Advertisement
ವಿಜಯಪುರದ ಗ್ಯಾಂಗ್‌ಮನ್ ರಾಠೊಡ ಎಂಬಾತನೊಂದಿಗೆ ಮಧ್ಯಪ್ರದೇಶದ ಕಾರ್ಮಿಕರು ಷರತ್ತುಗಳೊಂದಿಗೆ ಮುಧೋಳ ತಾಲೂಕಿನ ಪಿಎಂ ಬುದ್ನಿ ಗ್ರಾಮದಲ್ಲಿ ಕಬ್ಬು ಕಟಾವು ಮಾಡಲು ಆಗಮಿಸಿದ್ದರು. ನಿಗದಿತ ಅವಧಿ ಮುಗಿದು 21 ದಿನ ಕಳೆದರೂ ಮಧ್ಯಪ್ರದೇಶದಕ್ಕೆ ಕಳುಹಿಸಿಕೊಡದೇ ಎಲ್ಲ ಕಾರ್ಮಿಕರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಂಡಿರುವ ವೇತನ ಕೂಡ ಕೊಡದೇ ಸತಾಯಿಸುತ್ತಿದ್ದ ಗ್ಯಾಂಗ್ ಮನ್ ತಲೆಮರೆಸಿಕೊಂಡಿದ್ದ.
Related Articles
Advertisement
ಉಪ ವಿಭಾಗಾಧಿ ಕಾರಿ ಡಾ| ಸಿದ್ದು ಹುಲ್ಲೋಳ್ಳಿ ನೇತೃತ್ವದಲ್ಲಿ ಬುಧವಾರ ಖಾಸಗಿ ವಾಹನದ ಮೂಲಕ ಸರಕು ಸಾಮಾನುಗಳೊಂದಿಗೆ ಕಬ್ಬು ಕಟಾವಿಗೆ ಬಂದಿದ್ದ ಎಲ್ಲ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ಮುಧೋಳ ಎಎಸೈ ಕೋಲಾರ, ಓರ್ವ ಮಹಿಳೆ ಮತ್ತು ಪುರುಷ ಆರಕ್ಷಕ, ಕಾರ್ಮಿಕ ಇಲಾಖೆ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿ ಸೇರಿದಂತೆ 5 ಜನರ ತಂಡ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ನೀಡಿ ಅವರು ಕೂಡ ಮಧ್ಯಪ್ರದೇಶಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಮುಧೋಳ ತಹಶೀಲ್ದಾರ್ ಸಂಗಮೇಶ ಬಾಡಗಿ, ಶಿರಸ್ತೇದಾರ್ ನಿಂಗಪ್ಪ ಬಿರಡಿ, ಕಂದಾಯ ನಿರೀಕ್ಷಕ ಬಿ.ಎಸ್. ಜಿಗಳೂರ, ಚುನಾವಣೆ ಇಲಾಖೆ ಅ ಧಿಕಾರಿ ಸಂತೋಷ ರಬಕವಿ, ಮೋಹನ ಸಬರದ ಸೇರಿದಂತೆ ಇತರರಿದ್ದರು.
ಪತ್ರಕರ್ತರ ಸಹಕಾರ-ವ್ಯಾಪಾರಸ್ಥರ ದಾಸೋಹನಗರದ ತಾಲೂಕು ಆಡಳಿತ ಸೌಧದ ಕೆಳ ಅಂತಸ್ತಿನಲ್ಲಿ ಮಧ್ಯಪ್ರದೇಶದ ಚಿಕ್ಕಮಕ್ಕಳ ಸಹಿತ 25 ಜನ ಕಬ್ಬು ಕಟಾವು ಮಾಡುವ ಕಾರ್ಮಿಕರು ಕಳೆದ 5 ದಿನದಿಂದ ವಾಸವಾಗಿದ್ದು, 4 ದಿನದವರೆಗೆ ತಾಲೂಕು ಆಡಳಿತದಿಂದ ಊಟದ ವ್ಯವಸ್ಥೆ ಮಾಡಿಲಾಗಿತ್ತು. ಮಂಗಳವಾರ ಕಾರ್ಮಿಕರಿಗೆ ಊಟದ ವ್ಯವಸ್ಥೆಯಲ್ಲಿ ತೊಂದರೆಯಾದ ಹಿನ್ನೆಲೆಯಲ್ಲಿ ಮಕ್ಕಳು ಹೊಟ್ಟೆ ಹಸಿವಿನಿಂದ ರೋದಿಸುತ್ತಿದ್ದರು. ಇದನ್ನು ಗಮನಿಸಿದ ಜಮಖಂಡಿ ನಗರದ ಕೆಲ ಪತ್ರಕರ್ತರು ದಾನಿಗಳ ಮೊರೆ ಹೋಗಿ ಸಮಸ್ಯೆ ತಿಳಿಸಿದಾಗ ಶಬ್ಬೀರ ಬಾಗವಾನ, ಮುನ್ನಾ ನದಾಫ್, ಮೀರಾ ಝಾರೆ, ಯಾಸೀನ್ ಸಪ್ತಸಾಗರ ಉಚಿತವಾಗಿ ಬಾಳೆ, ಚಿಕ್ಕು, ಸೇಬು ಹಣ್ಣು, ಭಜ್ಜಿ, ಮಸಾಲಾ ರೈಸ್ ನೀಡಿ ಮಾನವೀಯತೆ ಮೆರೆದರು.