Advertisement

ಗುಡ್ಡ ಕುಸಿತ;ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

04:46 PM Jul 03, 2018 | Sharanya Alva |

ಮಂಗಳೂರು: ಭಾರೀ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಕಾಡಿನ ಮಧ್ಯೆ ಪರದಾಡುವಂತಾಗಿದೆ.

Advertisement

ಹಾನಸ ಜಿಲ್ಲೆ ಸಕಲೇಶಪುರದ ಶಿರಬಾಗಲು ಬಳಿ ಗುಡ್ಡ ಕುಸಿದು ಬಿದ್ದಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡಿದೆ. ಮಂಗಳವಾರ ಬೆಳಗ್ಗೆ 11ಗಂಟೆಗೆ ಮಂಗಳೂರಿನಿಂದ ಹಾಸನಕ್ಕೆ ರೈಲು ಹೊರಟಿತ್ತು.

ಏತನ್ಮಧ್ಯೆ ಗುಡ್ಡ ತೆರವು ಕಾರ್ಯಾಚರಣೆಗೆ ಸಕಲೇಶಪುರದಿಂದ ತಂಡ ಹೊರಟು, ತೆರವು ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ ಕಾಡಿನ ಮಧ್ಯೆ ರೈಲು ನಿಲುಗಡೆಯಾಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ವರದಿ ತಿಳಿಸಿದೆ. ಕಳೆದ ಜೂನ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮೂರು ಬಾರಿ ಗುಡ್ಡ ಕುಸಿದು ಬಿದ್ದಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next