Advertisement

ಸಾರಿಗೆ: ವೇತನ ರಹಿತ ರಜೆಗೆ ವಿರೋಧ

05:22 AM Jul 11, 2020 | Lakshmi GovindaRaj |

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳು, ಅಧಿಕಾರಿ ಮತ್ತು ನೌಕರರಿಗೆ ಒಂದು ವರ್ಷ ಕಾಲ ವೇತನ ರಹಿತ ರಜೆ ನೀಡಲು ಚಿಂತನೆ ನಡೆಸಿದ್ದು, ಈ ಸಂಬಂಧ ಕೆಎಸ್‌ಆರ್‌ಟಿಸಿಯು ಉಳಿದ ಮೂರು ಸಾರಿಗೆ  ನಿಗಮಗಳಿಗೆ ಅಭಿಪ್ರಾಯ ತಿಳಿಸುವಂತೆ ಪತ್ರ ಬರೆದಿದೆ. ಕೊರೊನಾ ಸೋಂಕು ಹರಡುತ್ತಿರುವುದರಿಂದ ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ

Advertisement

. ನೌಕರರ ಆರೋಗ್ಯ ಮತ್ತು ನಿಗಮಗಳ ಆರ್ಥಿಕ ದೃಷ್ಟಿಯಿಂದ ಷರತ್ತುಗಳೊಂದಿಗೆ  ಒಂದು ವರ್ಷದ ವಿಶೇಷ ರಜೆ ಮಂಜೂರು ಮಾಡಲು ಈ ಆಲೋಚನೆ ಮಾಡಲಾಗಿದೆ. ರಜೆ ಪಡೆದವರ ಹುದ್ದೆಯ ಹಕ್ಕು ನಿಗಮದಲ್ಲೇ ಉಳಿಯಲಿದೆ. ಸಿಬ್ಬಂದಿ ಕೋರಿದರೆ ಮಾತ್ರ ರಜೆ ಮಂಜೂರು ಮಾಡಲು ಉದ್ದೇಶಿಸಲಾಗಿದೆ. ಬಯಸಿದವರಿಗಷ್ಟೇ ರಜೆ ಮಂಜೂರು ಮಾಡಲಾಗುವುದು.

ಈ ಸಂಬಂಧ ಇನ್ನೂ ಆದೇಶ ಆಗಿಲ್ಲ. ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಂದ ಅಭಿಪ್ರಾಯ ಕೇಳಲಾಗಿದೆ’ ಎಂದು ಕೆಎಸ್‌ಆರ್‌  ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ. ಸಾರಿಗೆ ನಿಗಮಗಳ ಈ ಚಿಂತನೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ (ಸಿಐಟಿಯು)ದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು,

“ನೌಕರರು  ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಷಗಟ್ಟಲೇ ವೇತನ ಇಲ್ಲದ ಪರಿಸ್ಥಿತಿ ನಿರ್ಮಿಸಿದರೆ, ಅವರ ಕುಟುಂಬಗಳನ್ನು ಬೀದಿಗೆ ತಳ್ಳಿದಂತೆ ಆಗಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಎಚ್‌.ಡಿ. ರೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next