Advertisement

ವಿಶ್ವ ಕ್ರಿಕೆಟಿನ ಹಿತದೃಷ್ಟಿಯಿಂದ ಇಂಗ್ಲೆಂಡ್‌ ಪ್ರವಾಸ: ಲ್ಯಾಂಗರ್‌

01:17 AM Jul 10, 2020 | Sriram |

ಮೆಲ್ಬರ್ನ್: ವಿಶ್ವ ಕ್ರಿಕೆಟಿನ ಹಿತದೃಷ್ಟಿಯಿಂದ ಹಾಗೂ ನಮ್ಮ ಕೆಲವು ಅಗ್ರ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುವುದರಿಂದ ಆಸ್ಟ್ರೇಲಿಯ ಕ್ರಿಕೆಟಿಗರು ಮುಂದಿನ ಇಂಗ್ಲೆಂಡ್‌ ಪ್ರವಾಸವನ್ನು ಕೈಗೊಳ್ಳಬೇಕಿದೆ ಎಂಬುದಾಗಿ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ನಾವು ಮುಂದಿನ ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಬೇಕಿದೆ. ಆದರೆ ಇಲ್ಲಿ ಬಹಳಷ್ಟು ಸವಾಲುಗಳಿವೆ. ಇದಕ್ಕೆಲ್ಲ ಪರಿಹಾರ ಕಂಡುಹುಡುಕಿ ಮುಂದಡಿ ಇಡಬೇಕಿದೆ’ ಎಂದು “ಡೈಲಿ ಟೆಲಿಗ್ರಾಫ್’ಗೆ ನೀಡಿದ ಸಂದರ್ಶನದಲ್ಲಿ ಜಸ್ಟಿನ್‌ ಲ್ಯಾಂಗರ್‌ ಹೇಳಿದರು.

“ಇದು ನನ್ನ ವೈಯಕ್ತಿಕ ಅಭಿಪ್ರಾಯ. ಜಾಗತಿಕ ಕ್ರಿಕೆಟಿನ ಹಿತದೃಷ್ಟಿಯಿಂದ ನಾವು ಇಂಗ್ಲೆಂಡಿಗೆ ತೆರಳಬೇಕಿದೆ. ಪರಿಸ್ಥಿತಿ ನಮ್ಮ ಕೈಮೀರಿ ಸಾಗಿದರೆ ಏನೂ ಮಾಡಲಾಗದು. ಆದರೆ ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ ಯಾವುದೂ ಅಸಾಧ್ಯವಾಗದು’ ಎಂದು ಲ್ಯಾಂಗರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next