Advertisement

ಸಾವರಿನ್‌ ಶುಗರ್ ಅಪೆಕ್ಸ್‌ ಬ್ಯಾಂಕಿಗೆ ಹಸ್ತಾಂತರ

01:31 PM Apr 09, 2022 | Team Udayavani |

ತೇರದಾಳ: ಸರಕಾರದ ಆಧೀನದಲ್ಲಿದ್ದ ತೇರದಾಳ ಸಾವರಿನ್‌ ಶುಗರ್ಸ್ ಅನ್ನು ಶುಕ್ರವಾರ ತಹಶೀಲ್ದಾರ್‌ ಸಂಜಯ ಇಂಗಳೆ ನೇತೃತ್ವದ ತಾಲೂಕು ಆಡಳಿತ ಅಪೆಕ್ಸ್‌ ಅಧ್ಯಕ್ಷ ಬೆಳ್ಳಿ ಪ್ರಕಾಶ ಸಮ್ಮುಖದಲ್ಲಿ ಅಧಿಕಾರಿಗಳಿಗೆ ಹಸ್ತಾಂತರಿಸಿತು.

Advertisement

ಸನ್‌ 2018-19ನೇ ಸಾಲಿನಿಂದ ರೈತರಿಗೆ ಬಾಕಿ ಹಣ ನೀಡಬೇಕಾಗಿದ್ದ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಅಪೆಕ್ಸ್‌ ಬ್ಯಾಂಕಿನವರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಅಪೆಕ್ಸ್‌ ಬ್ಯಾಂಕಿನವರು ರೈತರ 20 ಕೋಟಿ ಬಾಕಿ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಿದ್ದರು.

ಆ ಹಣವನ್ನು ಕೂಡ 1628 ರೈತರ ಪೈಕಿ ಶೇ. 90ರಷ್ಟು ರೈತರ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಈಗ ಸಾವರಿನ್‌ ಶುಗರ್ನ ಚರಾಸ್ಥಿ ಹಾಗೂ ಸ್ಥಿರಾಸ್ತಿಯನ್ನು ಅಪೆಕ್ಸ್‌ ಬ್ಯಾಂಕಿನವರಿಗೆ ಹಸ್ತಾಂತರಿಸುತ್ತಿದ್ದೇವೆ ಎಂದು ತಹಶೀಲ್ದಾರ್‌ ಸಂಜಯ ಇಂಗಳೆ ತಿಳಿಸಿದರು.

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿ ಪ್ರಕಾಶ, ಬಾಗಲಕೋಟೆ ಡಿಸಿಸಿ ಬ್ಯಾಂಕಿನ ನಾಮ ನಿರ್ದೇಶಿತ ಸದಸ್ಯ, ಶಾಸಕ ಸಿದ್ದು ಸವದಿ, ಉಪತಹಶೀಲ್ದಾರ್‌ ಶ್ರೀಕಾಂತ ಮಾಯನ್ನವರ, ಎ.ಆರ್‌. ತಾಂಬೊಳಿ, ಚಂದ್ರಕಾಂತ ಹೊಸಮನಿ, ಭುಜಬಲ್ಲಿ ಕೆಂಗಾಲಿ, ಮಗೆಪ್ಪ ತಾರದಾಳ, ನಿಂಗಪ್ಪ ಮಲಾಬದಿ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next