Advertisement

ರೈಲ್ವೆ ಇಲಾಖೆ ನೌಕರನ ಸೋಗಿನಲ್ಲಿ ಗಾಂಜಾ ಸಾಗಾಟ: ಆರೋಪಿ ಸೆರೆ

02:21 PM Sep 02, 2022 | Team Udayavani |

ಬೆಂಗಳೂರು: ರೈಲ್ವೆ ಇಲಾಖೆ ನೌಕರನ ಸೋಗಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

Advertisement

ಅಸ್ಸಾಂ ಮೂಲದ ಮೊಹಮ್ಮದ್‌ ಅಶ³ಕ್‌(40) ಬಂಧಿತ. ಆರೋಪಿಯಿಂದ 8 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಅಸ್ಸಾಂ ಮೂಲದ ಅಶ್ಪಕ್‌, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಅಸ್ಸಾಂನಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಪೊಲೀಸರು ಹೇಳಿದರು.

ರೈಲ್ವೆ ಇಲಾಖೆಯ ನೌಕರ ಎಂದು ನಕಲಿ ಗುರುತಿನ ಚೀಟಿ ಇಟ್ಟುಕೊಂಡಿದ್ದ ಆರೋಪಿ, ಅದನ್ನು ತೋರಿಸಿ ರೈಲ್ವೆ ಸಿಬ್ಬಂದಿಯನ್ನು ಯಾಮಾರಿಸುತ್ತಿದ್ದ. ರೈಲ್ವೆ ನಿಲ್ದಾ ಣದಲ್ಲಿರುವ ಸ್ವತ್ಛತಾ ಸಿಬ್ಬಂದಿ ಜತೆ ಒಡನಾಟ ಹೊಂದಿದ್ದ ಆರೋಪಿ, ಅವರ ಸಹಾಯದಿಂದಲೇ ಗಾಂಜಾ ಸಾಗಿಸುತ್ತಿದ್ದ. ಅಸ್ಸಾಂನಿಂದ ರೈಲಿನ ಶೌಚಾಲಯಗಳಲ್ಲಿ ಗಾಂಜಾ ಪೊಟ್ಟಣ ಬಚ್ಚಿಟ್ಟು ಬೆಂಗಳೂರಿಗೆ ತರಿಸುತ್ತಿದ್ದ. ಸಿಬ್ಬಂದಿ ಸಹಾಯದಿಂದ ಪೊಟ್ಟಣವನ್ನು ಆರೋಪಿ ಪಡೆಯುತ್ತಿದ್ದ. ಅದಕ್ಕಾಗಿ ಸಿಬ್ಬಂದಿಗೆ ಹಣ ನೀಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಇಬ್ಬರು ಪತ್ನಿಯರು: ಅಸ್ಸಾಂನಲ್ಲಿ ಒಬ್ಬ ಯುವತಿಯನ್ನು ಮದುವೆಯಾಗಿರುವ ಅಶ್ಪಕ್‌, ಗದಗದಲ್ಲಿ ಮತ್ತೊಂದು ಯುವತಿಯನ್ನು ಎರಡನೇ ಮದುವೆಯಾಗಿದ್ದಾ ನೆ. ಪರಸ್ಪರ ಇಬ್ಬರು ಪತ್ನಿಯರಿಗೆ ಈ ವಿಚಾರ ತಿಳಿಯದಂತೆ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಎರಡು ಕುಟುಂಬ ನಿರ್ವಹಣೆಗಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂದು ಆತ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next