Advertisement

ಕೇರಳದ ಮೊದಲ ತೃತೀಯ ಲಿಂಗಿ ಆರ್‌ಜೆ ಅನನ್ಯಾ ಕುಮಾರಿ ಆತ್ಮಹತ್ಯೆ

07:35 PM Jul 21, 2021 | Team Udayavani |

ತಿರುವನಂತಪುರ/ಕೊಚ್ಚಿ: ಕೇರಳದ ಮೊದಲ ತೃತೀಯ ಲಿಂಗಿ ಅನನ್ಯಾ ಕುಮಾರಿ ಅಲೆಕ್ಸಿ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಕೊಚ್ಚಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದದ್ದು ಪತ್ತೆಯಾಗಿದೆ. ವಾರದ ಹಿಂದಷ್ಟೇ ಅವರು, ಲಿಂಗ ಬದಲಾವಣೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಅದರಲ್ಲಿ ಲೋಪ ಉಂಟಾಗಿದೆ ಎಂದು ಆರೋಪ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಅನನ್ಯಾ ಕುಮಾರಿ ಅವರು ತೃತೀಯ ಲಿಂಗಿ ಸಮುದಾಯದ ಮೊದಲ ಆರ್‌ಜೆ ಆಗಿದ್ದರು ಮತ್ತು ಇತ್ತೀಚೆಗೆ ಮುಕ್ತಾಯವಾದ ವಿಧಾನಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಮೊದಲ ತೃತೀಯ ಲಿಂಗಿಯೂ ಅವರಾಗಿದ್ದರು.

ಇದನ್ನೂ ಓದಿ :ಬೆಂಬಲ ಬೆಲೆ ಪಡೆದ ರೈತರ ಪ್ರಮಾಣ ಅಗಾಧ ಹೆಚ್ಚಳ : ಕೇಂದ್ರ ಆಹಾರ ಸಚಿವಾಲಯ

Advertisement

Udayavani is now on Telegram. Click here to join our channel and stay updated with the latest news.

Next