Advertisement
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಅವರು, ಜಿಲ್ಲೆಯ 230 ಗ್ರಾ.ಪಂ.ವ್ಯಾಪ್ತಿಯಲ್ಲಿ 1668 ಅಂಗನವಾಡಿ ಕೇಂದ್ರಗಳನ್ನು ಪ್ಲಾಸ್ಟಿಕ್ ಸಂಗ್ರಹ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಆದರೆ ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಸಂಗ್ರಹಗೊಂಡ ಕಸ ಅಲ್ಲೇ ರಾಶಿ ಬಿದ್ದುಕೊಂಡಿದೆ ಎಂಬ ಆರೋಪಗಳಿವೆ. ರೆಖ್ಯಾ ಗ್ರಾ.ಪಂ.ವ್ಯಾಪ್ತಿಯ ಅಂಗನವಾಡಿಯೊಂದಕ್ಕೆ ಭೇಟಿ ನೀಡಿದಾಗ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಇಒ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಕೂಡ ಕಸ ಸಂಗ್ರಹಕ್ಕೆ ಹಿಂಜರಿಯಬಾರದು ಎಂದು ಸೂಚನೆ ನೀಡಿದರು.
ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 5490 ಮನೆಗಳಿಗೆ ಶೌಚಾಲಯ ಇಲ್ಲ ಎಂಬುದು ವರದಿಯಾಗಿದೆ. ಇದರಲ್ಲಿ 3230 ಮನೆಯ ದಾಖಲೆಗಳು ಸರಿಯಾಗಿದ್ದು ಶೌಚಾಲಯ ನೀಡಲು ಅರ್ಹವಾಗಿವೆ. ಇದರಲ್ಲಿ ಬೆಳ್ತಂಗಡಿಯ 544ರಲ್ಲಿ 404, ಪುತ್ತೂರಿನ 770ರಲ್ಲಿ 77, ಸುಳ್ಯದ 507ರಲ್ಲಿ 136, ಮಂಗಳೂರಿನಲ್ಲಿ 1421ರಲ್ಲಿ 97, ಬಂಟ್ವಾಳದ 579ರಲ್ಲಿ 7 ಶೌಚಾಲಯಗಳು ಮಾತ್ರ ಪೂರ್ತಿಯಾಗಿರುವುದಕ್ಕೆ ಸಿಇಒ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Related Articles
ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿಯ ಚಿಕಿತ್ಸೆಯ ಕುರಿತು ಸರಕಾರಿ ವೈದ್ಯರೊಬ್ಬರು ನಿರ್ಲಕ್ಷé ವಹಿಸಿ ದ್ದಾರೆ ಎಂಬ ಆರೋಪಕ್ಕೆ ಏನು ಕ್ರಮಕೈಗೊಳ್ಳಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್ ಪ್ರಶ್ನಿಸಿದಾಗ, ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಅದನ್ನು ತನಿಖೆ ನಡೆಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖಾ ಅಧಿಕಾರಿ ಉತ್ತರಿಸಿದರು.
Advertisement
ಪರಿಸರ ಎಂಜಿನಿಯರ್ ಅವಶ್ಯಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಜಿ.ಪಂ.ಗೆ ಪರಿಸರ ಎಂಜಿನಿಯರ್‌ಗಳ ಆವಶ್ಯಕತೆ ಇದೆ. ಹೀಗಾಗಿ ಪಾಲಿಕೆಗೆ ನೀಡುವಂತೆ ಜಿ.ಪಂ.ಗಳಿಗೂ ಪರಿಸರ ಎಂಜಿನಿಯರ್‌ಗಳನ್ನು ನೀಡುವಂತೆ ಸರಕಾರಕ್ಕೂ ಮನವಿ ಮಾಡಲಾಗಿದೆ ಎಂದು ಸಿಇಒ ತಿಳಿಸಿದರು. ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ 5ರಂತೆ ತಲಾ 30 ಲಕ್ಷ ರೂ.ಗಳಲ್ಲಿ ಶೌಚಾಲಯವನ್ನೊಳಗೊಂಡ ಸಮುದಾಯ ಕಾಂಪ್ಲೆಕ್ಸ್ ನಿರ್ಮಾಣವಾಗಲಿದ್ದು, ಸ್ಥಳ ಗುರುತಿಸಿ ಪ್ರಸ್ತಾವನೆ ಕಳುಹಿಸಲು ಸೂಚಿಸಿದರು. ಜಾಲೂÕರು ಅಂಗನವಾಡಿ ಕಟ್ಟಡ ಕಾಮಗಾರಿಯ ಕುರಿತು ಸಿಇಒ ಅಸಮಾಧಾನ ವ್ಯಕ್ತ ಪಡಿ ಸಿದರು. ಜತೆಗೆ ಜಿ.ಪಂ. ಅಧ್ಯಕ್ಷರ ವಿವೇಚನಾ ಅನುದಾನದ ಕುಡಿಯುವ ನೀರಿನ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಸೂಚನೆ ನೀಡಲಾಯಿತು. “ಉದಯವಾಣಿ’ ವರದಿ ಪ್ರಸ್ತಾವ
ಜನಶಿಕ್ಷಣ ಸೇವಾ ಟ್ರಸ್ಟ್‌ನ ಕೃಷ್ಣ ಮೂಲ್ಯ ಮಾತನಾಡಿ, ಕೆಲವೊಂದು ಮನೆಗಳಲ್ಲಿ ಶೌಚಾಲಯವಿಲ್ಲದೇ ಇರುವುದು ಸಾಮಾಜಿಕ ಲೆಕ್ಕ ಪರಿಶೋಧನೆಗೂ ಸಿಕ್ಕಿಲ್ಲ. ಶೌಚಾಲಯ ಇಲ್ಲದೇ ಇರುವುದನ್ನು ಮರೆಮಾಚುವ ಕೆಲಸವೂ ನಡೆಯುತ್ತಿದೆ. ಕನ್ಯಾನ ಭಾಗದಲ್ಲಿ ಅಧಿಕಾರಿಗಳ ಲೆಕ್ಕಕ್ಕೆ ಸಿಗದೇ ಇರುವುದನ್ನು ಸಾಮಾನ್ಯ ಮಹಿಳೆಯೊಬ್ಬರು ಪತ್ತೆ ಹಚ್ಚಿದ್ದಾರೆ. ಈ ಕುರಿತು “ಉದಯವಾಣಿ’ ಪತ್ರಿಕೆಯಲ್ಲೂ ವರದಿ ಪ್ರಕಟಗೊಂಡಿದೆ. ಹೀಗಾಗಿ 12 ವರ್ಷಗಳ ಹಿಂದೆ ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಜಿಲ್ಲೆ ಇನ್ನಾದರೂ ಬಯಲು ಶೌಚ ಮುಕ್ತವಾಗಿಸುವತ್ತ ಎಲ್ಲರೂ ಪ್ರಯತ್ನಿಸಬೇಕಿದೆ ಎಂದು ಅಭಿಪ್ರಾಯ ತಿಳಿಸಿದರು.