Advertisement

ಬ್ಯಾಂಕಿಗೂ ಚಿಕಿತ್ಸೆ!

04:09 PM Jan 08, 2018 | |

ರಿಸರ್ವ್‌ ಬ್ಯಾಂಕ್‌ ಈ ಒಂದು ವರ್ಷದಲ್ಲಿ 8 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಆರ್ಥಿಕ ಪುನರುಜ್ಜೀವನ ಚಿಕಿತ್ಸೆಗೆ ಒಳಪಡಿಸಿದೆ. ಬ್ಯಾಲೆನ್ಸ್‌ ಶೀಟ್‌ ದುರ್ಬಲ ಇರುವ ಸಣ್ಣ  ಬ್ಯಾಂಕುಗಳನ್ನಲ್ಲದೇ, ಮಧ್ಯಮ ಪ್ರಮಾಣದ ಬ್ಯಾಂಕುಗಳನ್ನೂ ಈ ಚಿಕಿತ್ಸೆಗೆ ಒಳಪಡಿಸಿದೆ…

Advertisement

ಮನುಷ್ಯನ ಆರೋಗ್ಯದಲ್ಲಿ ಏರುಪೇರಾದಾಗ, ಅರೋಗ್ಯ ಬೇಗ ಚೇತರಿಸಿಕೊಳ್ಳುವ ಲಕ್ಷ ಣ ಕಾಣದಿರುವಾಗ, ಅರೋಗ್ಯವನ್ನು ಸುಸ್ಥಿತಿಗೆ ತರಲು ಸ್ವಲ್ಪ ದೃಢವಾದ ಮತ್ತು ದೀರ್ಘ‌ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಸದೃಢ ಆರೋಗ್ಯವನ್ನು ಮರಳಿ ಪಡೆಯುವ ಈ ಪ್ರಕ್ರಿಯೆಯನ್ನು ಪುನರುಜ್ಜೀವನ ಅಥವಾ ಕಾಯಕಲ್ಪ ಚಿಕಿತ್ಸೆ ಎನ್ನುತ್ತಾರೆ.

ಅದೇ ರೀತಿ ಬ್ಯಾಂಕುಗಳ ಅರ್ಥಿಕ ಅರೋಗ್ಯ ಕ್ಷೀಣಿಸುತ್ತಿದ್ದು, ಅದನ್ನು ತಡೆಗಟ್ಟಲು ಮತ್ತು ಅದು ಇನ್ನೂ ಕ್ಷೀಣಿಸದಂತೆ ಮಾಡಲು, ಶೇರುದಾರರ, ಠೇವಣಿದಾರರ ಮತ್ತು ಗ್ರಾಹಕರ  ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರವು ಕೆಲವು ಕಠಿಣ ಕ್ರಮಗಳನ್ನು ಆಗಾಗ್ಗೆ, ಪರಿಸ್ಥಿತಿ  ಹತೋಟಿ ತಪ್ಪುವ ಮೊದಲೇ ತೆಗೆದುಕೊಳ್ಳುತ್ತದೆ. ಬ್ಯಾಂಕುಗಳನ್ನು ಸರಿಪಡಿಸಲು, ಸರಿದಾರಿಗೆ ತರಲು, ಅವು ಮಾಡಿದ ತಪ್ಪುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಮತ್ತು ಅವು ತಿರುಗಿ ಅರ್ಥಿಕ ಆರೋಗ್ಯವನ್ನು ಪಡೆಯುವಂತೆ ಮಾಡಲು, Prompt Corrective Action ಹೆಸರಿನಲ್ಲಿ, ಇವುಗಳ ಚಟುವಟಿಕೆಗಳನ್ನು, ನಿತ್ಯದ  ಕಾರ್ಯಗಳನ್ನು ನಿಯಂತ್ರಿಸುತ್ತದೆ ಮತ್ತು ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡುತ್ತದೆ. ಈ ಚಿಕಿತ್ಸೆಗೆ ಒಂದು ನಿರ್ದಿಷ್ಟ  ಕಾಲ ಮಿತಿ ಇರುವುದಿಲ್ಲ. ಬ್ಯಾಂಕುಗಳು  ತಮ್ಮ ಆರ್ಥಿಕ ಆರೋಗ್ಯ ಚೇತರಿಸಿಕೊಳ್ಳುವ ತನಕ ಮತ್ತು ಸರ್ಕಾರ  ಈ ಚೇತರಿಕೆಯನ್ನು ಒಪ್ಪಿಕೊಳ್ಳುವ  ವರೆಗೆ ಇದು ನಡೆಯುತ್ತದೆ. ರಿಸರ್ವ್‌ ಬ್ಯಾಂಕ್‌  ಕಳೆದ ಒಂದು ವರ್ಷದಲ್ಲಿ 8 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಈ ಪ್ರಕ್ರಿಯೆಗೆ ಒಳಪಡಿಸಿದೆ. ಬ್ಯಾಲೆನ್ಸ್‌ ಶೀಟ್‌ ದುರ್ಬಲ ಇರುವ ಸಣ್ಣ  ಬ್ಯಾಂಕುಗಳನ್ನಲ್ಲದೇ, ಮಧ್ಯಮ ಪ್ರಮಾಣದ ಬ್ಯಾಂಕುಗಳನ್ನೂ ಈ ಚಿಕಿತ್ಸೆಗೆ ಒಳಪಡಿಸಿದೆ.

