Advertisement

Train ಚಲಿಸುವಾಗ ಕೊಂಡಿ ತುಂಡು: ಬೇರ್ಪಟ್ಟ ಬೋಗಿ

01:40 AM Sep 09, 2024 | Team Udayavani |

ಪಟ್ನಾ: ರೈಲಿನ 2 ಬೋಗಿಗಳನ್ನು ಜೋಡಿಸುವ ಕೊಂಡಿ ತುಂಡಾದ ಕಾರಣ ದಿಲ್ಲಿ-ಇಸ್ಲಾಂಪುರ ಮಗಧ್‌ ಎಕ್ಸ್‌ಪ್ರಸ್‌ನ ಬೋಗಿಗಳು ಪ್ರತ್ಯೇಕಗೊಂಡಿವೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಬಿಹಾರದ ಬಕ್ಸರ್‌ ಜಿಲ್ಲೆಯ ಟ್ವಿನಿಗಂಜ್‌ ಹಾಗೂ ರಘುನಾಥಪುರ ರೈಲು ನಿಲ್ದಾಣಗಳ ನಡುವೆ ರವಿವಾರ ಈ ಘಟನೆ ನಡೆದಿದೆ. ಮಧ್ಯಾಹ್ನದ ಬಳಿಕ ರೈಲು ಸಂಚಾರ ಆರಂಭವಾಗಿದೆ.

Advertisement

ಟ್ವಿನಿಗಂಜ್‌ ನಿಲ್ದಾಣ ದಾಟಿ ಮುಂದೆ ಹೋಗುವಾಗ ರೈಲಿನ ಕೊಂಡಿ ತುಂಡಾಗಿದ್ದು, 2 ಬೋಗಿಗಳು ರೈಲು ಚಲಿಸುತ್ತಲ್ಲೇ ಪ್ರತ್ಯೇಕಗೊಂಡಿದೆ. ಹವಾನಿಯಂತ್ರಿತ ಎಸ್‌-7 ಬೋಗಿ ಮುಂದೆ ಸಾಗಿದ್ದು ಅದರ ಹಿಂದಿನ ಬೋಗಿಗಳು ಹಾಗೇ ನಿಂತಿವೆ. ಇದನ್ನು ಗಮನಿಸಿದ ಲೋಕೋಪೈಲಟ್‌ ಎಚ್ಚೆತ್ತುಕೊಂಡು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತತ್‌ಕ್ಷಣ ಸ್ಥಳಕ್ಕಾಗಮಿಸಿದ ರಕ್ಷಣ ತಂಡ ಹಾಗೂ ತಾಂತ್ರಿಕ ತಂಡ ಪರಿಶೀಲನೆ ನಡೆಸಿವೆ. ಈ ಬಗ್ಗೆ ಕಾರಣ ತಿಳಿದುಕೊಳ್ಳಲು ತನಿಖೆಗೆ ಆದೇಶ ನೀಡಲಾಗಿದೆ ಪೂರ್ವ ಕೇಂದ್ರ ರೈಲ್ವೇ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸರಸ್ವತಿ ಚಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next