ಕಡೂರು: ತಾಲೂಕಿನ ಸಿಂಗಟಗೆರೆ ಸಮೀಪದ ತೋಟದ ಮನೆಯೊಂದರಲ್ಲಿ ಭಾನುವಾರ ಸಂಜೆ ಕರಡಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಾಯದಿಂದ ಸೆರೆ ಹಿಡಿಯಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತನುಜಕುಮಾರ್ ತಿಳಿಸಿದರು.
ಸಿಂಗಟಗೆರೆ ಗ್ರಾಮದ ಸಮೀಪದಲ್ಲಿರುವ ಬೀರಮ್ಮ ನಿಂಗಪ್ಪ ಎಂಬುವರ ತೋಟದ ಮನೆಯಲ್ಲಿ ನೂತನವಾಗಿ ಕಟ್ಟಿಸುತ್ತಿದ್ದ ಮನೆಯಲ್ಲಿ ಭಾನುವಾರ ಕರಡಿಯೊಂದು ಬಂದು ಸೇರಿಕೊಂಡಿತ್ತು. ಮಾಲೀಕ ಸಿಂಗಟಗೆರೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸ್ ಅಧಿಕಾರಿಗಳು ಅರಣ್ಯಾಧಿ ಕಾರಿಗಳಿಗೆ ಮಾಹಿತಿ ರವಾನಿಸಿದರು.
ಕೂಡಲೇ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಬಲೆಗಳನ್ನು ತೆಗೆದುಕೊಂಡು ಹೋಗಿ ತೀವ್ರ ಬಳಲಿದ್ದ ವಯೋವೃದ್ಧ ಕರಡಿಯನ್ನು ಇಲಾಖೆಯ ಸಿಬ್ಬಂದಿ ರ್ಗದವರು ಸೆರೆ ಹಿಡಿದಿರುವುದಾಗಿ ಮಾಹಿತಿ ನೀಡಿದರು. ಡಿಎಫ್‌ಒ ಜಗನಾಥ್ ಅವರ ಮಾರ್ಗದರ್ಶನದಲ್ಲಿ ಕರಡಿಯನ್ನು ಸೆರೆ ಹಿಡಿದು ಬೋನ್‌ಗೆ ಸೇರಿಸಿ ನಾಗರಹೊಳೆಯ ಬಂಡಿಪುರಕ್ಕೆ ಕಳುಹಿಸಲಾಗುವುದು ಎಂದರು.
ಕೆ.ಬಿದರೆ ಪಶುವೈದ್ಯರಾದ ಡಾ| ಪೃಥ್ವಿರಾಜ್ ಮತ್ತು ಪಿಳ್ಳೇನಹಳ್ಳಿಯ ಡಾ| ಅರುಣ್ ಅವರು ಕರಡಿಯ ಚಿಕಿತ್ಸೆ ನಡೆಸಿದ್ದು ಅಂದಾಜು 20 ವರ್ಷದ ಹೆಣ್ಣು ಕರಡಿಯಾಗಿದೆ. ಕರಡಿ ತೀವ್ರ ಬಳಲಿದ್ದು ದೇಹದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ ಎಂದರು.
ಇದನ್ನೂ ಓದಿ: ಬೀಚ್ ಪ್ರದೇಶಗಳಲ್ಲಿ ಮದ್ಯಪಾನ ಮಾಡಿದರೆ ಕಠಿಣ ಕ್ರಮ: ಮಂಗಳೂರು ಪೋಲಿಸ್ ಆಯುಕ್ತ ಶಶಿ ಕುಮಾರ್
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕರಡಿ ದಾಳಿ ನಡೆಸಿದ್ದು ಅರಣ್ಯ ಇಲಾಖೆಯ ಅಧಿ ಕಾರಿಗಳಿಗೆ ಗ್ರಾಮಸ್ಥರು ದೂರು ಸಹ ನೀಡಿದ್ದರು ಎಂಬ ಮಾಹಿತಿಯನ್ನು ಅರಣ್ಯಾ ಧಿಕಾರಿ ಹೇಳಿದರು. ಅರಣ್ಯ ಇಲಾಖಾ ಸಿಬ್ಬಂದಿಗಳಾದ ಸಂತೋಷ್, ಹರೀಶ್, ಫೈಯಾಜ್, ಸಿದ್ದಪ್ಪ, ಮಂಜುನಾಥ್, ಕೆರೆಸಂತೆ ಸಿದ್ದಪ್ಪ ಮತ್ತಿತರರು ಇದ್ದರು.