Advertisement

ಮಂಗಳೂರಿನಿಂದ ಮುಂಬಯಿಗೆ ಓಡಲಿ ಹಗಲು ಹೊತ್ತಿನಲ್ಲಿ ರೈಲು

01:38 AM Jan 30, 2022 | Team Udayavani |

ಮಂಗಳೂರು: ಮಂಗಳೂರು-ಮುಂಬಯಿ ನಡುವೆ ಹಗಲು ರೈಲು ಆರಂಭಿಸಬೇಕೆಂಬ ಬೇಡಿಕೆ ಮತ್ತೊಮ್ಮೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

Advertisement

ಮಡಗಾಂವ್‌ನಿಂದ ಮುಂಬಯಿಗೆ ಪ್ರಸ್ತುತ ಜನಶತಾಬ್ದಿ ರೈಲು ಸಂಚರಿಸುತ್ತಿದೆ. ಇದನ್ನೇ ಮಂಗಳೂರಿನ ವರೆಗೆ ವಿಸ್ತರಿಸಿದರೆ ಕರಾವಳಿಗರ ಹಲವು ವರ್ಷಗಳ ಬೇಡಿಕೆ ಈಡೇರಲಿದೆ. ಈಗ ಮಂಗಳೂರಿನಿಂದ ಮುಂಬಯಿಗೆ ಬೆಳಗಿನ ಅವಧಿಯಲ್ಲಿ ಯಾವುದೇ ರೈಲು ಗಳಿಲ್ಲ. ಮಂಗಳೂರು-ಕುರ್ಲಾ

ಮತ್ಸ್ಯಗಂಧಾ ಎಕ್ಸ್‌ ಪ್ರಸ್‌ ಮತ್ತು ಮಂಗಳೂರು ಜಂಕ್ಷನ್‌- ಸಿಎಂಎಸ್‌ಟಿ ಎಕ್ಸ್‌ಪ್ರೆಸ್‌ ರೈಲು ಮಧ್ಯಾಹ್ನದ ಬಳಿಕ ಮಂಗಳೂರಿನಿಂದ ಹೊರಡುತ್ತವೆ. ಹಗಲಿನಲ್ಲಿ ಒಂದೆರಡು ಸಾಪ್ತಾಹಿಕ ಗಾಡಿ ಗಳಿದ್ದರೂ ಅವು ಕೇರಳದಿಂದಲೇ ಸೀಟು ಭರ್ತಿಯಾಗಿ ಮಂಗಳೂರಿಗೆ ಬರುವುದರಿಂದ ನಮ್ಮ ಭಾಗದ ಪ್ರಯಾ ಣಿಕರಿಗೆ ಹೆಚ್ಚುಪ್ರಯೋಜನವಾಗುತ್ತಿಲ್ಲ.

ಆದ್ದರಿಂದ ಬೆಳಗಿನ ವೇಳೆ ಮಂಗಳೂರಿನಿಂದ ಮುಂಬಯಿಗೆ ರೈಲು ಸಂಚಾರ ಆರಂಭಿಸಬೇಕು ಎಂಬ ಕರಾವಳಿಗರ ಮತ್ತು ರೈಲು ಯಾತ್ರಿಕರ ಸಂಘಟನೆಗಳ ಬಹು ವರ್ಷಗಳ ಆಗ್ರಹ ಮತ್ತೊಮ್ಮೆ ಕೇಳಿಬಂದಿದೆ. ಪ್ರಸ್ತುತ ಮುಂಬಯಿ ಯಿಂದ ಮಡಗಾಂವ್‌ಗೆ ಮುಂಜಾನೆ 5.10ಕ್ಕೆ ಹೊರಡುವ ಸಿಎಸ್‌ಎಂಟಿ ಜನ ಶತಾಬ್ದಿ ರೈಲು ಮಧ್ಯಾಹ್ನ 2.10ಕ್ಕೆ ಮಡಗಾಂವ್‌ಗೆ ಆಗಮಿಸುತ್ತದೆ. ಇದನ್ನು ಅಲ್ಲಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬಹುದಾಗಿದ್ದು, ಸುಮಾರು 9 ಗಂಟೆಗೆ ಮಂಗಳೂರು ತಲುಪಬಹುದು. ಇದಕ್ಕೆ ಹೆಚ್ಚುವರಿಯಾಗಿ ಒಂದು ರೇಕ್‌ ಜೋಡಿಸಬೇಕಿದೆ.

