Advertisement
ಕೇಂದ್ರ ಸರಕಾರದಿಂದ ದೇಶದ ಎಲ್ಲ ಸ್ಮಾರ್ಟ್‌ಸಿಟಿ ನಗರಗಳಿಗೆ ನಡೆಸುವ ಈ ಸಮೀಕ್ಷೆಯಲ್ಲಿ ಸ್ಮಾರ್ಟ್‌ಸಿಟಿಗೆ ಆಯ್ಕೆಯಾದ ಕೆಲವೊಂದು ನಗರಗಳು ಮಾತ್ರ ಸ್ಪರ್ಧಿಸುತ್ತವೆ. ಅದರಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಲಿ. ಕೂಡ ಸೇರಿದೆ. ಈ ಕುರಿತಂತೆ ಮಂಗಳೂರು ಸ್ಮಾರ್ಟ್‌ಸಿಟಿ ಲಿ.ನಲ್ಲಿ ಈಗಾಗಲೇ ತಯಾರಿ ನಡೆಸಲಾಗುತ್ತಿದೆ. ಅಧ್ಯಯನಕ್ಕೆ ಪ್ರಮುಖ ಎನ್‌ಜಿಒಗಳನ್ನೂ ಬಳಸಲಾಗುತ್ತಿದ್ದು, ಇಲ್ಲಿನ ಸದಸ್ಯರು ನಗರದ ಜನ ಸಾಮಾನ್ಯರು, ಸಾರಿಗೆ ನಿರ್ವಾಹಕರು ಸಹಿತ ಪ್ರಮುಖ ವಲಯ ಒಳಗೊಂಡಂತೆ ಸಮೀಕ್ಷೆ ನಡೆಸುತ್ತಾರೆ. ಇದರಲ್ಲಿ ಬಂದ ಕುಂದು ಕೊರತೆಯನ್ನು ಆಧರಿಸಿ ಸ್ಟಾರ್ಟ್‌ಅಪ್‌ಗ್ಳಿಂದ ಪರಿಹಾರ ಕಂಡುಕೊಳ್ಳಲಾಗುತ್ತದೆ.
Related Articles
Advertisement
ಟ್ರಾನ್ಸ್‌ಪೊàರ್ಟ್4ಆಲ್ ಎಂಬ ಸಮೀಕ್ಷೆಗೆ ಪ್ರತ್ಯೇಕ ಟಾಸ್ಕ್ಫೋರ್ಸ್ ರಚನೆ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ, ಪೊಲೀಸ್/ಟ್ರಾಫಿಕ್ ಪೊಲೀಸ್, ಜಿಲ್ಲಾ ಸಾರಿಗೆ ಇಲಾಖೆ, ಸಿಟಿ ಬಸ್ ಪ್ರಾಧಿಕಾರ, ಮೆಟ್ರೋ ರೈಲ್ ಪ್ರಾಧಿಕಾರ, ಉಪನಗರ ರೈಲ್ವೇ ಪ್ರಾಧಿಕಾರ, ರೋಡ್ ಓನಿಂಗ್ ಏಜೆನ್ಸಿ, ಜಿಲ್ಲಾಡಳಿತ, ಶೈಕ್ಷಣಿಕ, ಸಂಶೋಧನ ಸಂಸ್ಥೆಗಳು, ಎನ್‌ಜಿಒ/ಸಾಮಾಜಿಕ ಉದ್ಯಮಗಳು, ಆಟೋ/ಇ-ರಿಕ್ಷಾ ಯೂನಿ ಯನ್ ಸದಸ್ಯರು ಈ ಟಾಸ್ಕ್ಪೋರ್ಸ್ ನಲ್ಲಿ ಇರುತ್ತಾರೆ. ಇದರಲ್ಲಿರುವ ಸದಸ್ಯರು ನಗರದ ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಲು ಸಮೀಕ್ಷೆ, ಸಮಾಲೋಚನೆ ನಡೆಸುತ್ತಾರೆ. ಸಮಸ್ಯೆಗಳ ಬಗ್ಗೆ ಸ್ಥೂಲ ಅಧ್ಯಯನ ನಡೆಸಿ, ಅಗತ್ಯಗಳನ್ನು ಪಟ್ಟಿ ಮಾಡಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಈ ಅಧ್ಯಯನ ಪರಿಶೀಲಿಸಿದ ಬಳಿಕ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುತ್ತದೆ.
ಏನಿದು ಟ್ರಾನ್ಸ್‌ಪೋರ್ಟ್ 4ಆಲ್? :
ನಗರದಲ್ಲಿರುವ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್‌ಸಿಟಿ ನಗರಗಳಿಗೆ ಆಯೋಜಿಸಿರುವ ಅಭಿಯಾನವೇ “ಟ್ರಾನ್ಸ್‌ಪೋರ್ಟ್4ಆಲ್’. ಎನ್‌ಜಿಒ ಮುಖೇನ ಸರ್ವೇ ಮಾಡಿ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುತ್ತದೆ. ಆಗಸ್ಟ್ 21ಕ್ಕೆ ಈ ಸರ್ವೇ ಪೂರ್ಣಗೊಳ್ಳಲಿದ್ದು, ಸ್ಮಾರ್ಟ್ ಸಿಟಿ ವತಿಯಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಮೀಕ್ಷೆಯ ಸಾರಾಂಶವನ್ನು ಕಳುಹಿಸಲಾಗುತ್ತದೆ. ಯೋಜನಾ ವರದಿಯ ಆಧಾರದಲ್ಲಿ ಸ್ಮಾರ್ಟ್ ಸಿಟಿ ನಗರಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತದೆ.
ಸ್ಮಾರ್ಟ್‌ಸಿಟಿ ನಗರದಲ್ಲಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು “ಟ್ರಾನ್ಸ್‌ಪೊàರ್ಟ್4ಆಲ್’ ಎಂಬ ಸಮೀಕ್ಷೆ ಹಮ್ಮಿಕೊಂಡಿದೆ. ಅದರಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಲಿ. ಕೂಡ ಭಾಗವಹಿಸುತ್ತಿದ್ದು, ಈ ಸರ್ವೇ ಕುರಿತಂತೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. –ಪ್ರಶಾಂತ್ ಕುಮಾರ್ ಮಿಶ್ರಾ, ಸ್ಮಾರ್ಟ್‌ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ
ನವೀನ್ ಭಟ್ ಇಳಂತಿಲ