Advertisement
ಇದು ಆದಷ್ಟು ಶೀಘ್ರದಲ್ಲಿ ಆರಂಭವಾದರೆ ಕುಂದಾಪುರ, ಬೈಂದೂರು ತಾಲೂಕಿನ ಜನತೆ ಉಡುಪಿಗೆ ಬಂದು ಹೋಗುವ ಒತ್ತಡ ತಪ್ಪಲಿದೆ. ಕುಂದಾಪುರ ಭಾಗಕ್ಕೆ ಆರ್‌ಟಿಒ ಕಚೇರಿ ಬೇಕೆನ್ನುವುದು ಸುಮಾರು 4 ವರ್ಷಗಳ ಹಿಂದಿನ ಬೇಡಿಕೆಯಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರೂ ಉತ್ಸುಕತೆ ವಹಿಸಿದ್ದಾರೆ.
ವಾರ್ಷಿಕ ಸರಾಸರಿ 5,413 ವಾಹನಗಳಂತೆ ಒಟ್ಟು 1,29,900 ವಾಹನಗಳು ಕುಂದಾಪುರ, ಬೈಂದೂರು ವ್ಯಾಪ್ತಿಯಲ್ಲಿ ನೋಂದಣಿಯಾಗಿದ್ದು, ಎಆರ್‌ಟಿಒ ಕಚೇರಿ ಆರಂಭಕ್ಕೆ ಬೇಕಾದ ಮಾನದಂಡಗಳಿಗೆ ಅನುಗುಣವಾಗಿದೆ. ಈಗಾಗಲೇ ರಾಜ್ಯದ 70 ಕಡೆ ಆರ್‌ಟಿಒ ಹಾಗೂ ಉಪಕಚೇರಿಗಳಿವೆ. ಮಾನದಂಡವೇನು?
ಆರ್‌ಟಿಒ ಉಪ ಕಚೇರಿ ನಿರ್ಮಾಣಕ್ಕೆ ಆ ಭಾಗದಲ್ಲಿ ನೋಂದಣಿಯಾಗುತ್ತಿರುವ ವಾಹನಗಳ ಸಂಖ್ಯೆ ಹಾಗೂ ಆದಾಯ ಗಳನ್ನು ಪರಿಗಣನೆಗೆ ತೆಗೆದುಕೊಳ್ಳ ಲಾಗುತ್ತದೆ. ಅದರಂತೆ ಬೈಂದೂರು ಹಾಗೂ ಕುಂದಾಪುರ ಭಾಗದ ಸಾಧನೆ ಉತ್ತಮವಾಗಿಯೇ ಇದೆ. ಈಗಾಗಲೇ ಆರ್‌ಟಿಒ ಸೇವೆಗಳೆಲ್ಲ ಆನ್‌ಲೈನ್ ಮೂಲಕ ನಡೆಯು ತ್ತಿರುವುದರಿಂದ ಈ ಭಾಗದಲ್ಲಿ ಕಚೇರಿ ನಿರ್ಮಾಣಗೊಂಡರೆ ಜನರು ಚಾಲನಾ ಪರೀಕ್ಷೆಗಾಗಿ ವಿನಾಕಾರಣ ಉಡುಪಿಯವರೆಗೆ ಆಗಮಿಸುವುದು ತಪ್ಪಲಿದೆ.
Related Articles
ಕುಂದಾಪುರದಲ್ಲಿ ಆರ್‌ಟಿಒ ಉಪಕಚೇರಿ ನಿರ್ಮಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಾರಿ ಅದಕ್ಕೆ ಅನುಮೋದನೆ ಲಭಿಸುವ ಸಾಧ್ಯತೆಗಳಿವೆ.
-ಜೆ.ಪಿ.ಗಂಗಾಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ
Advertisement
ಉಡುಪಿಯಲ್ಲಿ ಸಿಬಂದಿ ಕೊರತೆಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆ ಯಲ್ಲಿ ಶೇ.50ಕ್ಕೂ ಅಧಿಕ ಮಂದಿ ಸಿಬಂದಿಯ ಕೊರತೆಯಿದೆ. ಮಂಜೂರಾಗಿರುವ 36 ಹುದ್ದೆಗಳಲ್ಲಿ 14 ಮಂದಿಯಷ್ಟೇ ಕಾರ್ಯ ನಿರತರಾಗಿದ್ದಾರೆ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಹಿರಿಯ ಮೋಟಾರು ವಾಹನ ನಿರೀಕ್ಷಕರು, ಲೆಕ್ಕ ಅಧೀಕ್ಷಕರು, ಗ್ರೂಪ್ ಡಿ ನೌಕರರ ಎಲ್ಲ ಹುದ್ದೆಗಳೂ ಖಾಲಿಯಾಗಿವೆ. ಹಾಗೂ ಇತರ ಹುದ್ದೆ ಗಳಿಗೂ ಮಂಜೂರಾತಿಯಾದಷ್ಟು ಮಂದಿ ಕಾರ್ಯನಿರತರಾಗಿಲ್ಲ. ಈ ನಡುವೆ ಕುಂದಾಪುರದಲ್ಲಿ ಉಪ ಕಚೇರಿ ನಿರ್ಮಾಣಗೊಂಡರೆ ಮತ್ತಷ್ಟು ಸಿಬಂದಿಯನ್ನು ನಿಯೋಜಿಸುವ ಅಗತ್ಯ ಎದುರಾಗುತ್ತದೆ.