Advertisement

ಇನ್ನೂ 48 ಟ್ರೈನ್‌ಗಳು ಸೂಪರ್‌ ಫಾಸ್ಟ್‌: ಪ್ರಯಾಣ ದರ ಏರಿಕೆ

03:33 PM Nov 06, 2017 | udayavani editorial |

ಹೊಸದಿಲ್ಲಿ :  ತೀವ್ರ ನಗದು ಕೊರತೆ ಅನುಭವಿಸುತ್ತಿರುವ ಭಾರತೀಯ ರೈಲ್ವೆ 48 ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ಟ್ರೈನ್‌ಗಳನ್ನು  “ಸೂಪರ್‌ ಫಾಸ್ಟ್‌’ ಎಂದು ಮೇಲ್ಮಟ್ಟಕ್ಕೇರಿಸಿ ಅವುಗಳಲ್ಲಿನ ಪ್ರಯಾಣ ಶುಲ್ಕವನು ಏರಿಸಿದೆ. 

Advertisement

ಈ ರೈಲುಗಳ ಈಗಿನ ಗಂಟೆಗೆ 50 ಕಿ.ಮೀ. ವೇಗವನ್ನು ಕೇವಲ ಐದು ಕಿ.ಮೀ. ಏರಿಸಿ ಅವುಗಳಿಗೆ ಸೂಪರ್‌ ಫಾಸ್ಟ್‌  ಎಂಬ ಮೇಲ್ಮಟ್ಟದ ಲೇಬಲ್‌ ಹಚ್ಚಿರುವುದು ಭಾರತೀಯ ರೈಲ್ವೆಯ ಕುಟಿಲೋಪಾಯವಾಗಿದೆ ಎಂಬ ಟೀಕೆ ಕೇಳಿಬಂದಿದೆ.

ಈ ಟ್ರೈನ್‌ಗಳ ಹೊಸ ಪ್ರಯಾಣ ಶುಲ್ಕವನ್ನು ನಮೂದಿಸಿ ರೈಲ್ವೆ ಇಲಾಖೆ ಹೊಸ ವೇಳಾಪಟ್ಟಿಯನ್ನು ನವೆಂಬರ್‌ 1ರಂದು ಬಿಡುಗಡೆ ಮಾಡಿದೆ.

ಸೂಪರ್‌ ಫಾಸ್ಟ್‌ ಎಂಬ ಟ್ಯಾಗ್‌ ನೀಡಿ ಮೇಲ್ಮಟ್ಟಕ್ಕೆ ಏರಿಸಿರುವ ಹೊರತಾಗಿಯೂ ಈ ರೈಲುಗಳು ಸಮಯಕ್ಕೆ ಸರಿಯಾಗಿ ತಮ್ಮ ಗುರಿ ತಲುಪುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಮೇಲಾಗಿ ಚಳಿಗಾಲ ಆರಂಭಕ್ಕೆ ಮುನ್ನವೇ ಏರಿದ ಹೊಸ ಪ್ರಯಾಣ ಶುಲ್ಕವನ್ನು ಜಾರಿಗೆ ತರಲಾಗಿದೆ; ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಮಂಜು ಮುಸುಕಿದ ವಾತಾವರಣ ಸಾಮಾನ್ಯವಾಗಿರುವುದರಿಂದ ಎಲ್ಲ ಬಗೆಯ ರೈಲುಗಳ ಹಲವು ತಾಸು ವಿಳಂಬವಾಗಿ ಗುರಿ ತಲುಪುವುದು ಸಾಮಾನ್ಯವಾಗಿದೆ. 

ಪ್ರಯಾಣ ದರ ಏರಿಸಲ್ಪಟ್ಟ ಈ ರೈಲುಗಳಲ್ಲಿ , ಸೂಪರ್‌ ಫಾಸ್ಟ್‌ ಮಟ್ಟಕ್ಕೆ ಅನುಗುಣವಾದ ಯಾವುದೇ ಹೊಸ ಸೌಕರ್ಯಗಳನ್ನು ಅಳವಡಿಸಲಾಗಿಲ್ಲ. ಹಾಗಿದ್ದೂ ಪ್ರಯಾಣಿಕರು ಸ್ಲಿàಪರ್‌ಗೆ 30 ರೂ.ಹೆಚ್ಚು ಮತ್ತು 3ನೇ ಎಸಿಗೆ 45 ರೂ. ಹೆಚ್ಚು ಹಾಗೂ ಫ‌ಸ್ಟ್‌ ಎಸಿ ವರ್ಗಕ್ಕೆ 75 ರೂ ಹೆಚ್ಚು ತೆರಬೇಕಾಗಿದೆ. 

Advertisement

ಈ ಏರಿಕೆ ಮೂಲಕ ಹೆಚ್ಚುವರಿಯಾಗಿ 70 ಕೋಟಿ ರೂ.ಗಳ ಆದಾಯವನ್ನು ರೈಲ್ವೆ ನಿರೀಕ್ಷಿಸಿದೆ. 

48 ಹೊಸ ಸೇರ್ಪಡೆಯೊಂದಿಗೆ ಪ್ರಕೃತ ಸೂಪರ್‌ ಫಾಸ್ಟ್‌ ರೈಲುಗಳ ಸಂಖ್ಯೆ 1,072ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next