Advertisement

ಪೊಲೀಸ್‌ ಜೀಪ್‌ನಲ್ಲಿ ಹಣ ಸಾಗಣೆ: ಅಧಿಕಾರಿ ವರದಿ

01:18 AM Apr 26, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಅಕ್ರಮಗಳ ಬಗ್ಗೆ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

Advertisement

ಗುರುವಾರ ಸಭೆ ಬಳಿಕ ಪ್ರತಿಕ್ರಿಯಿಸಿದ ಅವರು, ಹಾಸನದಲ್ಲಿ ಪೊಲೀಸ್‌ ಜೀಪ್‌ನಲ್ಲಿ ಹಣ ಸಾಗಿಸಿರುವ ಬಗ್ಗೆ ಐಎಎಸ್‌ ಅಧಿಕಾರಿಯೇ ವರದಿ ನೀಡಿದ್ದಾರೆ. ಅದು ಬಿಜೆಪಿ ನೀಡಿದ ದೂರಲ್ಲ. ಬಿಜೆಪಿ ಈ ಹಿಂದೆ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಆದರೆ ಹಾಸನದಲ್ಲಿ ಚುನಾವಣಾ ಅಕ್ರಮ ನಡೆದಿದ್ದು, ಪೊಲೀಸ್‌ ಜೀಪ್‌ನಲ್ಲಿ ಹಣ ಸಾಗಿಸಲಾಗಿದೆ ಎಂದು ಐಎಎಸ್‌ ಅಧಿಕಾರಿ ಮುನೀಶ್‌ ಮೌದ್ಗಿಲ್ ವರದಿ ನೀಡಿದ್ದಾರೆ. ಚುನಾವಣಾ ಅಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ದನಿಗೂಡಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಖ್ಯಮಂತ್ರಿಗಳ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಬೆಂಗಾವಲು ಪಡೆ ವಾಹನದಲ್ಲೇ ಹಣ ಸಾಗಣೆಯಾಗಿದೆ. ಆ ಹಣವನ್ನು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಉಳಿದವರಿಗೆ ಸಾಗಿಸಲು ಸಾಧ್ಯವೇ ಇಲ್ಲ. ಆ ಹಣವನ್ನು ಅವರೇ ಸಾಗಿಸಿರಬಹುದು ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next