Advertisement
ಪಟ್ಟಣದ ಕೋಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ತರಬೇತಿ ಬಹಿಷ್ಕರಿಸಿ ಮನವಿ ನೀಡಿದರು. ಮನವಿಯಲ್ಲಿ ತಿಳಿಸಿರುವಂತೆ ರಾಜ್ಯದ 82 ಸಾವಿರ ಶಿಕ್ಷಕರನ್ನು 1ರಿಂದ 7ನೇ ತರಗತಿಗೆ ಬೋಧನೆಗಾಗಿ ನೇಮಕ ವಾಗಿದ್ದು, 2014ರವರೆಗೂ 1ರಿಂದ 8ನೇ ತರಗತಿಯವರೆಗೂ ಬೋಧನೆ ಮಾಡುತ್ತ ಬರುತ್ತಿದ್ದೇವೆ. ಆದರೆ ನಮ್ಮ ಶಿಕ್ಷಣಕ್ಕೆ ಅನುಗುಣವಾದ ಸ್ಥಾನ ನೀಡಿಲ್ಲ. ಪದವಿ ಪಡೆದ ಶಿಕ್ಷಕರಾಗಿದ್ದು, ಇಂದಿಗೂ 1ರಿಂದ 5 ರವರೆಗೆ ಶಿಕ್ಷಣ ನೀಡುವ ಶಿಕ್ಷಕರೆಂದು ಪರಿಗಣಿಸಿರು ವುದು ಸರಿಯಲ್ಲ. ಅನ್ಯಾಯ ಸರ್ಕಾರ ಸರಿಪಡಿಸಬೇಕು. ನ್ಯಾಯ ಕೊಡಿಸ ದಿದ್ದರೆ 5ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ಬೋಧನೆ ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಡಯಟ್ ಪ್ರಾಂಶುಪಾಲ ವೈ.ಎನ್.ರಾಮಕೃಷ್ಣಯ್ಯ ಶಿಕ್ಷಕರ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಏಕಾಏಕಿ ತರಬೇತಿ ಬಹಿಷ್ಕರಿಸುವುದು ಸರಿಯಲ್ಲ ಎಂದು ಮನವೊಲಿಸಿದರು. ರಾಜ್ಯ ಪದವೀಧರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ. ವೆಂಕಟೇಶಯ್ಯ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಾಧಿಕ್‌ವುಲ್ಲಾ ಷರೀಫ್, ಖಜಾಂಚಿ ರಂಗಪ್ಪ, ತಾಲೂಕು ಕಾರ್ಯದರ್ಶಿ ಶ್ರೀಧರ್, ಜಿಲ್ಲಾ ಕಾರ್ಯದರ್ಶಿ ರಾಮೇಗೌಡ, ಶಿಕ್ಷಕರಾದ ನಾಗೇಶಯ್ಯ, ರೇಚಯ್ಯ, ಡಯಟ್ ಉಪನ್ಯಾಸಕರಾದ ಅನ್ನ ಪೂರ್ಣಮ್ಮ, ಕೃಷ್ಣಪ್ಪ, ಕೃಷ್ಣಯ್ಯ ಇದ್ದರು. Advertisement
ಮುಂಬಡ್ತಿ ನೀಡದಿದ್ದರೆ ತರಬೇತಿ ಬಹಿಷ್ಕಾರ
02:43 PM Jun 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.