Advertisement
ಪಟ್ಟಣವು ನೆರೆಪೀಡಿತ ಪ್ರದೇಶವೆಂದೇ ಜಿಲ್ಲೆಯಲ್ಲಿ ಗುರುತಿಸಿದ್ದು, ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ಕ್ಷೇತ್ರದಲ್ಲಿ ಈ ಪರಿವರ್ತಕ ಗತಕಾಲದಿಂದಲೂ ನೆರೆ ನೀರು ಬಂದರೆ ಒಂದಡೆ ಅಪಾಯ ಇನ್ನೊಂದೆಡೆ ಸ್ಥಳೀಯ ಗ್ರಾಹಕರಿಗೆ ವಿದ್ಯುತ್ ದೀಪವಿಲ್ಲದೆ ಪರದಾಟ ನಡೆಸಿ ಮೆಸ್ಕಾಂಗೆ ದೂರುಗಳ ಸರಮಾಲೆಯಂತೆ ಬರುತ್ತಲೇ ಇತ್ತು. ಅಲ್ಲದೆ ಪ್ರಾಕೃತಿಕ ವಿಕೋಪ ಸಭೆಗಳಲ್ಲಿಯೂ ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿದ್ದು ಮೆಸ್ಕಾಂಗೆ ಸವಾಲಾಗಿ ಪರಿಗಣಿಸಿತ್ತು.
ಉಪ್ಪಿನಂಗಡಿ ಮೆಸ್ಕಾಂ ಶಾಖಾ ಕಚೇರಿಯ ಸಹಾಯಕ ಎಂಜಿನಿಯರ್ ರಾಜೇಶ್ ವಿಶೇಷ ಮುರ್ತುವಜಿ ವಹಿಸಿ ಸಾರ್ವಜನಿಕ ಸೇವೆಯಡಿ ನಿಗಮದಿಂದ ಮಂಜೂರಾತಿ ಪಡೆದು ಸ್ಥಳಾಂತರಿಸುವ ಮೂಲಕ ಗ್ರಾಹಕರ ಹಾಗೂ ಸಾರ್ವಜನಿಕರ ಕುಂದುಕೊರತೆಗೆ ಸ್ಪಂದಿಸಿದ್ದಾರೆ. ಇದರಿಂದ ರಥಬೀದಿ ಪರಿಸರದ ಗ್ರಾಹಕರಿಗೆ ಶನಿವಾರ ಸತತ ಎಂಟು ಗಂಟೆ ಕಾಲ ವ್ಯಥೆ ಉಂಟಾಗಿದ್ದರೂ ಪರಿವರ್ತಕ ಸ್ಥಳಾಂತರದಿಂದ ಶಾಶ್ವತ ಪರಿಹಾರ ಕಂಡುಕೊಂಡಂತಾಗಿದೆ.