Advertisement

1ರಿಂದ ರೈಲುಗಳ ಸಂಚಾರ ವೇಗ ಹೆಚ್ಚಳ -ವೇಳೆ ಪರಿಷ್ಕರಣೆ

11:30 AM May 22, 2022 | Team Udayavani |

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಜೂ. 1ರಿಂದ ಕೆಲ ರೈಲುಗಳ ವೇಗವೃದ್ಧಿ ಮತ್ತು ವೇಳೆ ಪರಿಷ್ಕರಣೆ ಮಾಡಲು ನಿರ್ಧರಿಸಿದೆ. ಬೆಂಗಳೂರು-ಕಾರವಾರ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16595) ರೈಲು ಸಂಜೆ 6:40ರ ಬದಲು 6:50 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ. ಅದೇ ರೀತಿ ಕಾರವಾರ-ಬೆಂಗಳೂರು (16596) ರೈಲು ಬೆಳಗ್ಗೆ 8ರ ಬದಲು 7:15 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಸನ-ಕಾರವಾರ-ಹಾಸನ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Advertisement

ಬೆಂಗಳೂರು-ಕನ್ನೂರ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16511) ರೈಲು ರಾತ್ರಿ 9:30ರ ಬದಲು 9:35 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ. ಅದೇ ರೀತಿ ಕನ್ನೂರ-ಬೆಂಗಳೂರು (16512) ರೈಲು ಬೆಳಗ್ಗೆ 6:50ರ ಬದಲು 6:30 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಸನ-ಕನ್ನೂರ-ಹಾಸನ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮಿರಜ್‌-ಬೆಂಗಳೂರು ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16590) ರೈಲು ಬೆಂಗಳೂರಿಗೆ ಬೆಳಗ್ಗೆ 6:30ರ ಬದಲು 6:15 ಗಂಟೆಗೆ ತಲುಪಲಿದೆ.  ಮಿರಜದಿಂದ ಯಶವಂತಪುರ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ವಿಜಯಪುರ-ಮಂಗಳೂರು ಜಂಕ್ಷನ್‌ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ ಸ್ಪೇಶಲ್‌ (07377) ರೈಲು ಸಂಜೆ 6:15ರ ಬದಲು 6:35 ಗಂಟೆಗೆ ವಿಜಯಪುರದಿಂದ ಹೊರಟು ಬಸವನ ಬಾಗೇವಾಡಿ ರೋಡ್‌ (7:12), ಆಲಮಟ್ಟಿ (7:30), ಬಾಗಲಕೋಟೆ (ರಾತ್ರಿ 8:18), ಗುಳೇದಗುಡ್ಡ ರೋಡ್‌ (8:33), ಬಾದಾಮಿ (8:47), ಹೊಳೆಆಲೂರು (9:11), ಮಲ್ಲಾಪೂರ (9:31), ಗದಗ (10:30), ಹುಬ್ಬಳ್ಳಿ (11:55) ಮಾರ್ಗವಾಗಿ ಮಂಗಳೂರು ಜಂಕ್ಷನ್‌ ತಲುಪಲಿದೆ. ಕರ್ಜಗಿಯಿಂದ ಮಂಗಳೂರು ಜಂಕ್ಷನ್‌ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅರಸೀಕೆರೆ-ಹುಬ್ಬಳ್ಳಿ ನಿತ್ಯ ಸಂಚಾರ ಪ್ಯಾಸೆಂಜರ್‌ ಸ್ಪೇಶಲ್‌ (07367) ರೈಲು ಅರಸೀಕೆರೆಯಿಂದ ಬೆಳಗ್ಗೆ 5:10ರ ಬದಲು 5:30 ಗಂಟೆಗೆ ಹೊರಟು ವೇಳೆ ಪರಿಷ್ಕರಣೆಯೊಂದಿಗೆ ಬಾಣಾವರ, ಕಡೂರು, ಬಿರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಸವಣೂರು ಮಾರ್ಗವಾಗಿ ಎಂದಿನಂತೆ ಮಧ್ಯಾಹ್ನ 12:15 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

