Advertisement

ಅಪ್ಪಟ ಭಾರತೀಯನ ಪ್ರವಾಸ ಕಥನ

05:41 PM Jul 13, 2019 | mahesh |

ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ ಗ್ರಂಥ ಧಾರಾವಾಹಿಯಾ ಗಿಯೂ, ಇತಿಹಾಸ ಅಧ್ಯಯನಗ್ರಂಥವಾಗಿಯೂ ತೆರೆದು ಕೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ “ಇಸಂ’ ಇಲ್ಲದ ಒಬ್ಬ ಸಾಮಾನ್ಯ ಮನುಷ್ಯ ಸಮಾಜವನ್ನು ಚಿತ್ರಿಸಿದರೆ ಅದೆಷ್ಟು ಸುಂದರ, ಸತ್ಯ ಇತಿಹಾಸವಾಗಬಹುದು ಎಂಬುದಕ್ಕೆ ಈ ಗ್ರಂಥ ಉದಾಹರಣೆ.

Advertisement

ಗೋಡ್ಸೆ ಎಂದ ಕೂಡಲೇ ಎಲ್ಲರಿಗೂ ನಾಥೂರಾಂ ಗೋಡ್ಸೆ ನೆನಪಾಗಬಹುದು. ಆದರೆ, ಈ ವಿಷ್ಣು ಭಟ್ಟ ಗೋಡ್ಸೆಗೂ ನಾಥೂರಾಂ ಗೋಡ್ಸೆಗೂ ಸಂಬಂಧವಿಲ್ಲ. ವಿಷ್ಣು ಭಟ್ಟ ಗೋಡ್ಸೆ 1827ರಲ್ಲಿ ಮಹಾರಾಷ್ಟ್ರದ ಆಲಿಬಾಗ್‌ ಜಿಲ್ಲೆಯ ಪೇಣ ತಾಲೂಕಿನ ವರಸಯಿ ಗ್ರಾಮದಲ್ಲಿ ಹುಟ್ಟಿ ಪುರೋಹಿತ ವೃತ್ತಿ ನಡೆಸುತ್ತಿದ್ದರು. ಬಡತನ ಮತ್ತು ಸಾಲದ ಬೇಗೆಯಿಂದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಸಂಚರಿಸಿ ಧನಸಂಪಾದನೆಗೆಂದು 1856ರಲ್ಲಿ ಹೊರಟವರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆನಿಸಿದ 1857ರಲ್ಲಿ ಬ್ರಿಟಿಷ್‌ ಸಿಪಾಯಿಗಳು, ಭಾರತೀಯ ಸೈನಿಕರು, ಲೂಟಿಕೋರರ ಕೈಗೆ ಸಿಕ್ಕಿ ಗಳಿಕೆಯನ್ನೆಲ್ಲ ಕಳೆದುಕೊಂಡವರು. ಕೊನೆಗೆ ತಾಯಿಗೆ ಅಭಿಷೇಕ ಮಾಡಲು ಎರಡು ಕೊಡಪಾನ ಗಂಗಾಜಲವನ್ನು ಮಾತ್ರ ತರಲು ಅವರಿಗೆ ಸಾಧ್ಯವಾಯಿತಂತೆ. ಅವರ ಅನು ಭವ ಅದ್ಭುತವಾದದ್ದು, ಸಂಶೋಧಕರಿಗೆ ಆಕರವಾಗುವಂಥಾದ್ದು.

ವಿಷ್ಣು ಭಟ್ಟರು ಮರಾಠಿಯಲ್ಲಿ ಕೃತಿ ಬರೆದದ್ದು 1883ರಲ್ಲಿ. ಮರಾಠಿ ಮೂಲದ ಕೃತಿ ಮುದ್ರಣಗೊಂಡದ್ದು ವಿಷ್ಣು ಭಟ್ಟರು 1904ರಲ್ಲಿ ನಿಧನಾನಂತರ 1907ರಲ್ಲಿ ಮಾಝಾ ಪ್ರವಾಸ ಹೆಸರಿನಲ್ಲಿ. ಅನಂತರ ಮರಾಠಿ, ಹಿಂದಿ, ಇಂಗ್ಲಿಶ್‌ನಲ್ಲಿ ಕೃತಿಗಳು ಬಂದವು. ಕನ್ನಡದಲ್ಲಿ ಸುಲಲಿತವಾಗಿ ಓದಿಸಿಕೊಂಡು ಹೋಗುವಂತೆ ಅನುವಾದಿಸಿದವರು ಗುಂಡ್ಮಿ ಭಾಸ್ಕರ ಮಯ್ಯ.

ವಿಷ್ಣು ಭಟ್ಟ ಗೋಡ್ಸೆಯ
ನನ್ನ ಪ್ರವಾಸ
ಅನು.: ಜಿ. ಭಾಸ್ಕರ ಮಯ್ಯ
ಪ್ರ.: ಜನವಾದಿ ಪ್ರಕಾಶನ, ಗುಂಡ್ಮಿ- 576226, ಬ್ರಹ್ಮಾವರ, ಉಡುಪಿ ಜಿಲ್ಲೆ. ಮೊಬೈಲ್‌ : 9448428448
ಪ್ರಥಮ ಮುದ್ರಣ: 2019 ದರ : ರೂ. 200

ಮಟಪಾಡಿ ಕುಮಾರಸ್ವಾಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next