ಕಾರವಾರ: ಕಾರವಾರದ ಕಡಲಲ್ಲಿ ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ಮಲ್ಪೆಯ “ಗುರುದೇವ’ ಟ್ರಾಲರ್ ಬೋಟ್‌ನಲ್ಲಿ ಬುಧವಾರ ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಎಂಜಿನ್ ಭಾಗದಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಆರಿಸಲು ಹೋದ ಬೋಟ್ ಚಾಲಕ ಅಂಥೋನ್ ಜಿ. ಡಿಕೋಸ್ಟಾ (46) ಅವರ ಕೈಗೆ ಸುಟ್ಟ ಗಾಯಗಳಾಗಿವೆ.
Advertisement
ಹೊಗೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅವರ ರಕ್ಷಣೆಗೆ ಶ್ರೀವಾಸವ ಬೋಟ್ ಧಾವಿಸಿತ್ತು. ಕರಾವಳಿ ಕಾವಲು ಪಡೆಗೂ ಸಂದೇಶ ರವಾನೆಯಾಗಿತ್ತು. ಕಾರವಾರ ಲೈಟ್ ಹೌಸ್ ಬಳಿ ಕರಾವಳಿ ಕಾವಲು ಪಡೆಯ ಇಂಟರ್‌ಸೆಪ್ಟರ್ ಸಿಬಂದಿ ಧಾವಿಸಿದ್ದು, ಗುರುದೇವ ಟ್ರಾಲರ್ ಬೋಟನ್ನು ಕಾರವಾರ ವಾಣಿಜ್ಯ ಬಂದರಿಗೆ ಎಳೆದು ತಂದು, ಗಾಯಾಳು ಚಾಲಕ ಅಂಥೋನ್ ಅವರಿಗೆ 108 ವಾಹನದಲ್ಲಿ ತುರ್ತು ಚಿಕಿತ್ಸೆ ಕೊಡಿಸಿತು.