Advertisement

Udupi ಅಧಿಕ ಲಾಭಾಂಶದ ಆಸೆ; ಲಕ್ಷಾಂತರ ರೂ. ಕಳೆದುಕೊಂಡರು

12:37 AM Jun 01, 2024 | Team Udayavani |

ಉಡುಪಿ: ಹೆಚ್ಚಿನ ಲಾಭಾಂಶದ ಆಸೆಯಿಂದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ.ಕಳೆದುಕೊಂಡ ಘಟನೆ ನಡೆದಿದೆ.

Advertisement

ಉಡುಪಿಯ ನರಸಿಂಹ ಅವರಿಗೆ ಅಪರಿಚಿತ ವ್ಯಕ್ತಿ ಟ್ರೆಡೀಂಗ್‌ ವ್ಯವಹಾರದ ಬಗ್ಗೆ ಲಿಂಕ್‌ ಕಳುಹಿಸಿದ್ದು , ಅದನ್ನು ಕ್ಲಿಕ್‌ ಮಾಡಿದಾಗ MARS app ಆ್ಯಪ್‌ ಓಪನ್‌ ಆಗಿದೆ. ಇದರಲ್ಲಿ ಟ್ರೇಡಿಂಗ್‌, ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಹಣ ಹೂಡಿಕೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನು ನಂಬಿದ ನರಸಿಂಹ ಅವರು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ 1,88,800 ರೂ.ಗಳನ್ನು ಡೆಪಾಸಿಟ್‌ ಮಾಡಿಸಿಕೊಂಡಿದ್ದು, ಅನಂತರ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ನೀಡದೆ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇಟಿಂಗ್‌ ಟಾಸ್ಕ್ ನೆಪದಲ್ಲಿ ವಂಚನೆ
ಉಡುಪಿಯ ಹೇಮಾ ಪ್ರಕಾಶ್‌ ಅವರ ವಾಟ್ಸಾಪ್‌ಗೆ ಕಾಯಿನ್‌ ಡಿಸಿ ಎಕ್ಸ್‌ ಕಂಪೆನಿ ಎಲ್‌ಆರ್‌ನಿಂದ ಲಿಂಕ್‌ ಬಂದಿದ್ದು, ಆ ಲಿಂಕ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಇದ್ದು ಆನ್‌ಲೈನ್‌ ಮಾರ್ಕೆಟಿಂಗ್‌ ಇದೆ ಎಂದು ತಿಳಿಸಲಾಗಿತ್ತು. ಅನಂತರ ಗೂಗಲ್‌ ಲಿಂಕ್‌ ಕಳುಹಿಸಿ ಅದರಲ್ಲಿ ಕೆಲವೊಂದು ಹೊಟೇಲ್‌ಗ‌ಳ ಲಿಂಕ್‌ ನೀಡಿ ರೇಟಿಂಗ್‌ ಕೊಡುವ ಟಾಸ್ಕ್ ಮೇಲೆ 6 ಟಾಸ್ಕ್ ಗೆ 200 ರೂ. ಗೂಗಲ್‌ ಪೇನಲ್ಲಿ ಹಣ ಹಾಕಿದ್ದು ಅನಂತರ ಮೇ 12ರಂದು Coin DCX Task ಲಿಂಕ್‌ ಬಂದಿದ್ದು ಅದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುವುದಾಗಿ ಚಾರ್ಟ್‌ ತೋರಿಸಿ ಹೇಮಾ ಪ್ರಕಾಶ್‌ ಅವರಿಂದ ಒಟ್ಟು 3,12,970 ರೂ.ಗಳನ್ನು ಆರೋಪಿಗಳು ತಮ್ಮ ಅಕೌಂಟ್‌ಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಉಂಟು ಮಾಡಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕ ಲಾಭಾಂಶ: 120 ಮಂದಿಗೆ ವಂಚನೆ
ಮಂಗಳೂರು: ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ಹೂಡಿಕೆ ಮಾಡಿಸಿ 120 ಮಂದಿಗೆ ಒಟ್ಟು 55,81,582 ರೂ. ವಂಚಿಸಿರುವ ಬಗ್ಗೆ ಬಲ್ಮಠದ ಕೆನರಾ ಫಿಶ್‌ ಆ್ಯಂಡ್‌ ಫಾರ್ಮರ್ಸ್‌ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂಸ್ಥೆಯ ರೀಜನಲ್‌ ಮ್ಯಾನೇಜರ್‌ ಮತ್ತು ಬ್ರಾಂಚ್‌ ಮ್ಯಾನೇಜರ್‌ ಸಂಪರ್ಕಿಸಿ ಅಧಿಕ ಲಾಂಭಾಂಶ ನೀಡುವುದಾಗಿ ಭರವಸೆ ನೀಡಿ ಹೂಡಿಕೆ ಮಾಡಿಸಿದ್ದರು. ಹಣದ ಬಾಂಡ್‌ ಅವಧಿ ಮುಕ್ತಾಯವಾದರೂ ಹೂಡಿದ ಹಣವನ್ನಾಗಲಿ, ಲಾಭಾಂಶವನ್ನಾಗಲಿ ನೀಡದೆ ವಂಚಿಸಿದ್ದಾರೆ ಎಂದು ವಂಚನೆಗೊಳಗಾದವರು ಕದ್ರಿ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next