ಪಟ್ಟಣದ ತಾ.ಪಂ ಸಾಮರ್ಥ್ಯಸೌಧದಲ್ಲಿ ಹಮ್ಮಿಕೊಳ್ಳಲಾಗಿತ್ತು. ನ್ಯಾಮತಿ ತಾಲೂಕು ಉಪ ತಹಶೀಲ್ದಾರ್ ಎನ್. ನಾಗರಾಜಪ್ಪ ಮಾತನಾಡಿ, ದಾವಣಗೆರೆ ಲೋಕಸಭಾ ಚುನಾವಣೆ ವ್ಯಾಪ್ತಿಯ ಹೊನ್ನಾಳಿ ವಿಧಾನಸಭಾ ಕ್ಷೇತ್ರ-110ಕ್ಕೆ ಸೇರಿದ ನೂತನ ನ್ಯಾಮತಿ ತಾಲೂಕಿನ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದು ಹೇಳಿದರು.
Advertisement
ಮೂಲ ಮತದಾನ ಪಟ್ಟಿ ಹಾಗೂ ಹೊಸದಾಗಿ ತಯಾರಿಸಿದ ಮತದಾರರ ಪಟ್ಟಯನ್ನು ಕೂಲಂಕಷವಾಗಿ ಪರಿಶೀಲಿಸಿ ಹೋಲಿಕೆ ಮಾಡಿ ಮತದಾರರಿಗೆ ಸಮರ್ಪಕವಾದ ವಿಳಾಸದೊಂದಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಗಳೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ದಿನವಿಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಿದರು. ಶುಕ್ರವಾರ ಜಗಳೂರು ಕ್ಷೇತ್ರದ 262 ಬಿಎಲ್‌ಒಗಳು ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿರುವ ತಿದ್ದುಪಡಿಗಳನ್ನು ಸ್ಥಳದಲ್ಲೇ ಸರಿಪಡಿಸಿ ನೀಡಿದರು. ಚುನಾವಣಾ ಶಿರಸ್ತೇದಾರ್ ಸುನೀಲ್ ಕುಮಾರ್ ಮಾತನಾಡಿ, ಮತದಾರರ ಪಟ್ಟಿ ಈ ಹಿಂದೆ ರಾಜ್ಯವ್ಯಾಪ್ತಿಯಲ್ಲಿ ಇರುತ್ತಿತ್ತು. ಆದರೆ ಈಗ ದೇಶಾದ್ಯಂತ ಒಂದೇ ಸಾಫ್ಟ್ ವೇರ್ ಅಳಡಿಸಲಾಗಿದ್ದು, ಪಟ್ಟಿಯಲ್ಲಿ ತಿದ್ದುಪಡಿ ಮಾಡಿ ಅಪ್‌ಲೋಡ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
Related Articles
ಹೊನ್ನಾಳಿ: ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಿದ್ಧತೆ ಕುರಿತು ಜಿಲ್ಲಾ ಮಟ್ಟದ ವಿಡಿಯೋ ಕಾನ್ಫರೆನ್ಸ್ ನಡೆಯಿತು. ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸುರೇಶ್‌ರೆಡ್ಡಿ, ಹೊನ್ನಾಳಿ ತಹಶೀಲ್ದಾರ್ ಮಲ್ಲಿಕಾರ್ಜುನ, ನ್ಯಾಮತಿ ತಹಶೀಲ್ದಾರ್ ರೇಣುಕಾ ಸೇರಿದಂತೆ ಇತರ ಅಧಿಕಾರಿಗಳು ಬಿಎಲ್‌ಒಗಳು ಭಾಗವಹಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ, ಮಾರ್ಗದರ್ಶನ ಪಡೆದರು. ಉಪವಿಭಾಗಾಧಿಕಾರಿ ಕುಮಾರಸ್ವಾಮಿ ತಾಲೂಕು ಮಟ್ಟದ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಂಭಾಷಣೆ ನಡೆಸಿ ಮತದಾನ ಪಟ್ಟಿ ಪರಿಷ್ಕರಣೆ ಸೇರಿದಂತೆ ಇತರ ಮಾಹಿತಿ ವಿಚಾರಿಸಿ, ಬಿಎಲ್‌ಒಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Advertisement
ಕಾರ್ಮಿಕರಿಗೆ ಮತ ಜಾಗೃತಿಜಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಆಸಗೋಡು ಗ್ರಾಪಂ ವ್ಯಾಪ್ತಿಯ ತುಪ್ಪದಹಳ್ಳಿ ಗ್ರಾಮದ ಕೆರೆಯಲ್ಲಿ ಶುಕ್ರವಾರ ನರೇಗಾ ಯೋಜನೆಯಡಿ ಹೂಳೆತ್ತುವ ಕೂಲಿ ಕಾರ್ಮಿಕರಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಾನಾಯ್ಕ ಹಾಗೂ ತಂಡದವರು ಮತದಾನ ಜಾಗೃತಿ ಮೂಡಿಸಿದರು. ಜಿಪಂ ಲೆಕ್ಕಾಧಿಕಾರಿ ಆಂಜನೇಯ, ಎಪಿಒ ಶಶಿಧರ್, ಇಒ ಜಾನಕಿರಾಮ್, ಪಿಡಿಒಗಳು ಇದ್ದರು.