Advertisement
ಆ ಮೂಲಕ ನಿರ್ವಾಹಕರು ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ‘ಟಿಕೆಟ್ ಇಲ್ಲದಿದ್ದರೆ ಉಚಿತ ಪ್ರಯಾಣ’ ಎನ್ನುವ ವಿನೂತನ ಜಾಗೃತಿ ಅಭಿಯಾನ ಪ್ರಾರಂಭಿಸುವುದಕ್ಕೆ ತೀರ್ಮಾನಿಸಿದೆ.
ನೂತನ ಅಭಿಯಾನ ಜಾರಿಗೆ
ಬಸ್ ನಿರ್ವಾಹಕರಿಗೆ ಟಿಕೆಟ್ ನೀಡಬೇಕು ಎಂಬ ಜವಾಬ್ದಾರಿ ಬರಬೇಕು. ಪ್ರಯಾಣಿಕರಿಗೆ ಕಡ್ಡಾಯವಾಗಿ ಟಿಕೆಟ್ ನೀಡಬೇಕು ಎಂದು ಈಗಾಗಲೇ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದೆ. ಅದರೂ ನಿಯಮ ಪಾಲನೆ ಯಾಗುತ್ತಿಲ್ಲ ಇದೇ ಉದ್ದೇಶಕ್ಕೆ ಟಿಕೆಟ್ ಇಲ್ಲದಿದ್ದರೆ ಉಚಿತ ಪ್ರಯಾಣ ಎಂಬ ನೂತನ ಅಭಿಯಾನವನ್ನು ಪ್ರಾಯೋಗಿಕವಾಗಿ ಆರಂಭಿಸುತ್ತಿದ್ದೇವೆ.
– ದಿಲ್ರಾಜ್ ಆಳ್ವ,ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
ಸುದಿನ ವಿಸ್ತೃತ ವರದಿ ಮಾಡಿತ್ತು
ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್ ನೀಡಬೇಕು ಎಂಬ ಉದ್ದೇಶದಿಂದ ‘ಸುದಿನ’ ಈಗಾಗಲೇ ಸರಣಿ ವಿಶೇಷ ವರದಿ ಪ್ರಕಟಿಸಿತ್ತು. ಸಿಟಿ ಬಸ್ ಮಾಲಕರ ಸಂಘ ಕೂಡ ಸಂಚಾರ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಿತ್ತು. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಿಟಿ ಬಸ್ ಮಾಲಕರು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಭೆ ನಡೆದಿದ್ದು, ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಕಡ್ಡಾಯವಾಗಿ ಟಿಕೆಟ್ ನೀಡಬೇಕು, ಇಲ್ಲದಿದ್ದರೆ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ನಿರ್ಣಯ ಕೈಗೊಳ್ಳಲಾಗಿದೆ.
•ನವೀನ್ ಭಟ್ ಇಳಂತಿಲ