Advertisement
ಈಗಾಗಲೇ ಒಂದು ತಿಂಗಳಿಂದ ವಾರಕ್ಕೆ ಮೂರು ಸಲ ಪ್ರಯಾಣಿಸುವ ಯಶವಂತಪುರ -ಕಾರವಾರ ಹಗಲು ರೈಲು ವಿದ್ಯುತ್‌ಚಾಲಿತ ವ್ಯವಸ್ಥೆಯಲ್ಲಿ ಸಂಚರಿಸುತ್ತಿದೆ.
ರೈಲ್ವೇ ಸುರಕ್ಷಾ ಆಯುಕ್ತರ ನೇತೃತ್ವದ ತಜ್ಞರು ವಿದ್ಯುದೀಕರಣಗೊಂಡಿರುವ ಮಾರ್ಗವನ್ನು ಪರಿಶೀಲಿಸಿದ್ದಾರೆ. ಕಾರವಾರದಿಂದ ಮಡಗಾಂವ್ ಮತ್ತು ಉತ್ತರ ಗೋವಾದ ಥಿವಿಂವರೆಗೆ ಪರಿಶೀಲನೆ ಪೂರ್ಣಗೊಂಡಿದೆ. ರೈಲು ಸಂಚಾರಕ್ಕೆ ಅನುಮೋದನೆ ನೀಡುವುದೊಂದು ಬಾಕಿ ಇದ್ದು, ಸದ್ಯದಲ್ಲೇ ಹಸಿರು ನಿಶಾನೆ ತೋರುವ ನಿರೀಕ್ಷೆಯಿದೆ. ಇದರೊಂದಿಗೇ ಮಹಾರಾಷ್ಟ್ರ ಭಾಗದ ರತ್ನಗಿರಿ ವ್ಯಾಪ್ತಿಯಲ್ಲಿ ಪರಿಶೀಲನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.
Related Articles
ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರು ವರೆಗೆ ವ್ಯಾಪ್ತಿ ಹೊಂದಿರುವ ಕೊಂಕಣ ರೈಲ್ವೇಯ ಒಟ್ಟು 756 ಕಿ.ಮೀ. ಗಳನ್ನು ನಾಲ್ಕೈದು ವರ್ಷಗಳಿಂದ 1,100 ಕೋ. ರೂ. ವೆಚ್ಚದಲ್ಲಿ ವಿದ್ಯುದೀಕ ರಣಗೊಳಿಸುತ್ತಿದೆ. ದ.ಕ. ಜಿಲ್ಲೆಯ ತೋಕೂರಿನಿಂದ ಉಡುಪಿ ಜಿಲ್ಲೆಯ ಬಿಜೂರು ವರೆಗೆ ಕೊಂಕಣ ರೈಲ್ವೇಯಲ್ಲಿ 106 ಕಿ.ಮೀ. ವಿದ್ಯುದೀಕರಣ ನಡೆದಿದೆ. ದುಬಾರಿ ಬೆಲೆಯ ಡೀಸೆಲ್ ಬಳಸಿ ಚಲಿಸುತ್ತಿದ್ದ ರೈಲುಗಳು ಮುಂದೆ ವಿದ್ಯುತ್ ಮೂಲಕ ಚಲಿಸುವುದರಿಂದ ಇಲಾಖೆಗೆ ಪ್ರತೀ ವರ್ಷ 100 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
Advertisement
ದಕ್ಷಿಣ ಕನ್ನಡ ಜಿಲ್ಲೆಯ ತೋಕೂರಿನಿಂದ ಗೋವಾದ ಥಿವಿಂ ವರೆಗೆ ಈಗಾಗಲೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆದಿದೆ. ಶೀಘ್ರ ಅನುಮೋದನೆ ದೊರೆಯಲಿದ್ದು, ಮಾರ್ಚ್ ಒಳಗೆ ವಿದ್ಯುತ್ ಚಾಲಿತ ರೈಲುಗಳು ಸೇವೆ ಒದಗಿಸಲಿವೆ.– ಬಿ.ಬಿ. ನಿಕಂ, ಪ್ರಾದೇಶಿಕ ರೈಲ್ವೇ
ವ್ಯವಸ್ಥಾಪಕ, ಕಾರವಾರ – ಅವಿನ್ ಶೆಟ್ಟಿ