ಜಮಖಂಡಿ: ನಗರದ ಜಯನಗರದ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಅನು ಕೂಲಕ್ಕಾಗಿ 100 ಡೆಸ್ಕ್, 20 ಕಂಪ್ಯೂಟರ್, ಒಂದು ಟ್ರೆಸರಿ, ಕಸದ ಡಬ್ಬಿ ನೀಡುವುದಾಗಿ ರೋಟರಿ ಸಂಸ್ಥೆ ಅಧ್ಯಕ್ಷ ಯೋಗಪ್ಪ ಸವದಿ ಹೇಳಿದರು.
ನಗರದ ಜಯನಗರ ಬಡಾವಣೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸ್ಥಳೀಯ ರೋಟರಿ ಸಂಸ್ಥೆ ವತಿಯಿಂದ ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಸಿಗುವ ಸೌಲಭ್ಯ ಅಗತ್ಯ ಸೌಲಭ್ಯ ತರಲು ಪ್ರಾಮಾಣಿಕ ಪ್ರಯತ್ನ ನಮ್ಮ ಸಂಸ್ಥೆ ಮಾಡಲಿದೆ. ಸರ್ಕಾರಿ ಶಾಲೆಗೆ ಅವಶ್ಯಕ ಸಾಮಗ್ರಿಗಳನ್ನು ನೀಡಲು ನಮ್ಮ ಸದಸ್ಯರು ಉತ್ಸುಕರಾಗಿದ್ದಾರೆ. ಶಾಲೆಯಲ್ಲಿ 260 ಮಕ್ಕಳ ಶಿಕ್ಷಣ ಉತ್ತಮವಾಗಿದ್ದು ಪಾಲಕರು ಕಡು ಬಡವರಾಗಿದ್ದಾರೆ. ಮೂಲಭೂತ ಸೌಲಭ್ಯ ನೀಡಬೇಕೆಂಬ ಉದ್ದೇಶದಿಂದ ರೋಟರಿ ಸಂಸ್ಥೆ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡು 9 ಕಟ್ಟಿಗೆ ಟೇಬಲ್, ಕುರ್ಚಿ, ಒಂದು ಡಯಾಸ್, 1 ಸಾವಿರ ಲೀಟರ್ ನೀರಿನ ವಾಟರ್ ಟ್ಯಾಂಕ್, 5 ರಿಂದ 7ನೇ ವರ್ಗದ 104 ಮಕ್ಕಳಿಗೆ ಕಂಪಾಸ್ ಮತ್ತು 1 ರಿಂದ 4 ನೇ ವರ್ಗದ 156 ಮಕ್ಕಳಿಗೆ ಅಂಕಲಿಪಿ, ಎಲ್ಲ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕವಾಯತ ಡ್ರಮ್ ಸೆಟ್, ಆಟದ ಸಾಮಗ್ರಿ, 9 ವರ್ಗ ಕೋಣೆಗಳಿಗೆ ವರ್ಣರಂಜಿತ ಬಣ್ಣ ಹಚ್ಚಲಾಗಿದೆ ಎಂದರು.
ಇವೆಂಟ್ ಚೇರ್ಮೇನ್ ರಾಜು ಕೋಹಳ್ಳಿ ಮಾತನಾಡಿ, ಈ ಶಾಲೆ ನಮ್ಮ ಶಾಲೆ ಯೋಜನೆ ಮೂಲಕ ಪ್ರತಿ ತಿಂಗಳು ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯ ಸಾಮಗ್ರಿ ಪೂರೈಸುವ ಮೂಲಕ ಮಕ್ಕಳ ಕಲಿಕೆಗೆ ಹೆಚ್ಚು ಮಹತ್ವ ನೀಡಲಾಗುವುದು ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಯೋಗಪ್ಪ ಸವದಿ ಅವರು ಮುಖ್ಯ ಶಿಕ್ಷಕ ಎನ್.ಎಂ.ಹೆಗಡಿ, ಶಿಕ್ಷಕ ಎಸ್.ಎಸ್.ಹಿರೇಮಠ ಮೂಲಕ ಸಾವಿರಾರು ರೂ. ಗಳ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಿದರು.
ವೇದಿಕೆಯಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಬಸು ಬಳಗಾರ, ಖಜಾಂಚಿ ಬಸವರಾಜ ಆಲಗೂರ, ಡಾ| ಆರ್.ವಿ. ಮೆಟಗುಡ್ಡ, ಡಾ| ಕೆ.ಐ.ಗುರುಮಠ, ಅಶೋಕ ಕುಲ್ಲಳ್ಳಿಕರ, ಎಸ್.ವೈ. ಬಿರಾದಾರ, ವಿಜಯ ಧರ್ಮದಾಸಾನಿ, ಸುಭಾಸ ಕಾಶಿದ, ಪ್ರಶಾಂತ ಗಾತಾಡೆ, ಎಸ್‌ಡಿಎಂಸಿ.ಅಧ್ಯಕ್ಷ ಯಲ್ಲಪ್ಪ ಭಜಂತ್ರಿ, ಶಿಕ್ಷಕರಾದ ಕೆ.ಎಸ್.ವಡ್ಡರ, ವ್ಹಿ.ಎಲ್. ಮಸೂತಿ, ಎಂ.ಕೆ.ಸತ್ಯಪ್ಪನ್ನವರ, ಎಸ್. ಎನ್.ಪಾಲಬಾವಿಮಠ, ಎಸ್.ಸಿ. ಡಪಳಾಪುರ ಸಹಿತ ಹಲವರು ಇದ್ದರು.