Advertisement

ರೈಲು ದರದಲ್ಲಿ ಹೆಚ್ಚಳ: ಹೊಸ ವರ್ಷಕ್ಕೆ ಶಾಕ್‌ 

09:55 AM Jan 01, 2020 | Team Udayavani |

ನವದೆಹಲಿ: ಹೊಸ ವರ್ಷ ಸ್ವಾಗತಿಸುವ ಹೊತ್ತಿನಲ್ಲೇ ರೈಲ್ವೆ ಇಲಾಖೆ ಶಾಕಿಂಗ್‌ ನ್ಯೂಸ್‌ ನೀಡಿದೆ. ಸಬ್‌ಅರ್ಬನ್‌ ರೈಲುಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ರೈಲುಗಳ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

Advertisement

ಈ ಹೊಸ ದರ ಬುಧವಾರದಿಂದಲೇ ಜಾರಿಯಾಗಲಿದೆ. ಸಾಮಾನ್ಯ ಎಸಿ-ರಹಿತ, ನಾನ್‌-ಸಬ್‌ಅರ್ಬನ್‌ ರೈಲುಗಳ ದರದಲ್ಲಿ ಪ್ರತಿ ಕಿ.ಮೀ.ಗೆ 1 ಪೈಸೆ ದರ ಹೆಚ್ಚಳ ಮಾಡಲಾಗಿದೆ.

ಇದರ ಜತೆಗೆ ಮೇಲ್‌/ಎಕ್ಸ್‌ಪ್ರೆಸ್‌, ನಾನ್‌-ಎಸಿ ರೈಲುಗಳ ದರದಲ್ಲಿ ಪ್ರತಿ ಕಿ.ಮೀ.ಗೆ 2 ಪೈಸೆ ಮತ್ತು ಎಲ್ಲಾ ರೀತಿಯ ಎಸಿ ದರ್ಜೆಯಲ್ಲಿ ಪ್ರತಿ ಕಿ.ಮೀ.ಗೆ ನಾಲ್ಕು ಪೈಸೆ ಹೆಚ್ಚಳ ಮಾಡಲಾಗಿದೆ.

ಶತಾಬ್ದಿ, ರಾಜಧಾನಿ ಮತ್ತು ತುರಂತೋ ರೈಲುಗಳಲ್ಲೂ ಈ ದರ ಜಾರಿಯಾಗಲಿದೆ. ಆದರೆ, ರಿಸರ್ವೇಶನ್‌ ದರ ಮತ್ತು ಸೂಪರ್‌ ಫಾಸ್ಟ್‌ ಚಾರ್ಜ್‌ನಲ್ಲಿ ಯಾವುದೇ ರೀತಿಯ ಬದಲಾವಣೆಯಾಗುವುದಿಲ್ಲ ಎಂದು ರೈಲ್ವೆ ಇಲಾಖೆಯ ಆದೇಶ ತಿಳಿಸಿದೆ.

ಉದಾಹರಣೆಗೆ ಬೆಂಗಳೂರಿನಿಂದ ಹುಬ್ಬಳ್ಳಿ 470 ಕಿ.ಮೀ. ಅಂತರವಿದೆ. ಈ ಮಾರ್ಗದ ಜನಶತಾಬ್ದಿ ರೈಲಿನ ದರ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳವಾದರೂ ಸುಮಾರು 9 ರೂ. ಹೆಚ್ಚಳವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next