Advertisement

ದೆಹಲಿ ರೈಲು ಸಂಚಾರಕೆ ನಾಳೆ ಚಾಲನೆ

09:36 AM Mar 04, 2019 | |

ಚಿಕ್ಕಬಳ್ಳಾಪುರ: ಜಿಲ್ಲೆಯ ರೈಲ್ವೆ ಪ್ರಯಾಣಿಕರೇ ನಿಮಗೊಂದು ಸಂತಸದ ಸುದ್ದಿ.. ನೀವು ಇನ್ಮೆàಲೆ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿ ದೆಹಲಿ ಪ್ರವಾಸ ಮಾಡಬಹುದು. ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಹೋಗಬಹುದು. ಅಷ್ಟೇ ಅಲ್ಲ ಉತ್ತರ ಭಾರತದ ಯಾವುದೇ ರಾಜ್ಯಕ್ಕೂ ನೀವು ಪ್ರವಾಸ ಹೊರಡಬಹುದು.

Advertisement

ಹೌದು, ಕಳೆದ ಫೆ.16 ರಂದು ಜಿಲ್ಲೆಗೆ ಯಶವಂತಪುರದಿಂದ ಚಿಕ್ಕಬಳ್ಳಾಪುರಕ್ಕೆ ಪ್ಯಾಸೆಂಜರ್‌ ರೈಲು ವಿಸ್ತರಣೆಗೊಂಡ ಬೆನ್ನಲ್ಲೇ ನೈರುತ್ಯ ರೈಲ್ವೆ ಇಲಾಖೆ ಜಿಲ್ಲೆಯ ರೈಲ್ವೆ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿಸಲು ಮುಂದಾಗಿದ್ದು, ಚಿಕ್ಕಬಳ್ಳಾಪುರದ ಮೂಲಕ ದೆಹಲಿಗೆ ಸಂಚರಿಸುವ 06521 ಸಂಖ್ಯೆಯ ಯಶವಂತಪುರ- ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲ್ವೆಗೆ ಹಸಿರು ನಿಶಾನೆ ತೋರಲು ಒಂದೇ ದಿನ ಬಾಕಿ ಮಾತ್ರ
ಇದೆ.
ನಾಳೆ ಸದಾನಂದಗೌಡ ಚಾಲನೆ: ಬೆಂಗಳೂರಿನ ಯಶವಂತಪುರ ವಯಾ ಚಿಕ್ಕಬಳ್ಳಾಪುರ, ಕೋಲಾರ, ಬಂಗಾರಪೇಟೆ ಮೂಲಕ ದೆಹಲಿಗೆ ಸಂಚಾರ ಮಾಡುವ ರೈಲಿಗೆ ಮಾ.5ರಂದು ಬೆಳಗ್ಗೆ 10:30ಕ್ಕೆ ಕೇಂದ್ರ
ಸಚಿವ ಡಿ.ವಿ.ಸದಾನಂದಗೌಡರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದು, ಈ ಭಾಗದ ರೈಲು ಪ್ರಯಾಣಿಕರಲ್ಲಿ ಸಂತಸ ಮನೆ ಮಾಡಿದೆ.

ಪ್ರಯಾಣಿಕರ ಸಂತಸ: ಕಳೆದ ಫೆ.16 ರಂದು ಯಶವಂತಪುರದಿಂದ ದೇವನಹಳ್ಳಿವರೆಗೂ ಮಾತ್ರ ಬರುತ್ತಿದ್ದ ಪ್ಯಾಸೆಂಜರ್‌ ರೈಲನ್ನು ಚಿಕ್ಕಬಳ್ಳಾಪುರದವರೆಗೂ ವಿಸ್ತರಣೆ ಮಾಡಿದ್ದ ರೈಲ್ವೆ ಇಲಾಖೆ ಇದೀಗ ಇದೇ ಮೊದಲಬಾರಿಗೆ ಚಿಕ್ಕಬಳ್ಳಾಪುರದ ಮೂಲಕ ದೂರದ ದೆಹಲಿಗೆ ಸಂರ್ಪಕ ಕಲ್ಪಿಸುವ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಗ್ರೀನ್‌ ಸ್ನಿಗಲ್‌ನೀಡಿರುವುದು ಜಿಲ್ಲೆಯ ಮಾತ್ರವಲ್ಲದೇಅವಿಭಜಿತ ಕೋಲಾರ ಜಿಲ್ಲೆಯ ರೈಲ್ವೆ ಪ್ರಯಾಣಿಕರಲ್ಲಿ ಸಂತಸ ಮನೆ ಮಾಡಿದೆ. ನೆರೆಯ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರೈಲು ಪ್ರಯಾಣಕ್ಕೆ ಇದೇ ಮೊದಲ ಬಾರಿಗೆ ಚಾಲನೆ ನೀಡುತ್ತಿರುವುದರಿಂದ ಜನಸಾಮಾನ್ಯರಿಗೆ ಮಾತ್ರವಲ್ಲದೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಹೆಚ್ಚುಅನುಕೂಲವಾಗಲಿದೆ.

