Advertisement

ತ್ರಾಸಿ-ಮರವಂತೆ ಕಡಲತೀರ, ಉದ್ಯಾನವನದಲ್ಲಿ ಜನರ ವಿಹಾರ

01:24 AM Mar 20, 2020 | Sriram |

ಮರವಂತೆ: ಕೋವಿಡ್‌ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೀಚ್‌/ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದರೂ ಕೂಡ ಕೆಲವೆಡೆಗಳಲ್ಲಿ ಇದು ಇನ್ನೂ ಅನುಷ್ಠಾನಕ್ಕೆ ಬಂದಂತೆ ಕಾಣಿಸುತ್ತಿಲ್ಲ. ತ್ರಾಸಿ – ಮರವಂತೆ ಕಡಲ ಕಿನಾರೆಯು ಇದರಿಂದ ಹೊರತಲ್ಲ. ಕೋವಿಡ್‌ 19 ಭೀತಿ ಕಡಿಮೆಯಾಗುವವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಎನ್ನುವ ಕೂಗು ಸ್ಥಳೀಯರಿಂದ ವ್ಯಕ್ತವಾಗಿದೆ.

Advertisement

ತ್ರಾಸಿ – ಮರವಂತೆ ಕಡಲ ತೀರದಲ್ಲಿ ಇತ್ತೀಚಿನ ದಿನಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಕಡಿಮೆ ಯಾಗಿದ್ದರೂ ಉದ್ಯಾನವನ ಸ್ಥಳಗಳಲ್ಲಿ ಅಲ್ಲಲ್ಲಿ ಸಾರ್ವಜನಿಕರು, ಪ್ರವಾಸಿಗರು ಕಂಡು ಬರುತ್ತಿದ್ದಾರೆ.

ಜಿಲ್ಲಾಧಿಕಾರಿಯವರು ಬೀಚ್‌/ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರೂ ಆದೇಶ ಪಾಲಿಸಲು ಯಾವೊಬ್ಬ ಅಧಿಕಾರಿ ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಕಡಲ ತೀರಕ್ಕೆ ಆಗಮಿಸಿ ವಿಹರಿಸುತ್ತಿದ್ದಾರೆ.

ಕಡಲ ತೀರದಲ್ಲಿರುವ ಫಾಸ್ಟ್‌ಫುಡ್‌ ಅಂಗಡಿ ತೆರೆದಿದ್ದು, ಉದ್ಯಾನವನದ ಹೊರಗೆ ಮತ್ತು ತ್ರಾಸಿ – ಮರವಂತೆ ಹೆದ್ದಾರಿ ಸಮೀಪದಲ್ಲಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎನ್ನುವ ಸರಕಾರದ ಕಟ್ಟುನಿಟ್ಟಿನ ಸೂಚನೆ ತ್ರಾಸಿ – ಮರವಂತೆ ಕಡಲ ತೀರದಲ್ಲಿ ಹಾಗೂ ಉದ್ಯಾನವನ ಪರಿಸರದಲ್ಲಿ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಕೋವಿಡ್‌ 19 ವೈರಸ್‌ ಹರಡುವುದನ್ನು ತಡೆಗಟ್ಟಲು ಅನೇಕ ಕಟ್ಟುನಿಟ್ಟಿನ ವಿಶೇಷ ಕ್ರಮಗಳನ್ನು ಪಾಲಿಸಬೇಕೆಂದು ಸರಕಾರ ಸೂಚನೆ ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಪ್ರವಾಸಿ ತಾಣಗಳಿಗೆ ನಿರ್ಬಂಧ
ಜಿಲ್ಲೆಯಲ್ಲಿ ಅನಿರ್ದಿಷ್ಟಾವಧಿಯವರೆಗೆ 144(3) ಸೆಕ್ಷನ್‌ ಜಾರಿಗೊಳಿಸಲಾಗಿದ್ದು, ಇದರಲ್ಲಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಕೂಡ ಸೇರಿಸಲಾಗಿದೆ. ಆಯಾಯ ತಾಣಗಳಲ್ಲಿ ಪ್ರವಾಸಿಗರು ಬಾರದಂತೆ, ಜನ ಸೇರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಲ್ಲಿ ವಹಿಸಿಕೊಟ್ಟ ಖಾಸಗಿಯವರದ್ದಾಗಿದೆ. ಇಲಾಖೆಯಿಂದಲೂ ನಿಗಾ ವಹಿಸ ಲಾಗುವುದು.
– ಚಂದ್ರಶೇಖರ ನಾಯ್ಕ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next