ಸೋಂಕಿನಿಂದಹಲವು ಮಂದಿಯ ಜೀವ ಉಳಿಸಬಹುದಿತ್ತು.„

 ಗೌರಿಬಿದನೂರಿನಲ್ಲೂ ಸೋಂಕಿತಪ್ರಕರಣ ಹೆಚ್ಚಾಗಿವೆ. ಬಗ್ಗೆ ನಿಮ್ಮಅಭಿಪ್ರಾಯವೇನು?

ಸರ್ಕಾರ ನಿಯಂತ್ರಣಕ್ಕೆ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿತ್ತು. ಇಷ್ಟೊಂದುಸಾವು-ನೋವು ಆಗುತ್ತಿರಲಿಲ್ಲ.ರಾಜ್ಯದ ಮಂತ್ರಿಗಳು ಸಹಇದನ್ನು ಗಂಭೀರವಾಗಿಪರಿಗಣಿಸಲಿಲ್ಲ ಹಾಗೂ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸದೆಇರುವುದೇ ಕೊರೊನಾ ಹೆಚ್ಚಾಗಲು ಹಾಗೂ ಸಾವು-ನೋವುಗಳು ಹೆಚ್ಚಾಗಲುಪ್ರಮುಖ ಕಾರಣವಾಗಿದೆ.„

Advertisement

ವೈಯಕ್ತಿಕವಾಗಿ ಕೊರೊನಾ ಸೋಂಕುನಿಯಂತ್ರಣಕ್ಕೆ, ಸೋಂಕಿತರ ಚಿಕಿತ್ಸೆಬೇಕಾದ ಸೌಲಭ್ಯ,ಪರಿಹಾರ ಕಾರ್ಯ ಕೈಗೊಳ್ಳಲಾಗಿದೆಯೇ?

ದಾನಿಗಳಿಂದ, ಹಲವು ಕಾರ್ಖಾನೆಗಳಿಂದಸೋಂಕಿತರ ಚಿಕಿತ್ಸೆ ಬೇಕಾದ ಯಂತ್ರೋಪಕರ ಣ ಗಳನ್ನು ಆಸ್ಪತ್ರೆಗೆ ಕೊಡಿಸುತ್ತಿದ್ದೇನೆ.ಬಡವ ರಿಗೆ ಆಹಾರ, ದಿನಸಿ ಕಿಟ್‌ ಕೊಡಿಸುತ್ತಿದ್ದೇನೆ. ಪ್ರತಿ ದಿನ ಗ್ರಾಮ ಪಂಚಾಯ್ತಿಗೆತೆರಳಿ ಅಲ್ಲಿನ ಪೂರ್ವ ತಯಾರಿ, ನಿರ್ವಹಣೆಬಗ್ಗೆ ವಿಚಾರಿಸಿ, ಸೋಂಕಿತರಿಗೆ ಧೈರ್ಯತುಂಬುವ ಕೆಲಸ ನಿರಂತರವಾಗಿಮಾಡುತ್ತಿದ್ದೇನೆ, ಗ್ರಾಮೀಣ ಜನರಿಗೆ ದಿನಸಿಕಿಟ್‌ಗಳನ್ನೂ ನೀಡುತ್ತಿದ್ದೇನೆ.

ಸೋಂಕಿತರಿಗೆ ಬೇಕಿರುವುದು ಚಿಕಿತ್ಸೆಜೊತೆ ಆತ್ಮಸ್ಥೈರ್ಯ ತುಂಬುವ ಕೆಲಸಆಗಬೇಕು. ಬಗ್ಗೆ ನಿಮ್ಮ ಅಭಿಪ್ರಾಯ?

ಕೊರೊನಾ ಬಗ್ಗೆ ಭಯಪಡುವ ಅಗತ್ಯವಿಲ್ಲ, ಎಚ್ಚರಿಕೆಯಿಂದ ಇರಬೇಕಷ್ಟೆ. ಸೋಂಕಿನಲಕ್ಷಣ ಕಂಡು ಬಂದ ತಕ್ಷಣವೇ ವೈದ್ಯರ ಬಗ್ಗೆತಪಾಸಣೆ ಮಾಡಿಸಿಕೊಂಡು, ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದು ಚಿಕಿತ್ಸೆಪಡೆಯಬೇಕು. ದೃಶ್ಯ ಮಾಧ್ಯಮಗಳಲ್ಲಿಕೊರೊನಾ ಕುರಿತು ಭಿತ್ತರಿಸುತ್ತಿರುವ ಸುದ್ದಿಗಳಿಂದ ಸಾಕಷ್ಟು ಮಂದಿ ಆತಂಕಗೊಂಡಿದ್ದಾರೆ.ಸರ್ಕಾರಿ ಆಸ್ಪತ್ರೆ ಯಲ್ಲಿ ಸಾಮಾನ್ಯ ಚಿಕಿತ್ಸೆಪಡೆದ ಸಾಕಷ್ಟು ಸೋಂ ಕಿತರು ಗುಣಮುಖರಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿಲಕ್ಷಾಂತರ ರೂ. ಖರ್ಚು ಮಾಡಿದ ಕೆಲವರುಸಾವನ್ನಪ್ಪಿದ್ದಾರೆ. ಈ ಕಾರಣದಿಂದ ಸೋಂಕಿತರಿಗೆ ಚಿಕಿತ್ಸೆಗೆ ಜೊತೆಗೆ ಬಹು ಮುಖ್ಯವಾಗಿಆತ್ಮಸ್ಥೈರ್ಯ ತುಂಬ ಬೇಕಾದ ಅವಶ್ಯಕತೆಇದೆ. ಆ ಕೆಲಸ ಮಾಡುತ್ತಿದ್ದೇನೆ.

 ಗೌರಿಬಿದನೂರು ತಾಲೂಕಿನಲ್ಲಿ ಹೆಚ್ಚಳವಾಗಿರುವ ಕೊರೊನಾಸೋಂಕಿನ ಬಗ್ಗೆ ನಿಮ್ಮ ಸ್ಪಂದನೆ ಹೇಗಿದೆ?

ಆಸ್ಪತ್ರೆಯ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೊರೊನಾ ಸೋಂಕಿತರಿಗೆನೀಡುತ್ತಿರುವ ಚಿಕಿತ್ಸೆ ಹಾಗೂ ಊಟದ ವ್ಯವಸ್ಥೆ ಬಗ್ಗೆ ಚರ್ಚಿಸುತ್ತಿದ್ದೇನೆ. ಯಾವರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೀರಿ ಎಂದು ವಿವರ ಪಡೆಯುತ್ತಿದ್ದೇನೆ, ನಾನೇ ಖುದ್ದುಸೋಂಕಿತರ ಆರೋಗ್ಯ ವಿಚಾರಿಸುತ್ತಿದ್ದೇನೆ, ಅವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದೇನೆ.

ಗಣೇಶ ವಿ.ಡಿ

Advertisement

Udayavani is now on Telegram. Click here to join our channel and stay updated with the latest news.

Next