ಜನಸಾಮಾನ್ಯರಿಗೆ ವರದಾನ: ಹಲವು ದಶಕಗಳ ಕಾಲ ನ್ಯಾರೋಗೇಜ್‌ನಿಂದ ಬ್ರಾಡ್‌ಗೆàಜ್‌ ಹಳಿ ಪರಿರ್ವತನೆಗೊಳ್ಳದೇ ಕೋಲಾರ, ಚಿಕ್ಕಬಳ್ಳಾಪುರ ನಡುವೆ ರೈಲು ಸಂಚಾರ ಸ್ಥಗಿತಗೊಂಡ ಬಳಿಕ ಮೊದಲ ಬಾರಿಗೆ 2013 ನವೆಂಬರ್‌ 8 ರಂದು ನ್ಯಾರೋಗೇಜ್‌ನಿಂದ ಬ್ರಾಡ್‌ಗೆàಜ್‌ಗೆ ಹಳಿ ಪರಿವರ್ತನೆಗೊಂಡ ಕೋಲಾರ ಹಾಗೂ ಚಿಕ್ಕಬಳ್ಳಾಪುರ ನಡುವೆ ಆರಂಭಗೊಂಡ ಪ್ಯಾಸೆಂಜರ್‌ ರೈಲು ಈ ಭಾಗದ ಜನ ಸಾಮಾನ್ಯರಿಗೆ ಸಾಕಷ್ಟು ವರದಾನವಾಗಿದೆ. ದಿನೇ ದಿನೇ ಎರಡು ಜಿಲ್ಲೆಗಳಲ್ಲಿ ಬೆಂಗಳೂರಿಗೆ ಬಂದು ಹೋಗುವವರ ಸಂಖ್ಯೆಹೆಚ್ಚಾಗ ತೊಡಗಿದೆ. ಇದೇ ಕಾರಣಕ್ಕಾಗಿ ದೇವನಹಳ್ಳಿಯವರೆಗೂ ಬಂದು ಹೋಗುತ್ತಿದ್ದ ಯಶವಂತಪುರ ರೈಲನ್ನು ಚಿಕ್ಕಬಳ್ಳಾಪುರ ದವರೆಗೂ ವಿಸ್ತರಿಸಲಾಗಿದೆ. ಇದೀಗ ಮತ್ತೂಂದು ರೈಲು ದೆಹಲಿಯವರೆಗೂ ಸಂಚರಿಸುವ ರೈಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಮೂಲಕ ಹಾದು ಹೋಗಲಿರುವುದು ಬರಪೀಡಿತ ಜಿಲ್ಲೆಗಳಿಗೆ ವರದಾನವೆಂದೇ ಭಾವಿಸಲಾಗಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿಜಿಲ್ಲೆಗೆ ರೈಲ್ವೆ ಇಲಾಖೆ ಉದಾರತೆ ತೋರಿ ಚಿಕ್ಕಬಳ್ಳಾಪುರದ ಮೂಲಕ ದೆಹಲಿಗೆ ರೈಲುಸಂಚಾರಕ್ಕೆ ಮುಂದಾಗಿರುವುದು ಜಿಲ್ಲೆಯ ರೈತಾಪಿ ಕೂಲಿ ಕಾರ್ಮಿಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಂತಸ ಮನೆ ಮಾಡಿದೆ. ಜಿಲ್ಲೆಯ ಜನತೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ರೈಲ್ವೆ ಇಲಾಖೆಗೆ ಆದಾಯ ತಂದುಕೊಟ್ಟು ರೈಲು ಶಾಶ್ವತವಾಗಿ ಚಿಕ್ಕಬಳ್ಳಾಪುರದ ಮೂಲಕ ದೆಹಲಿ ಸಂಚರಿಸುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.