ಇದಕ್ಕೆ ಕಾರಣವೇನು?
1980 ಮತ್ತು 1990ರ ಅರಂಭದಲ್ಲಿ ಅಮೆರಿಕದಲ್ಲಿ 1700ಕ್ಕೂ ಹೆಚ್ಚು ಕಮರ್ಶಿಯಲ… ಮತ್ತು ಸೇವಿಂಗ್ಸ್‌ ಬ್ಯಾಂಕುಗಳು ವೈಫ‌ಲ್ಯಗೊಂಡು ಮುಚ್ಚಿದ್ದು, ಅಮೆರಿಕದ ಫೆಡೆರಲ್ ಇನ್ಶೂರೆನ್ಸ್‌ ಮೇಲೆ ಸುಮಾರು  100 ಬಿಲಿಯನ್‌ ಡಾಲರ್‌ ಹೊರೆ ಬಿದ್ದಿದ್ದು, ಅಮೆರಿಕದ ಸೆಂಟ್ರಲ್ ಬ್ಯಾಂಕ್‌ ಅದ ಫೆಡೆರಲ್ ರಿಸರ್ವ್‌ ಮುಂಜಾಗರೂಕತೆಯ ಎಚ್ಚರಿಕೆ ವಹಿಸಿದ್ದರೆ, ಇಂಥ ಘಟನೆಗಳು ಅಗುತ್ತಿರಲಿಲ್ಲವೆಂದು ಅರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಇದರಿಂದ ಪಾಠ ಕಲಿತ ಭಾರತವು ಗುಣಪಡಿಸುವುದಕ್ಕಿಂತ ನಿಯಂತ್ರಣ (prevention is better than cure)  ಎಂದು  ಎಚ್ಚರಿಕೆ ವಹಿಸಿದೆ.

