Advertisement

ಸೋಂಕಿತರನ್ನು ಕೇರ್‌ ಸೆಂಟರ್‌ಗೆ ವರ್ಗಾಯಿಸಿ

10:36 PM Aug 03, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿನ ಕೋವಿಡ್‌ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ಕೇರ್‌ ಸೆಂಟರ್‌ಗಳಿಗೆ ವರ್ಗಾಯಿಸಿ ಚಿಕಿತ್ಸೆ ನೀಡಬೇಕು. ಸೋಂಕು ಹರಡುವಿಕೆಯ ಸರಪಳಿಯನ್ನು ಕಡಿತಗೊಳಿಸಲು ಇದು ಪೂರಕ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್‌-19 ನಿಯಂತ್ರಣ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತೀ ತಾಲೂಕುಗಳಲ್ಲೂ ಮೂಲ ಸೌಕರ್ಯ ಸಹಿತವಾಗಿರುವ ಕೇರ್‌ಸೆಂಟರ್‌ಗಳನ್ನು ಈ ಕೂಡಲೇ ತೆರೆಯಬೇಕು. ಕೇರ್‌ ಸೆಂಟರ್‌ಗಳಿಗೆ ಅಗತ್ಯ ಇರುವ ವೈದ್ಯರು, ಶುಶ್ರೂಷಕರು ಮತ್ತಿತರ ಸಿಬಂದಿಯನ್ನು ಅಗತ್ಯಕ್ಕನುಗುಣವಾಗಿ ನಿಯೋಜಿಸಬೇಕು ಎಂದರು.

5 ಸಾವಿರಕ್ಕೂ ಅಧಿಕ ಪರೀಕ್ಷೆ ಗುರಿ:

ಜಿಲ್ಲೆಯಲ್ಲಿ ಪ್ರತಿದಿನ 5,000ಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಗ್ರಾ.ಪಂ.ಗಳು ಕೋವಿಡ್‌ ಪರೀಕ್ಷೆ ಮಾಡಲು ಅಗತ್ಯ ಸಹಕಾರ ನೀಡುವಂತೆ ಸೂಚಿಸಲಾಗುವುದು ಎಂದರು.

Advertisement

ಸ್ಥಳದಲ್ಲಿಯೇ ರ್ಯಾಟ್‌ ಪರೀಕ್ಷೆ:

ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರರಾಜ್ಯಗಳಿಂದ ರೈಲುಗಳಲ್ಲಿ ಆಗಮಿಸುವವರು ಕಡ್ಡಾಯವಾಗಿ 72 ಗಂಟೆ ಅವಧಿಯ ಒಳಗೆ ಪಡೆದ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರುವ ಬಗ್ಗೆ ತಪಾಸಣೆ ಮಾಡಬೇಕು. ವರದಿ ಇಲ್ಲದೆ ಬಂದವರಿಗೆ ಸ್ಥಳದಲ್ಲಿಯೇ ರ್ಯಾಟ್‌ ಪರೀಕ್ಷೆ ಮಾಡಬೇಕು ಎಂದರು.

ಮನೆ ಸೀಲ್‌ಡೌನ್‌:

ಕೋವಿಡ್‌ ಸೋಂಕಿತರ ಮನೆಗಳನ್ನು ಕಡ್ಡಾಯವಾಗಿ ಸೀಲ್‌ಡೌನ್‌ ಮಾಡಬೇಕು. 5ಕ್ಕಿಂತ ಹೆಚ್ಚಿನ ಪ್ರಕರಣಗಳು ಒಂದೇ ಪರಿಸರ

ದಲ್ಲಿ ಕಂಡು ಬಂದಲ್ಲಿ ಕಂಟೈನ್‌ಮೆಂಟ್‌ ಝೊàನ್‌ಗಳಾಗಿ ಘೋಷಿಸಿ ಅವುಗಳ ಮೇಲೆ ನಿಗಾ ವಹಿಸುವ ಕೆಲಸವಾಗಬೇಕು ಎಂದರು.

ಬೆಡ್‌ ಕಾದಿರಿಸಿ:

ಸಂಭಾವ್ಯ ಕೋವಿಡ್‌ ಮೂರನೇ ಅಲೆ ಹರಡುವುದನ್ನು ಸಮರ್ಪಕವಾಗಿ ನಿಯಂತ್ರಿ ಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು. ಸೋಂಕಿತರ ಚಿಕಿತ್ಸೆಗೆ 1,000 ಬೆಡ್‌ಗಳನ್ನು ಕಾದಿರಿಸುವ ಅಗತ್ಯವಿದೆ ಎಂದರು.

ಸಹಕಾರ ಅಗತ್ಯ:

ಗ್ರಾಮೀಣ ಭಾಗಗಳಲ್ಲಿ ಟಾಸ್ಕ್ ಫೋರ್ಸ್‌ ಸಮಿತಿಗಳು ಕಾರ್ಯನಿರ್ವಹಿಸುವುದ ರೊಂದಿಗೆ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕು. ಸೋಂಕಿತರನ್ನು ಕೇರ್‌ಸೆಂಟರ್‌ಗೆ ವರ್ಗಾಯಿಸಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಮ ಲೆಕ್ಕಿಗರು, ಪಿಡಿಒಗಳು ಹಾಗೂ ಪೊಲೀಸ್‌ ಸಿಬಂದಿ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.

ಪ್ರತೀ ದಿನ ಸಭೆ ನಡೆಸಿ:

ಪ್ರತೀ ದಿನ ಸಂಜೆ ತಾಲೂಕು ಮಟ್ಟ ದಲ್ಲಿ ತಹಶೀಲ್ದಾರರು ಮತ್ತು ತಾ.ಪಂ.ಕಾರ್ಯ ನಿರ್ವಾಣಾಧಿಕಾರಿಗಳು ಕೋವಿಡ್‌ ಸೋಂಕಿ ತರ ಸ್ಥಿತಿಗತಿ ಬಗ್ಗೆ ಸಭೆ ನಡೆಸಿ, ಚರ್ಚಿಸಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕು. ಲಸಿಕಾ ಕೇಂದ್ರ ಗಳಲ್ಲಿ ಹೆಚ್ಚು ಜನಸಂದಣಿ ತಡೆಯಲು ಕ್ರಮ ಕೈಗೊಂಡು ಲಸಿಕೆ ನೀಡುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನಾಗಭೂಷಣ್‌ಉಡುಪ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ್‌ಚಂದ್ರ, ತಹಶೀಲ್ದಾರ್‌ ಪ್ರದೀಪ್‌ ಎಸ್‌. ಕುರ್ಡೆಕರ್‌, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

24×7 ತಪಾಸಣೆ ಕೇಂದ್ರ:

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಉಡುಪಿ, ಕುಂದಾಪುರ ಮತ್ತು ಬೈಂದೂರು ರೈಲು ನಿಲ್ದಾಣದಲ್ಲಿ 24×7 ಕಾರ್ಯನಿರ್ವಹಿಸುವ ತಪಾಸಣಾ ಕೇಂದ್ರಗಳನ್ನು ತರೆದು ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರನ್ನು ತಪಾಸಣೆ ನಡೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಪಾಲಿಸದ ಜನರಿಗೆ ದಂಡ ವಿಧಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next