Advertisement

ಜೂ. 4ರಿಂದ ಹುಬ್ಬಳ್ಳಿ-ಯಶವಂತಪುರ ವಾರದ ಎಕ್ಸ್‌ಪ್ರೆಸ್‌ (16544) ರೈಲು ಹುಬ್ಬಳ್ಳಿಯಿಂದ ಬೆಳಗ್ಗೆ 11:20ರ ಬದಲು 11:30 ಗಂಟೆಗೆ ಹೊರಡಲಿದೆ. ಹಾವೇರಿಯಿಂದ ಯಶವಂತಪುರ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜೂ. 1ರಿಂದ ಹಜರತ್‌ ನಿಜಾಮುದ್ದೀನ-ಯಶವಂತಪುರ ವಾರದಲ್ಲಿ ಎರಡು ದಿನ ಸಂಚಾರ ಸೂಪರ್‌ಫಾಸ್ಟ್‌ ಎಕ್‌ Õಪ್ರಸ್‌ (12630) ರೈಲು ಯಶಂತಪುರಕ್ಕೆ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ತಲುಪಲಿದೆ. ಮಾರ್ಗ ನಡುವಿನ ಇನ್ನುಳಿದ ನಿಲ್ದಾಣಗಳಲ್ಲಿ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲ.

ಜೂ. 2ರಿಂದ ಯಶವಂತಪುರ-ಹಜರತ್‌ ನಿಜಾಮುದ್ದೀನ (12629) ರೈಲು ಯಶವಂತಪುರದಿಂದ ಮಧ್ಯಾಹ್ನ 1:55ರ ಬದಲು 2:30 ಗಂಟೆಗೆ ಹೊರಟು ತುಮಕೂರು (3:20), ಅರಸೀಕೆರೆ (ಸಂಜೆ 4:37), ದಾವಣಗೆರೆ (6:38), ಹಾವೇರಿ (7:45) ಮಾರ್ಗವಾಗಿ ಹಜರತ್‌ ನಿಜಾಮುದ್ದೀನ ತಲುಪಲಿದೆ. ಹಾವೇರಿ-ಹಜರತ್‌ ನಿಜಾಮುದ್ದೀನ-ಹಾವೇರಿ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮೇ 31ರಿಂದ ಚಂಡಿಗಢ-ಯಶವಂತಪುರ ವಾರದಲ್ಲಿ ಎರಡು ದಿನ ಸಂಚಾರದ ಎಕ್ಸ್‌ಪ್ರೆಸ್‌ (22686) ರೈಲು ಯಶವಂತಪುರಕ್ಕೆ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ತಲುಪಲಿದೆ. ಜೂ. 1ರಿಂದ ಯಶವಂತಪುರ-ಚಂಡಿಗಢ ವಾರದಲ್ಲಿ ಎರಡು ದಿನ ಸಂಚಾರದ ಎಕ್ಸ್‌ ಪ್ರಸ್‌ (22685) ರೈಲು ಮಧ್ಯಾಹ್ನ 1:55ರ ಬದಲು 2:30 ಗಂಟೆಗೆ ಯಶವಂತಪುರದಿಂದ ಹೊರಟು ತುಮಕೂರು (3:20), ಅರಸೀಕೆರೆ (ಸಂಜೆ 4:37), ದಾವಣಗೆರೆ (6:38) ಮಾರ್ಗವಾಗಿ ಚಂಡಿಗಢ ತಲುಪಲಿದೆ. ದಾವಣಗೆರೆ-ಚಂಡಿಗಂಢ-ದಾವಣಗೆರೆ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜೂ. 3ರಿಂದ ಪಂಢರಪುರ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌ (16542) ರೈಲು ಯಶವಂತಪುರದಿಂದ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ಹೊರಡಲಿದೆ. ಮಾರ್ಗ ನಡುವಿನ ಇನ್ನುಳಿದ ನಿಲ್ದಾಣಗಳಲ್ಲಿ ವೇಳೆಯಲ್ಲಿ ಯಾವುದೇ ಬದಲಾವಣೆಗಳಿಲ್ಲವೆಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next