ಈ ಪ್ರಕ್ರಿಯೆಯನ್ನು ಯಾವಾಗ ಆರಂಭಿಸುತ್ತಾರೆ?
– ಒಂದು ಬ್ಯಾಂಕಿನ ಹಣಕಾಸು ಅರೋಗ್ಯ ನಿರಂತರವಾಗಿ 3 ವರ್ಷಗಳ ಕಾಲದಿಂದ ಕ್ಷೀಣಿಸುತ್ತಿದ್ದು, ಚೇತರಿಕೆಯ ಲಕ್ಷಣ ಕಾಣದಿರುವಾಗ.
– ರಿಸರ್ವ್‌ ಬ್ಯಾಂಕ್‌ ಗೊತ್ತುಮಾಡಿದ ಕೆಲವು ರಿಸ್ಕ್ ಮಾನದಂಡಗಳು ಉಲ್ಲಂಘನೆಯಾದಾಗ ಅಥವಾ ಅದನ್ನು ಪಾಲಿಸದಿದ್ದಾಗ.
– ಬ್ಯಾಂಕಿನ ಸ್ವತ್ತಿನ (asset quality) ದಿನೇದಿನೆ ಕಡಿಮೆಯಾಗುತ್ತಿರುವಾಗ.
 - ಲಾಭದ ಪ್ರಮಾಣ ಕುಸಿಯುತ್ತಿರುವಾಗ ಅಥವಾ ಲಾಭ ಗಳಿಸದಿದ್ದಾಗ.
– ಅನುತ್ಪಾದಕ (Non Performing Asset) ರಿಸರ್ವ್‌ ಬ್ಯಾಂಕ್‌ ಹೇರಿದ ಶೇ.12 ಮಿತಿಯನ್ನು ಮೀರಿದಾಗ.
– 4  ವರ್ಷ ಸತತವಾಗಿ egative return on asset ಆದಾಗ.
ಬ್ಯಾಂಕಿನ ಬ್ಯಾಲೆನ್ಸ್‌ ಶೀಟ್‌ನಲ್ಲಿ ಇವೆಲ್ಲವೂ ಗೊತ್ತಾಗುತ್ತದೆ. ಆದರೂ ರಿಸರ್ವ್‌ ಬ್ಯಾಂಕ್‌ ಕೂಡಲೇ ಕ್ರಮ ತೆಗೆದುಕೊಳ್ಳದೇ, ಬ್ಯಾಂಕನ್ನು ಸ್ಪೆಷಲ… ಆಡಿಟ್‌ಗೆ ಒಳಪಡಿಸಿ, ಪುನರ್‌ ನಿರ್ಮಿಸಿ (restructure) ಮಾಡಿ, ರಿಕವರಿ ಸ್ಟೆಪ್‌ಗ್ಳನ್ನು ಪುನಃಶ್ಚೇತನಗೊಳಿಸಲು ಪ್ರಯತ್ನಿಸುತ್ತದೆ. ಈ ಎಲ್ಲ ಪ್ರಯತ್ನಗಳು ನಿಶ್ಚಿತ ಫ‌ಲ ನೀಡದಿದ್ದಾಗ, ಕೊನೆಯದಾಗಿ  ಪ್ರಾಮ್‌r ಕರೆಕ್ಟಿವ್‌ ಆಕ್ಷನ್‌ ಹಾದಿಯನ್ನು ಹಿಡಿಯುತ್ತವೆ.

Advertisement

ಪ್ರಾಮ್ಟ್  ಕರೆಕ್ಟಿವ್‌ ಆಕ್ಷನ್‌ ಅಂದರೇನು?
ಈ ಕ್ರಮ ಅಥವಾ ಪ್ರಕ್ರಿಯೆ ಅನ್ವಯ, ಇದಕ್ಕೊಳಗಾದ ಬ್ಯಾಂಕುಗಳು ತುಟ್ಟಿಯಾದ ಡಿಪಾಸಿಟ್‌ಗಳನ್ನು (ಹೆಚ್ಚಿನ ಬಡ್ಡಿದರದ ಠೇವಣಿ) ಮತ್ತು ಸರ್ಟಿಫಿಕೇಟ್‌ ಆಫ್ ಡಿಪಾಸಿಟ್‌ಗಳನ್ನು (certificate of deposit) ಸ್ವೀಕರಿಸುವಂತಿಲ್ಲ ಮತ್ತು ನವೀಕರಿಸುವಂತಿಲ್ಲ. ಈ ಕಟ್ಟಳೆಯಲ್ಲಿ ಅನಿರೀಕ್ಷಿತವಾದದ್ದು ಏನಾದರೂ ನಡೆದರೆ, ಬ್ಯಾಂಕಿನ  ಹೊರೆಯನ್ನು ಕಡಿಮೆಮಾಡುವ ಉದ್ದೇಶ ಇರಬಹುದು.
ಬ್ಯಾಂಕುಗಳು ಬಡ್ಡಿಯೇತರ (noninterest income), ಶುಲ್ಕ ಆಧಾರಿತ ಆದಾಯವನ್ನು ಹೆಚ್ಚಿಸಬೇಕು. ಬ್ಯಾಂಕುಗಳು ಪ್ರತಿ ಸೇವೆಗೂ ಶುಲ್ಕ ನೀಡಬೇಕು (nಟ sಛಿrvಜಿcಛಿ cಟಞಛಿs frಛಿಛಿ) ತತ್ವದಡಿ  ನೀಡುವ ಪ್ರತಿ ಸೇವೆಗೂ ಶುಲ್ಕ ಪಡೆಯಬೇಕು.