ಮಂಗಳೂರಿನಿಂದ ಮಡಗಾಂವ್‌ಗೆ ಸಂಚರಿಸುತ್ತಿದ್ದ ಇಂಟರ್‌ಸಿಟಿ ರೈಲು ಪ್ರಸ್ತುತ ಓಡಾಟ ನಡೆಸುತ್ತಿಲ್ಲ. ಇದರ ಸಮಯವನ್ನು ಹಗಲು ರೈಲಿಗೆ ಹೊಂದಿಸಬಹುದು. ಆ ರೈಲು ಬೆಳಗ್ಗೆ 8.15ಕ್ಕೆ ಮಂಗಳೂರು ಸೆಂಟ್ರಲ್‌ ನಿಂದ ಹೊರಟು ಅಪರಾಹ್ನ 2.30ಕ್ಕೆ ಮಡಗಾಂವ್‌ ತಲುಪುತ್ತಿತ್ತು. ಅಲ್ಲಿಂದ ಮರಳಿ ಸಂಜೆ 4ಕ್ಕೆ ಹೊರಟು ರಾತ್ರಿ 10ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರುತ್ತಿತ್ತು. ಪ್ರಸ್ತುತ ಮುಂಬಯಿಯಿಂದ ಮಡಗಾಂವ್‌ಗೆ ಬರುವ ಜನಶತಾಬ್ದಿಯನ್ನು ಇದೇ ವೇಳಾಪಟ್ಟಿಯಲ್ಲಿ ಓಡಿಸಲು ಸಾಧ್ಯ ವಿದೆ. ಅಪರಾಹ್ನ 2.30ಕ್ಕೆ ಬರುವ ಈ ರೈಲನ್ನು ಮಂಗಳೂರು ಕಡೆಗೆ ಮುಂದು ವರಿಸಿ ರಾತ್ರಿ 9ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರು ವಂತೆ ಮತ್ತು ಮರುದಿನ ಬೆಳಗ್ಗೆ 8ಕ್ಕೆ ಮಂಗಳೂರು ಸೆಂಟ್ರಲ್‌ ನಿಂದ ಮುಂಬಯಿಗೆ ಹೊರಡುವಂತೆ ವೇಳಾಪಟ್ಟಿಯನ್ನು ಹೊಂದಿಸಿದರೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

Advertisement

ಇದರೊಂದಿಗೆ ಉಡುಪಿ, ಭಟ್ಕಳ, ಮುರ್ಡೇಶ್ವರ, ಕಾರವಾರ, ಮಡಗಾಂವ್‌ಗೆ ಸಂಚರಿಸುವ ಪ್ರಯಾಣಿಕರಿಗೂ ಪ್ರಯೋಜನವಾಗ ಲಿದೆ ಎಂಬುದು ಮಂಗಳೂರಿನ ರೈಲು ಬಳಕೆದಾರರ ಸಂಘಟನೆಗಳ ಸಲಹೆ.

ಹಲವು ಪ್ರಯೋಜನ 
ಮಡಗಾಂವ್‌ಗೆ ಬರುವ ಜನಶತಾಬ್ದಿ ರೈಲು ಮಂಗಳೂರಿಗೆ ವಿಸ್ತರಣೆಯಾದರೆ ಹಲವು ಪ್ರಯೋಜನ ಗಳಿವೆ. ಮಂಗಳೂರು -ಮುಂಬಯಿಗೆ ಹಗಲು ರೈಲು ಬೇಡಿಕೆ ಈಡೇರುವುದರ ಜತೆಗೆ ಮುಂಬಯಿ ಪ್ರಯಾಣಕ್ಕೆ ಹೆಚ್ಚುವರಿಯಾಗಿ ಒಂದು ರೈಲು ದೊರಕುತ್ತದೆ. ಕರಾವಳಿಗರು ಸಾಕಷ್ಟು ಸಂಖ್ಯೆಯಲ್ಲಿ ಮುಂಬಯಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿದ್ದಾರೆ. ಅವರ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗಲಿದೆ.

ಪ್ರವಾಸೋದ್ಯಮಕ್ಕೆ ಪೂರಕ
ಪ್ರಸ್ತುತ ಕಾರವಾರದಿಂದ ಬೆಂಗಳೂರಿಗೆ ಸಂಚರಿಸುವ ರೈಲಿಗೆ ವಿಸ್ಟಾಡೋಮ್ ಬೋಗಿ ಜೋಡಿಸಲಾಗಿದೆ. ಕೊಂಕಣ
ರೈಲು ಮಾರ್ಗದಲ್ಲಿ ಪ್ರಸ್ತುತ ವಾರಕ್ಕೆ 5 ದಿನ ಸಂಚರಿಸುವ ಸಿಎಸ್‌ಎಂಟಿ ತೇಜಸ್‌ ರೈಲು ಕರ್ಮೆಲಿಯಿಂದ ಮುಂಬ
ಯಿಗೆ ವಿಸ್ಟಾಡೋಮ್ ಬೋಗಿಗಳೊಂದಿಗೆ ಸಂಚರಿಸುತ್ತಿದೆ. ಇದೇ ರೀತಿ ಮಂಗಳೂರಿನಿಂದ ಹಗಲು ರೈಲು ಆರಂಭಗೊಂಡರೆ ಆದಕ್ಕೆ ವಿಸಾxಡೋಮ್‌ ಬೋಗಿಗಳನ್ನು ಜೋಡಿಸಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿದೆ.

