Advertisement

ಮಾರಾಟಕ್ಕಿವೆ ಸಾರಿಗೆ ದತ್ತಾಂಶ!

12:51 AM Jul 11, 2019 | Team Udayavani |

ಹೊಸದಿಲ್ಲಿ: ಕೇಂದ್ರ ಸಾರಿಗೆ ಇಲಾಖೆಯು ತನ್ನ ನಿಯಂತ್ರಣದಲ್ಲಿರುವ ದೇಶವ್ಯಾಪಿ ವಾಹನಗಳ ನೋಂದಣಿ ಮಾಹಿತಿಯ ಕಣಜವಾದ “ವಾಹನ್‌’ ಹಾಗೂ ದೇಶವ್ಯಾಪಿ ಚಾಲನಾ ಪರವಾನಗಿ ಮಾಹಿತಿ ಕಣಜವಾದ “ಸಾರಥಿ’ ಡೇಟಾಬೇಸ್‌ಗಳಲ್ಲಿನ ಸಾರ್ವಜನಿ ಕರ ಮಾಹಿತಿಗಳನ್ನು (ದತ್ತಾಂಶಗಳನ್ನು) 67 ಖಾಸಗಿ ಕಂಪೆನಿಗಳಿಗೆ ಹಾಗೂ 32 ಕೇಂದ್ರ ಸರ್ಕಾರಿ ಇಲಾಖೆಗಳಿಗೆ ಮಾರಾಟ ಮಾಡಿ ಈವರೆಗೆ 65 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ ಎಂದು ಹೇಳಿದೆ.

Advertisement

ಸಚಿವರೇ ಕೊಟ್ಟ ಉತ್ತರವಿದು!: ರಾಜ್ಯಸಭೆ ಯಲ್ಲಿನ ಕಾಂಗ್ರೆಸ್‌ ಸಂಸದ ಹುಸೇನ್‌ ದಳವಾಯಿ ಅವರು, ಸಾರಿಗೆ ಇಲಾಖೆಯಿಂದ ದತ್ತಾಂಶ ಮಾರಾಟದಿಂದ ಸರಕಾರ ಗಳಿಸಿರುವ ಆದಾಯದ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದಕ್ಕೆ ಉತ್ತರಿಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ದತ್ತಾಂಶ ಮಾರಾಟವನ್ನು ಖಚಿತಪಡಿಸಿದ್ದಾರೆ.

ಷರತ್ತುಗಳೊಂದಿಗೆ ಮಾರಾಟ “ನ್ಯಾಷನಲ್‌ ಇನಾ#ರ್ಮೇಟಿಕ್ಸ್‌ ಸೆಂಟರ್‌’ (ಎನ್‌ಐಎಸ್‌) ಸಹಾಯದಿಂದ ಕಾರ್ಯ ನಿರ್ವಹಿಸಲಾ ಗುತ್ತಿರುವ ವಾಹನ್‌ ಹಾಗೂ ಸಾರಥಿ ಡೇಟಾ ಬೇಸ್‌ಗಳಲ್ಲಿ ಕ್ರಮವಾಗಿ 25 ಕೋಟಿ ಹಾಗೂ 15 ಕೋಟಿ ದತ್ತಾಂಶಗಳು ಸಂಗ್ರಹವಾಗಿವೆ. ಈ ದತ್ತಾಂಶಗಳನ್ನು ವಿವಿಧ ಕಂಪೆನಿಗಳಿಗೆ ಷರತ್ತುಬದ್ಧವಾಗಿಯೇ ನೀಡಲಾಗಿದೆ. ಶೈಕ್ಷಣಿಕ ಸಂಸ್ಥೆಗಳಿಗೂ ನೀಡಲಾಗಿರುವ ದತ್ತಾಂಶಗಳು ಕೇವಲ ಸಂಶೋಧನೆಗಾಗಿ ಮಾತ್ರವೇ ಬಳಸುವಂತೆ ತಾಕೀತು ಮಾಡಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ, ಸಾರ್ವಜನಿಕರ ಮಾಹಿತಿಗಳನ್ನು ಹಂಚುವ ಮೂಲಕ ಅವರ ಖಾಸಗಿತನಕ್ಕೆ ಚ್ಯುತಿ ತಂದಂತೆ ಆಗುವುದಿಲ್ಲವೇ ಎಂಬ ನೈತಿಕ ಪ್ರಶ್ನೆಯೂ ಎದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next