ಯುದೊœàಪಾದಿಯಲ್ಲಿ ಅನುತ್ಪಾದಕ ಸಾಲವನ್ನು ವಸೂಲು ಮಾಡಬೇಕು ಮತ್ತು ಅನುತ್ಪಾದಕ ಸಾಲಗಳಿಗೆ ಹೊಸ ಸೇರ್ಪಡೆ ಆಗದಂತೆ ನಿಗಾ ವಹಿಸಬೇಕು. ಆಡಳಿತಾತ್ಮಕ (administrative  expenditure) ವೆಚ್ಚವನ್ನು ನಿಯಂತ್ರಿಸಬೇಕು. ಬ್ಯಾಂಕುಗಳು ಯಾವುದೇ ಹೊಸ Line Of Business ಗೆ ಒಪ್ಪಂದ ಮಾಡಿಕೊಳ್ಳಬಾರದು. ಬ್ಯಾಂಕ್‌ಗಳು ಕಡಿಮೆ ಡಿವಿಡೆಂಡ್‌ ಕೊಡಬೇಕು ಮತ್ತು ಸಾಧ್ಯವಾದರೆ ಡಿವಿಡೆಂಡ್‌ ನೀಡಬಾರದು. ಬ್ಯಾಂಕುಗಳು ಇಂಟರ್‌ ಬ್ಯಾಂಕ್‌ ಮಾರುಕಟ್ಟೆಯಲ್ಲಿ ಸಾಲ ತೆಗೆದುಕೊಳ್ಳದಂತೆ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ಹೇರುತ್ತದೆ.
ಬ್ಯಾಂಕ್‌ ಅಡಳಿತ ಮಂಡಳಿಯ ನಿರ್ದೇಶನ ಮತ್ತು ಒಪ್ಪಿಗೆ ಹೊರತಾಗಿ, technical up gradatio ಬಿಟ್ಟು, ಬೇರೆ ಯಾವುದೇ ಕ್ಯಾಪಿಟಲ… ವೆಚ್ಚ ಮಾಡಬಾರದು. ಹೊಸ ಸಿಬ್ಬಂದಿ ನೇಮಕವಿಲ್ಲ. ಹಾಗೆಯೇ ಖಾಲಿ ಸ್ಥಾನವನ್ನು ತುಂಬುವಂತಿಲ್ಲ.ಹೊಸ ಶಾಖೆಗಳನ್ನು ತೆರೆಯುವಂತಿಲ್ಲ.

