Advertisement

ತೆಂಗಿನಕಾಯಿ ಗಣಪತಿ ತಯಾರಿಕೆ ತರಬೇತಿ

05:25 PM Sep 01, 2018 | Team Udayavani |

ಧಾರವಾಡ: ಇಲ್ಲಿಯ ಸತ್ತೂರು ವೀರಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿ ಮೂರ್ತಿ ತಯಾರಿಕಾ ಕೌಶಲಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಆಗಮಿಸಿ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನೆ ಮನೆಗಳಲ್ಲಿ ಗಣೇಶ ಹಬ್ಬಕ್ಕೆ ಪೂಜಿಸುವ ಗಣೇಶ ಮೂರ್ತಿ ಹೆಚ್ಚಿನದಾಗಿ ಪಿಒಪಿಯಿಂದ ಮಾಡಿದ್ದಾಗಿದ್ದು, ಇದರಿಂದ ಪರಿಸರಕ್ಕೆ ಹಾನಿ ಇದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಪರಿಸರಸ್ನೇಹಿ ತೆಂಗಿನಕಾಯಿ ಗಣಪತಿ ಮೂರ್ತಿ ಪೂಜಿಸುವುದು ಒಳಿತು ಎಂದರು.

ಮಾರುಕಟ್ಟೆಯಲ್ಲಿಯೂ ನಾನಾ ರೂಪದಲ್ಲಿ ಕಲಾತ್ಮಕ ಗಣೇಶನ ಮೂರ್ತಿಗಳು ಲಭ್ಯವಿವೆ. ಈ ದಿನ ಬಿಡುಗಡೆ ಮಾಡಿದ ಪರಿಸರಸ್ನೇಹಿ ತೆಂಗಿನಕಾಯಿ ಗಣಪತಿ ಕೂಡ ಕಲಾತ್ಮಕವಾಗಿದೆ. ಈ ಮೂರ್ತಿಯನ್ನು ಪೂಜಿಸಿದ ನಂತರ ಹೊಲದ ಬದುಗಳಲ್ಲಿ ನಾಟಿ ಮಾಡುವುದರ ಮೂಲಕ ತೆಂಗಿನ ಗಿಡವಾಗಿ ಕೂಡ ಬೆಳೆದು ಫಲ ಪಡೆಯಬಹುದು. ಉತ್ಸವಕ್ಕೆ ಮಾತ್ರವಲ್ಲದೇ ವರ್ಷ ಪೂರ್ತಿ ಸಂಘದ ಸದಸ್ಯರು ಗೃಹ ಕೈಗಾರಿಕೆ ಮಾಡಿ ವಿವಿಧ ಮಳಿಗೆಯಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ನಿರ್ದೇಶಕ ದಿನೇಶ ಎಂ., ಯೋಜನಾಧಿ ಕಾರಿ ಉಲ್ಲಾಸ ಮೇಸ್ತ, ತೆಂಗಿನಕಾಯಿ ಕೆತ್ತನೆಗಾರರ ಸಮಿತಿ ಅಧ್ಯಕ್ಷ ಶಾಂತಾ ಗಡಕರ ಹಾಗೂ ಸಮಿತಿಯ ಪದಾಧಿಕಾರಿಗಳು, ಕೆತ್ತನೆಗಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next