ಮುಂಬಯಿ ಕಡೆಗೆ 31 ರೈಲುಗಳು
ಮಂಗಳೂರು ಜಂಕ್ಷನ್‌ ಮಾರ್ಗವಾಗಿ ಮುಂಬಯಿ ಕಡೆಗೆ ಸುಮಾರು 31 ರೈಲುಗಳು ಸಂಚರಿಸುತ್ತವೆ. ಇದರಲ್ಲಿ ಕೆಲವು ರೈಲುಗಳು ಕಲ್ಯಾಣ್‌ ಮತ್ತು ಕೆಲವು ರೈಲುಗಳ ಪನ್ವೇಲ್‌ನಿಂದ ತಿರುಗಿ ಇತರೆಡೆಗೆ ಸಾಗುತ್ತವೆ. ಮತ್ಸ್ಯಗಂಧಾ ಎಕ್ಸ್‌ಪ್ರೆಸ್‌, ಮುಂಬಯಿ ಸಿಎಸ್‌ಟಿ, ಮಂಗಳಾ ಎಕ್ಸ್‌ಪ್ರೆಸ್‌, ನೇತ್ರಾವತಿ ಲೋಕಮಾನ್ಯ ತಿಲಕ್‌ ಟರ್ಮಿನಲ್‌ ರೈಲುಗಳು ದಿನಂಪ್ರತಿ ಸಂಚರಿಸುತ್ತವೆ. ಇನ್ನುಳಿದಂತೆ ಕೆಲವು ರೈಲುಗಳು ವಾರಕ್ಕೆ 2 ಬಾರಿ, ವಾರದಲ್ಲಿ 3 ಬಾರಿ ಮತ್ತು ವಾರದಲ್ಲಿ 1 ಬಾರಿ ಚಲಿಸುವ ರೈಲುಗಳಾಗಿವೆ.

ಮಡಗಾಂವ್‌ನಿಂದ ಮುಂಬಯಿಗೆ ಸಂಚರಿಸುತ್ತಿರುವ ಜನಶತಾಬ್ದಿ ರೈಲನ್ನು ಮಂಗಳೂರಿಗೆ ವಿಸ್ತರಿಸುವಂತೆ ಇತ್ತೀಚೆಗೆ ದಕ್ಷಿಣ ರೈಲ್ವೇಯ ಮಹಾಪ್ರಬಂಧಕರು ನಡೆಸಿದ ಸಭೆಯಲ್ಲಿ ಕೋರಿಕೆ ಮಂಡಿಸಿದ್ದೇನೆ. ಬೇಡಿಕೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಎಂ ಅವರು ಭರವಸೆ ನೀಡಿದ್ದಾರೆ.
-ನಳಿನ್‌ ಕುಮಾರ್‌ ಕಟೀಲು, ಸಂಸದರು, ದಕ್ಷಿಣಕನ್ನಡ

ಮಡಗಾಂವ್‌ ಮುಂಬಯಿ ಜನ್‌ಶತಾಬ್ದಿ ರೈಲನ್ನು ಮಂಗಳೂರುವರೆಗೆ ವಿಸ್ತರಿಸಬೇಕು ಎಂಬುದಾಗಿ ಸಾಕಷ್ಟು ಸಮಯದಿಂದ ಒತ್ತಾಯಿಸುತ್ತಿದ್ದೇವೆ. ಇದು ಈಡೇರಿದರೆ ಮಂಗಳೂರಿನಿಂದ ಮುಂಬಯಿಗೆ ಹಗಲು ರೈಲು ಸಂಚಾರಕ್ಕೆ ಅವಕಾಶ ಲಭಿಸುತ್ತದೆ.
-ಅನಿಲ್‌ ಹೆಗ್ಡೆ,
ಪಶ್ಚಿ ಮ ಕರಾವಳಿ ರೈಲು ಯಾತ್ರಿ ಅಭಿವೃದ್ಧಿ ಸಮಿತಿ ತಾಂತ್ರಿಕ ಸಲಹೆಗಾರ

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next