Advertisement
ಇಲ್ಲಿಯ ಕಂಗ್ರಾಳಿ ಕೆ.ಎಚ್. ಗ್ರಾಮದ ರಾಜ್ಯ ಮೀಸಲು ಪೊಲೀಸ್ ಪಡೆಯ 362 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಶನಿವಾರ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಇನ್ಫೋಸಿಸ್ ಸಹಾಯದಿಂದ ಈ ತರಬೇತಿ ಶಾಲೆ ಆರಂಭಿಸಿ ಸೈಬರ್ ಕ್ರೈಂ ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಮಾಜದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
Related Articles
Advertisement
ಸಮಾಜದ ಹಿತ ಕಾಪಾಡಲು, ರಾಜ್ಯದ ನೆಲ-ಜಲ, ಜನರ ರಕ್ಷಣೆಗೆ ಸದಾ ಮುಂದಿದ್ದಾರೆ. ಕೆಎಸ್‌ಆರ್‌ಪಿ ತರಬೇತಿ ಪೂರ್ಣಗೊಳಿಸಿರುವ ಪ್ರಶಿಕ್ಷಣಾರ್ಥಿಗಳು ಶಾರೀರಿಕ, ಮಾನಸಿಕ ಹಾಗೂ ಆಧುನಿಕ ವಿದ್ಯಮಾನಗಳ ಬಗ್ಗೆ ತರಬೇತಿ ಪಡೆದುಕೊಂಡಿದ್ದು, ರಾಜ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಗೊಂಡಿದ್ದಾರೆ ಎಂದು ಹೇಳಿದರು.
ಡಾ| ಬಾಬಾಸಾಹೇಬ ಅಂಬೇಡ್ಕರರ ಆಶಯದಂತೆ ಜಾತೀಯತೆ, ಧರ್ಮ ಸಂಘರ್ಷ, ಅಪರಾಧ ಪ್ರಕರಣಗಳಿಗೆ ಮಟ್ಟ ಹಾಕಬೇಕಾಗಿದೆ. ಈ ಎಲ್ಲ ಪದರುಗಳನ್ನು ತೊಡೆದು ಹಾಕಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ಸಮಾನತೆ ಸಿಗಬೇಕು ಎಂಬ ಸಂವಿಧಾನದ ಆಶಯ ಈಡೇರಿಲ್ಲ ಎಂಬುದು ಬೇಸರ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಶಿಕ್ಷಣಾರ್ಥಿಗಳಲ್ಲಿ ಪದವೀಧರರೇ ಹೆಚ್ಚು: 362 ಜನ ಪ್ರಶಿಕ್ಷಣಾರ್ಥಿಗಳ ಪೈಕಿ 180ಕ್ಕೂ ಹೆಚ್ಚು ಜನ ಪದವೀಧರರಾಗಿದ್ದು, 15 ಜನ ಸ್ನಾತಕೋತ್ತರ ಪದವಿ, 13 ಜನ ಪದವಿ ಪೂರ್ವ, 20 ಡಿಪ್ಲೊಮಾ ಹಾಗೂ 13 ಜನ ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದಿದ್ದಾರೆ. ಕೆಎಸ್ಆರ್ಪಿಹುದ್ದೆಗೆ ಎಸ್ಸೆಸ್ಸೆಲ್ಸಿ ಅರ್ಹತೆ ಇದ್ದರೂ ಪದವಿ ಮಾಡಿದವರು ಬರುತ್ತಿದ್ದಾರೆ ಎಂದರೆ ಇಲಾಖೆಯ ಮಟ್ಟ ಹೆಚ್ಚಾಗುತ್ತ ಹೋಗುತ್ತಿದೆ. ರಾಜ್ಯ ಪೊಲೀಸ್ ಇಲಾಖೆಗೆ ಅನೇಕ ಸವಾಲುಗಳು ಬರುತ್ತಿದ್ದು, ಅದನ್ನು ಎದುರಿಸಲು ಸಿದ್ಧಗೊಳ್ಳಬೇಕು ಎಂದು ಡಾ| ಜಿ. ಪರಮೇಶ್ವರ ಹೇಳಿದರು.