Advertisement

ತೌಖ್ತೇ ಚಂಡಮಾರುತ ಹಿನ್ನಲೆ : ಹಳಿಗಳ ಮೇಲೆ ಮರ ಬಿದ್ದು ರೈಲು ಸಂಚಾರದಲ್ಲಿ ವ್ಯತ್ಯಯ

08:31 PM May 16, 2021 | Team Udayavani |

ಮಂಗಳೂರು : ತೌಖ್ತೇ ಚಂಡುಮಾರತ ಹಿನ್ನಲೆಯಲ್ಲಿ ಕೊಂಕಣ ರೈಲುಮಾರ್ಗದ ಮಡಂಗಾವ್‌-ತೀವಿಂ ನಡುವೆ ಹಳಿಗಳ ಮೇಲೆ ಮರಗಳು ಬಿದ್ದ ಪರಿಣಾಮ ರೈಲು ಸಂಚಾರ ಕೆಲವು ತಾಸು ವ್ಯತ್ಯಯಗೊಂಡಿತ್ತು.

Advertisement

ಮಡಂಗಾವ್‌-ತೀವಿಂ ನಡುವೆ ಸುಮಾರು 5 ಕಡೆಗಳಲ್ಲಿ ರೈಲ್ವೆ ಹಳಿಗಳ ಮೇಲೆ ಮರಗಳು ಬಿದ್ದ ಹಿನ್ನಲೆಯಲ್ಲಿ ರೈಲು ನಂ. 06346 ತಿರುವನಂತಪುರಂ ಸೆಂಟ್ರಲ್‌- ಲೋಕಮಾನ್ಯ ತಿಲಕ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಸಂಚಾರ ಸುಮಾರು ಮೂರು ತಾಸು ಹಾಗೂ ರೈಲು ನಂ.01114 ಮಡಂಗಾವ್‌ ಜಂಕ್ಷನ್‌- ಮುಂಬಯಿ ಸಿಎಸ್‌ಎಂಟಿ ವಿಶೇಷ ರೈಲ್‌ನ ಸಂಚಾರ ಸುಮಾರು 1 ತಾಸು ವಿಳಂಭಗೊಂಡಿತ್ತು.

ಕೊಂಕಣ ರೈಲ್ವೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮರಗಳು ಬಿದ್ದ ಸ್ಥಳಕ್ಕೆ ತತ್‌ಕ್ಷಣ ಧಾವಿಸಿ ಹಳಿಗಳ ಮೇಲೆ ಬಿದ್ಧಿದ್ದ ಮರಗಳನ್ನು ತೆರವುಗೊಳಿಸಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ :ರಾಜ್ಯದಲ್ಲಿಂದು 31531 ಕೋವಿಡ್ ಪಾಸಿಟಿವ್ ಪ್ರಕರಣ; 403 ಜನರು ಸಾವು

Advertisement

Udayavani is now on Telegram. Click here to join our channel and stay updated with the latest news.

Next