ರೈಲು ಸಂಖ್ಯೆ ಮೂರಕ್ಕೆ ಏರಿಕೆ
ಯಶವಂತಪುರದಿಂದ ದೆಹಲಿಗೆ ಹೊರಡುವ ರೈಲಿಗೆ ಹಸಿರು ನಿಶಾನೆ ತೋರುತ್ತಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರದ ನಡುವೆ ಸಂಚರಿಸುವ ರೈಲುಗಳ ಸಂಖ್ಯೆ ಮೂರಕ್ಕೆ ಏರಿದೆ. ಈಗಾಗಲೇ ಕೋಲಾರ ಚಿಕ್ಕಬಳ್ಳಾಪುರದ ನಡುವೆ ದಿನ ನಿತ್ಯ ಎರಡು ಬಾರಿ ಪ್ಯಾಸೆಂಜರ್‌ ರೈಲು ಓಡಾಡುತ್ತಿದ್ದು, ಇದರ ಮಧ್ಯೆ ಯಶವಂತಪುರ ಚಿಕ್ಕಬಳ್ಳಾಪುರದ ನಡುವೆ ಇತ್ತೀಚೆಗೆ ಪ್ಯಾಸೆಂಜರ್‌ ರೈಲು ವಿಸ್ತರಣೆಗೊಂಡಿದೆ. ಹೀಗಾಗಿ ಒಟ್ಟು
ಮೂರು ರೈಲು ಜಿಲ್ಲೆಯ ಮೂಲಕ ಹಾದು ಹೋಗಲಿದ್ದು, ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಜೊತೆಗೆ ಬಂಗಾರಪೇಟೆ ರೈಲ್ವೆ ಜಂಕ್ಷನ್‌ ಮೇಲೆ ಒತ್ತಡ ಕಡಿಮೆ ಮಾಡಲು ಚಿಕ್ಕಬಳ್ಳಾಪುರದ ಮೂಲಕ ಹೆಚ್ಚು ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

Advertisement

ಈ ರೈಲು ತಿರುಪತಿಗೂ ಹೋಗುತ್ತೆ
ಬೆಂಗಳೂರಿನ ಯಶವಂತಪುರದ ರೈಲ್ವೆ ನಿಲ್ದಾಣದಿಂದ ವಯಾ ಚಿಕ್ಕಬಳ್ಳಾಪುರದ ಮೂಲಕ ಸಂಚರಿಸಲಿರುವ ರೈಲು ನೆರೆಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಮೂಲಕವೇ ದೆಹಲಿಗೆ ಹೊರಡಲಿರುವುದರಿಂದ ಅವಿಭಜಿತ ಕೋಲಾರ ಜಿಲ್ಲೆಯ ತಿರುಮಲ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರತಿ
ದಿನವು ಜಿಲ್ಲೆಯಿಂದ ತಿರುಪತಿಗೆ ಹೋಗುವ ಭಕ್ತರ ಸಂಖ್ಯೆ ಅಧಿಕವಾಗಿರುವುದರಿಂದಸಹಜವಾಗಿಯೇ ಯಶವಂತಪುರ ಚಿಕ್ಕಬಳ್ಳಾಪುರದ ಮೂಲಕ ದೆಹಲಿಗೆ ರೈಲು ಸಂಚರಿಸುವುದರಿಂದ ತಿಮ್ಮಪ್ಪನ ಭಕ್ತರಲ್ಲಿ ಹರ್ಷ ತಂದಿ¨ದ. 

Advertisement

Udayavani is now on Telegram. Click here to join our channel and stay updated with the latest news.

Next