Advertisement

ಬೋನಿಗೆ ಬಿದ್ದ ನರಭಕ್ಷಕ ಚಿರತೆ

05:55 AM May 14, 2020 | Lakshmi GovindaRaj |

ಮಾಗಡಿ: ನರಭಕ್ಷಕ ಚಿರತೆ ಕೊನೆಗೂ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಮಂಗಳವಾರ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ತಾಲೂಕಿನ ಕಸಬಾ ಹೋಬಳಿ ಬೆಳಗುಂಬ ಗ್ರಾಪಂ ವ್ಯಾಪ್ತಿಯ ಕದರಯ್ಯನಪಾಳ್ಯದ ಗ್ರಾಮದಲ್ಲಿ  ಕಳೆದ 5 ದಿನಗಳ ಹಿಂದೆಯಷ್ಟೆ ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಹೇಮಂತ್‌ ಎಂಬ ಮಗು ಹೊತ್ತೂಯ್ದು ಭಕ್ಷಿಸಿದ್ದ ನರಭಕ್ಷಕ ಚಿರತೆ, ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.

Advertisement

ಅದನ್ನು ಸೆರೆಹಿಡಿದ ಅರಣ್ಯಾಧಿಕಾರಿಗಳು  ದೂರದ ಕಾಡಿಗೆ ಬಿಟ್ಟಿದ್ದಾರೆ. ನರಭಕ್ಷಕ ಚಿರತೆ ದಾಳಿಗೆ ಬಲಿಯಾದ ದಿನವೇ ಮಗುವಿನ ಮನೆಗೆ ಬಂದಿದ್ದ, ಅರಣ್ಯ ನಂದ್‌ಸಿಂಗ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ಹಾಗೂ ಶಾಸಕ ಎ. ಮಂಜುನಾಥ್‌, ಕುಟುಂಬಕ್ಕೆ ಸಾಂತ್ವನ ಹೇಳಿ  ಸರ್ಕಾರದಿಂದ 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು.

ಮೂರು ವರ್ಷದ ಹೇಮಂತ್‌ ಎಂಬ ಮಗುವನ್ನು ಬಲಿ ತೆಗೆದಕೊಂಡ ನರಭಕ್ಷಕ ಚಿರತೆಯನ್ನು ಕಾರ್ಯಾಚರಣೆ ನಡೆಸಿ ಹಿಡಿಯಬೇಕೆಂದು ವಲಯ ಅರಣ್ಯಾಧಿಕಾರಿ ಕೆ.  ಪುಷ್ಪಲತಾ ಅವರಿಗೆ ಸೂಕ್ತ ನಿರ್ದೇ ಶಕ ನೀಡಿ ಆದೇಶಿಸಿದ್ದರು.

ಕಾರ್ಯ ಪ್ರವೃತ್ತರಾದ ಅರಣ್ಯಾಧಿಕಾರಿಗಳು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಸ್ಥಳೀಯವಾಗಿ ಜನರು ನರಭಕ್ಷಕ ಚಿರತೆ ಇದಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಮತ್ತೂಂದು ಚಿರತೆಯಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಏನೇ ಆದರೂ ಜನರಲ್ಲಿದ್ದ ಭೀತಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next