Advertisement

ಟಾಸ್ಕ್ ಫೋರ್ಸ್‌ ಸಮಿತಿ ಸದಸ್ಯರಿಗೆ ತರಬೇತಿ

02:22 PM Jul 12, 2020 | Suhan S |

ಹರಿಹರ: ಕೋವಿಡ್‌ ನಿಯಂತ್ರಣಕ್ಕೆ ರಚಿಸಲಾಗಿರುವ ವಾರ್ಡ್‌ ಮಟ್ಟದ ಟಾಸ್ಕ್ ಫೋರ್ಸ್‌ ಸಮಿತಿ ಸದಸ್ಯರಿಗೆ ಶನಿವಾರ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

Advertisement

ಕಾರ್ಯಾಗಾರದಲ್ಲಿ ಮಾತನಾಡಿದ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಅಧಿಕಾರಿಗಳೊಂದಿಗೆ ಸ್ಥಳೀಯ ಮುಖಂಡರು, ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಕೋವಿಡ್‌ ನಿಯಂತ್ರಿಸಲು ಸಾಧ್ಯ. ಹಾಗಾಗಿ ಸರ್ಕಾರ ವಾರ್ಡ್‌ ಮಟ್ಟದಲ್ಲಿ ಟಾಸ್ಕ್ಫೋರ್ಸ್‌ ಸಮಿತಿ ರಚಿಸಲು ಮುಂದಾಗಿದೆ. ಆಯಾ ವಾರ್ಡ್‌ನ ಜನಪ್ರತಿನಿಧಿ ಗಳು, ವೈದ್ಯರು, ವಕೀಲರು, ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರೆ ಗಣ್ಯರು ಸಮಿತಿಯಲ್ಲಿದ್ದಾರೆ. ಪ್ರತಿ ಸೋಮವಾರ ಸಮಿತಿ ಸಭೆ ಸೇರಿ ವಾರ್ಡ್‌ ಮಟ್ಟದಲ್ಲಿ ಕೋವಿಡ್ ನಿಯಂತ್ರಣ, ಸೋಂಕಿತರ ಚಿಕಿತ್ಸೆ, ಸ್ಥಿತಿಗತಿ ಕುರಿತು ಚರ್ಚಿಸಲಾಗುತ್ತದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಮೋಹನ್‌ ಮಾತನಾಡಿ, ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜನಸಮಾನ್ಯರಲ್ಲಿ ಜಾಗೃತಿ ಮೂಡಿಸುವುದು, ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸುವುದು, ಸಂಪರ್ಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್‌ಗೆ ಕಳಿಸುವುದು ಮುಂತಾದ ಕೋವಿಡ್‌ ಸಂಬಂಧಿತ ಎಲ್ಲಾ ಕಾರ್ಯಗಳಿಗೆ ಟಾಸ್ಕ್ಪೋರ್ಸ್‌ ಸಮಿತಿ ಸಹಕಾರ ನೀಡಬೇಕು ಎಂದರು.

ಪೌರಾಯುಕ್ತೆ ಎಸ್‌. ಲಕ್ಷ್ಮೀ ಮಾತನಾಡಿ, ಸಮಿತಿ ಸದಸ್ಯರು ಆಯಾ ವಾರ್ಡ್‌ನ ಜನರು ಎದುರಿಸುವ ತೊಂದರೆಗಳನ್ನು ನಗರಸಭೆ, ತಾಲೂಕು ಆಡಳಿತದ ಗಮನಕ್ಕೆ ತರಬೇಕು. ಸೋಂಕಿತರ ಕುಟುಂಬಸ್ಥರಲ್ಲಿ ಆತ್ಮಸ್ಥೈರ್ಯ ತುಂಬುವುದು, ನೆರೆಹೊರೆಯವರಿಗೆ ಅಗತ್ಯ ತಿಳುವಳಿಕೆ ನೀಡುವುದು ಮುಂತಾದ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದರು.

ನಗರಸಭಾ ಸದಸ್ಯರಾದ ನಿಂಬಕ್ಕ ಚಂದಾಪೂರ, ಕೆ.ಜಿ. ಸಿದ್ದೇಶ್‌, ದಾದಾ ಖಲಂದರ್‌, ಮಾಜಿ ಅಧ್ಯಕ್ಷ ಕೆ. ಮರಿದೇವ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next