Advertisement

ಸಂಚಾರಿ ಕಿಯೋಸ್ಕ್ ಮಾದರಿ ಸಂಗ್ರಹ

11:20 AM Apr 19, 2020 | Suhan S |

ಬೆಂಗಳೂರು: ದಕ್ಷಿಣ ಲೋಕಸಭಾ ಸದಸ್ಯರ ಕಚೇರಿ ಸಹಯೋಗದಲ್ಲಿ ಮಂತ್ರ ಇ- ವೆಂಚರ್ಸ್‌ ಅಭಿವೃದ್ಧಿಪಡಿಸಿರುವ “ಸಂಚಾರಿ ಕೋವಿಡ್‌- 19 ತಪಾಸಣಾ ಕಿಯೋಸ್ಕ್’ನಿಂದ ತಪಾಸಣೆ ಕಾರ್ಯಕ್ಕೆ ಸಚಿವ ಆರ್‌. ಅಶೋಕ್‌, ಸಂಸದ ತೇಜಸ್ವಿ ಸೂರ್ಯ ಶನಿವಾರ ಚಾಲನೆ ನೀಡಿದರು.

Advertisement

ಕೋವಿಡ್‌- 19 ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ತಪಾಸಣೆಗೆ ಒಳಪಡಿಸಿ ಮಾದರಿ ಸಂಗ್ರಹ ಕಾರ್ಯ ಆರಂಭವಾಗಿದ್ದು, ಮನೆಯಲ್ಲೇ ಕ್ವಾರೆಂಟೈನ್‌ನಲ್ಲಿರುವ 56 ಮಂದಿಯನ್ನು ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಮಾದರಿ ಸಂಗ್ರಹಿಸಲಾಯಿತು. ಸಂಚಾರಿ ತಪಾಸಣಾ ಕಿಯೋಸ್ಕ್ ಮೂಲಕ ನಗರದಲ್ಲಿ ಮನೆಯಲ್ಲೇ ಕ್ವಾರೆಂಟೈನ್‌ನಲ್ಲಿರುವ 378 ಪ್ರಾಥಮಿಕ ಹಾಗೂ 1,278 ದ್ವಿತೀಯ ಹಂತದ ಸಂಪರ್ಕ ಹೊಂದಿರುವವರ ಪರೀಕ್ಷೆ ನಡೆಯಲಿದೆ.

ಜಿಲ್ಲಾ ಆರೋಗ್ಯಾಧಿಕಾರಿಗಳ ಉಸ್ತುವಾರಿಯಲ್ಲಿ ಆರೋಗ್ಯ ಸಹಾಯಕರು ಮಾದರಿ ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಮಾದರಿಗಳನ್ನು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಯ ಪ್ರಾದೇಶಿಕ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಸಚಿವ ಆರ್‌.ಅಶೋಕ್‌ ಮಾತನಾಡಿ, ಈವರೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳು 3800 ಮಂದಿಯ ಪರೀಕ್ಷೆ ನಡೆಸಿದ್ದು, ಇನ್ನು ಮುಂದೆ ಇನ್ನಷ್ಟು ವೇಗ ಹಾಗೂ ಪರಿಣಾಮಕಾರಿಯಾಗಿ ಸೋಂಕು ಪತ್ತೆ ಪರೀಕ್ಷೆ ನಡೆಯಲಿದೆ. ಜನರ ಸಹಕಾರ ಅತ್ಯಗತ್ಯ ಎಂದು ಹೇಳಿದರು. ಸಂಸದ ತೇಜಸ್ವಿ ಸೂರ್ಯ, ಸಚಿವರಾದ ಆರ್‌.ಅಶೋಕ್‌ ಅವರೊಂದಿಗೆ ನಡೆಸಿದ ಸಭೆಯಲ್ಲಿ. ರಾಜ್ಯ ಕೋವಿಡ್‌- 19 ಸಲಹಾ ಮಂಡಳಿ ಸದಸ್ಯ ಡಾ.ವಿಶಾಲ್‌ ರಾವ್‌ ಉಸ್ತುವಾರಿಯಲ್ಲಿ 2 ದಿನದಲ್ಲಿ ತಪಾಸಣೆ, ಮಾದರಿ ಸಂಗ್ರಹ ಪೂರ್ಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next