ಬ್ಯಾಂಕುಗಳ ಅನುತ್ಪಾದಕ ಆಸ್ತಿ ಶೇ.10 ಸೀಮಿತವಾಗಿದ್ದರೆ, ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಅನುತ್ಪಾದಕ ಆಸ್ತಿ ಶೇ.10-15 ವರೆಗೆ ಇದ್ದರೆ, ಬ್ಯಾಂಕುಗಳು ಅನುತ್ಪಾದಕ ಆಸ್ತಿಗಳ ವಸೂಲಿಗಾಗಿ ವಿಶೇಷ  ಕಾರ್ಯ ಯೋಜನೆಯನ್ನು ಹಾಕಿಕೊಳ್ಳಬೇಕಾಗುತ್ತದೆ, ಹೊಸ ಅನುತ್ಪಾದಕ ಆಸ್ತಿಗಳು ಸೇರದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಾಲ ನೀತಿ ನಿಯಮಾವಳಿಗಳನ್ನು ಪುನರ್‌ ವಿಮರ್ಶಿಸಬೇಕಾಗುತ್ತದೆ ಮತ್ತು ಸಾಲ ಬೇಡಿಕೆಯನ್ನು ಪರಿಷ್ಕರಿಸುವ ಕೌಶಲ್ಯವನ್ನು ಹೆಚ್ಚಿಸಬೇಕಾಗುತ್ತದೆ. ಹಾಗೆಯೇ ಕೋರ್ಟ್‌ನಲ್ಲಿರುವ ಮತ್ತು ಡಿಕ್ರಿ ಆದ ಪ್ರಕರಣಗಳನ್ನು ಆದ್ಯತೆಯಲ್ಲಿ ಫಾಲೋ ಅಪ್‌ ಮಾಡಬೇಕಾಗುತ್ತದೆ. ಸಾಲಗಳು ಕೆಲವರಿಗೆ ಮತ್ತು ಕೆಲವು ಕ್ಷೇತ್ರಗಳಿಗೆ ಸೀಮಿತವಾಗುವುದನ್ನು ತಪ್ಪಿಸಬೇಕಾಗುತ್ತದೆ ಮತ್ತು ಸರಿಯಾದ ಕ್ರೆಡಿಟ್‌ ರಿಸ್ಕ್ ಮ್ಯಾನೇಜ್‌ಮೆಂಟ್‌ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಹಾಗೆಯೇ  capital to risk weigted asset (CRAR) ಶೇ.9ಕ್ಕಿಂತ ಕಡಿಮೆಯಾದರೆ, ತನ್ನ ಅಂಗ ಸಂಸ್ಥೆಗಳಲ್ಲಿನ ಹೂಡಿಕೆಯನ್ನು ಕಡಿಮೆ ಮಾಡಬೇಕು ಮತ್ತು  ಕ್ಯಾಪಿಟಲ್ ಮಾರ್ಕೆಟ್‌- ರಿಯಲ್ ಎಸ್ಟೇಟ್‌ಗಳಿಗೆ ಸಾಲವನ್ನು ಕಡಿಮೆಮಾಡಬೇಕು ಮತ್ತು ಎಸ್‌ಎಲ್‌ಆರ್‌ ಅಗತ್ಯವಿರದ ಹೂಡಿಕೆಯನ್ನು ಮಿತವಾಗಿಸಬೇಕು. ಬ್ಯಾಂಕಿನ ಸ್ಥಿರತೆಯ ಮಾನದಂಡವಾದ CRAR ಶೇ.3ರಿಂದ 6 ಇದ್ದರೆ, ರಿಸರ್ವ ಬ್ಯಾಂಕ್‌, ಹೊಸ ನಿರ್ದೇಶಕ  ಮಂಡಳಿ, ಆಡಳಿತ ಮಂಡಳಿಯನ್ನು ನೇಮಿಸಬಹುದು, ಸಲಹೆಗಾರರರನ್ನು ನಿಯುಕ್ತಿ ಮಾಡಬಹುದು. ಈ ಮಾನದಂಡ ಶೇ.3ಕ್ಕೂ ಕಡಿಮೆಯಾದರೆ, ಬ್ಯಾಂಕಿನ ವಿಲೀನದ ಬಗೆಗೆ ಚಿಂತಿಸಬಹುದು. ಇಂದು ಯಾವ ಬ್ಯಾಂಕೂ ಈ ಸ್ಥಿತಿಗೆ ಇಳಿದಿಲ್ಲ. ಸುಸ್ತಿ ಸಾಲದ ಹೊರತಾಗಿಯೂ ಭಾರತದ ಬ್ಯಾಂಕುಗಳು ಸದೃಢವಾಗಿವೆ. ಈಗ ತೆಗೆದುಕೊಳ್ಳುತ್ತಿರುವ ಕ್ರಮಗಳು ಸುಸ್ತಿ ಸಾಲದ ವಸೂಲಿ ಬಗೆಗೆ ಹೆಚ್ಚು ಗಮನ ಹರಿಸಿವೆ.

ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next