Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ದ್ವೇಷದ ರಾಜಕಾರಣ ಮಾಡುತ್ತಾ, ನಾನು ಹೇಳು ವುದೆಲ್ಲಾ ಸುಳ್ಳು. ಹೇಳುವುದೊಂದು ಮಾಡುವು ದೊಂದು ಎಂಬುದನ್ನು ತೋರಿಸುತ್ತಿದ್ದಾರೆ. ಸರ್ಕಾರ ಗುರಿಯಾಗಿಟ್ಟುಕೊಂಡಿರುವ ಸಮಾಜ ಯಾವುದು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿ ಒಕ್ಕಲಿಗರ ಅಧಿಕಾರಿಗಳನ್ನು ಸರ್ಕಾರ ಗುರಿಯಾಗಿರಿಸಿ ಕೊಂಡಿದೆ ಎಂದು ಪರೋಕ್ಷವಾಗಿ ಪ್ರಸ್ತಾಪಿಸಿದರು.
Related Articles
Advertisement
590 ಕೋಟಿ ರೂ. ನಷ್ಟ: ಅತಿವೃಷ್ಟಿಯಿಂದ ಹಾಸನ ಜಿಲ್ಲೆಯಲ್ಲಿ 590 ಕೋಟಿ ರೂ. ನಷ್ಟವಾಗಿದೆ. ಆದರೆ ಇದುವರೆಗೂ ಒಂದು ಬಿಡಿಗಾಸೂ ಪರಿಹಾರ ಬಿಡುಗಡೆಯಾಗಿಲ್ಲ. ಜಿಲ್ಲಾಧಿಕಾರಿಯವರನ್ನು ಕೇಳಿ ದರೆ ಅವರು ಅಸಹಾಯಕತೆ ಪ್ರದರ್ಶಿಸುತ್ತಾರೆ. ಸರ್ಕಾರ ಸತ್ತು ಹೋಗಿದೆಯೇನೋ ಎಂಬ ಅನುಮಾನ ಕಾಡುತ್ತಿದೆ ಎಂದೂ ಹೇಳಿದರು.
ತಾತ್ಕಾಲಿಕ ಪರಿಹಾರವಾಗಿ 10 ಸಾವಿರೂ ರೂ. ಮನೆ ಕಳೆದುಕೊಂಡವರು ಹೊಸ ಮನೆ ಅಡಿಪಾಯ ಹಾಕಲು ಒಂದು ಲಕ್ಷ ರೂ. ಕೊಡುತ್ತಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಯಾವ್ಯಾವ ಫಲಾನುಭವಿ ನೆರವು ಪಡೆದಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದ ಅವರು, ಬಹುಶಃ ಯಡಿಯೂರಪ್ಪರ ಸರ್ಕಾರ ದಿವಾಳಿಯಾಗಿ ಪಾಪರ್ ಚೀಟಿ ಪಡೆದುಕೊಳ್ಳು ಕಾಯುತ್ತಿರಬಹುದು ಎಂದು ಲೇವಡಿ ಮಾಡಿದರು.
ಹಾಸನ ಜಿಲ್ಲೆಯ ಬಗ್ಗೆ ತಾತ್ಸಾರ: ಹಾಸನ ಜಿಲ್ಲೆ ಯೆಂದರೆ ಈ ಸರ್ಕಾರಕ್ಕೆ ಅದೇಕೋ ತಾತ್ಸಾರ. ಬಿಡು ಗಡೆ ಮಾಡಿದ್ದ ಹಣವನ್ನೂ ಸರ್ಕಾರ ವಾಪಸ್ ಪಡೆದು ಕೊಂಡಿದೆ. ಜಿಪಂನಿಂದ 70 ಲಕ್ಷ ರೂ. ಲೋಕೋಪಯೋಗಿ ಇಲಾಖೆಯಿಂದ 60 ಲಕ್ಷ ರೂ. ವಾಪಸ್ ಪಡೆದಿದೆ ಏಕೆ ಹಾಸನ ಜಿಲ್ಲೆಯ ಬಗ್ಗೆ ಬಿಜೆಪಿ ಸರ್ಕಾರ ದ್ವೇಷ ಸಾಧಿಸುತ್ತಿದೋ ಗೊತ್ತಿಲ್ಲ ಎಂದರು.
ಸಾಲ ಮನ್ನಾ ಹಣ ಬಿಡುಗಡೆ ಮಾಡಿ: ಜಿಲ್ಲೆಯ ಸುಮಾರು 36 ಸಾವಿರ ರೈತರ ಸಾಲ ಮನ್ನಾಗೆ ಜಿಲ್ಲಾ ಸಹಕಾರ ಬ್ಯಾಂಕಿಗೆ ಇನ್ನೂ 115 ಕೋಟಿ ರೂ. ಬಿಡುಗಡೆಯಾಗಬೇಕಾಗಿದೆ. ಸಾಲ ಮನ್ನಾ ಫಲಾನು ಭವಿಗಳ ಎಲ್ಲ ದಾಖಲೆಗಳು ಸಮರ್ಪಕವಾಗಿದೆ ಎಂದು ಅಧಿಕಾರಿಗಳು ಪಟ್ಟಿ ಸಲ್ಲಿಸಿದರೂ ಆ ಮೊತ್ತ ವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ರೈತರ ಸಾಲ ಮನ್ನಾ ಹಣಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದೂ ಎಚ್ಚರಿಸಿದರು. ಹಾಸನ ಜಿಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.