ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ರಾಜ್ಯ ಸರ್ಕಾರ ನೆರವಿಗೆ ಬಂದಿದ್ದು, ಮತ್ತೂಂದು ಅವಕಾಶ ಕಲ್ಪಿಸುವಂತೆ
ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Advertisement
ರೈಲು ವಿಳಂಬದಿಂದ ನೂರಾರು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಈ ವಿಚಾರದಲ್ಲಿ ಅಭ್ಯರ್ಥಿಗಳು ಆತಂಕ ಪಡಬೇಕಾಗಿಲ್ಲ. ಮತ್ತೂಮ್ಮೆ ಪರೀಕ್ಷೆ ಬರೆಯಲು ಅವಕಾಶ ಮತ್ತು ಶೀಘ್ರವೇ ಹೊಸ ದಿನಾಂಕ ಪ್ರಕಟಿಸಲು ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿ ಅವರಿಗೆ ಸೂಚಿಸಲಾಗಿದೆ ಎಂದರು.
Related Articles
ರೈಲು ನಿಗದಿತ ಸಮಯಕ್ಕೆ ಬಾರದ ಕಾರಣ ಧಾರವಾಡದಿಂದಲೂ ಪರೀಕ್ಷೆಗೆ ಬರಬೇಕಿದ್ದ ವಿದ್ಯಾರ್ಥಿಗಳಿಗೆ ಪರದಾಟ ಎದುರಾಯಿತು. ಭಾನುವಾರ ಬೆಳಗ್ಗೆ ಆಗಮಿಸಿದ ರೈಲನ್ನು ಕಂಡ ಪರೀಕ್ಷಾರ್ಥಿಗಳು ಆಕ್ರೋಶಗೊಂಡು ಪ್ರತಿಭಟನೆಗೆ
ಮುಂದಾದರು. ಪರಿಕ್ಷೆ ವಂಚಿತರಾಗಿದ್ದೇವೆಂಬ ಕಾರಣಕ್ಕೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳ ವಿರುದಟಛಿ ಅಭ್ಯರ್ಥಿಗಳು ಹರಿಹಾಯ್ದರು. ವಿದ್ಯಾಗಿರಿ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.
Advertisement
ತಾಂತ್ರಿಕ ಕಾರಣಗಳಿಂದ ರೈಲು ವಿಳಂಬವಾಗಿದೆ. ಹೀಗಾಗಿ ಅಭ್ಯರ್ಥಿಗಳು ತಮ್ಮದಲ್ಲದ ಕಾರಣಕ್ಕೆ ಸಶಸOಉ ಮೀಸಲು ಪಡೆ ನೇಮಕಾತಿ ಪರೀಕ್ಷೆಯಿಂದ ವಂಚಿತರಾಗಬಾರದು.ಹೀಗಾಗಿ ಅವರಿಗೆ ಮತ್ತೂಮ್ಮೆ ಪರೀಕ್ಷೆ ಬರೆಯಲು ಅವಕಾಶನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. – ಎಚ್.ಡಿ. ಕುಮಾರಸ್ವಾಮಿ
ಮುಖ್ಯಮಂತ್ರಿ ಅಭ್ಯರ್ಥಿಗಳಿಂದಲೇ 4 ಗಂಟೆ ವಿಳಂಬ: ರಾಜೇಶ್ ಮೋಹನ್
ಹುಬ್ಬಳ್ಳಿ: ತಾಂತ್ರಿಕ ಕಾರಣಗಳಿಂದಾಗಿ ರೈಲು ವಿಳಂಬವಾಯಿತು. ಆದರೆ, ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಅಡತಡೆ ಉಂಟು ಮಾಡದಿದ್ದರೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬಹುದಿತ್ತು. ಅಭ್ಯರ್ಥಿಗಳಿಂದಾಗಿಯೇ ರೈಲು ಸಂಚಾರ 4 ಗಂಟೆ ವಿಳಂಬವಾಯಿತು ಎಂದು ನೈರುತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ್ ಮೋಹನ್ ಹೇಳಿದರು. ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪರೀಕ್ಷೆ ಮುಂದೂಡಬೇಕೆಂಬ ಉದ್ದೇಶದಿಂದಲೇ ಕೆಲ ಕಿಡಿಗೇಡಿಗಳು ರೈಲು ಸಂಚಾರಕ್ಕೆ ವಿಳಂಬ ಮಾಡಿದರು. ರೈಲು ಮುಂದಕ್ಕೆ ಸಾಗದಂತೆ ತುರ್ತು ನಿಲುಗಡೆ ಚೈನ್ ಜಗ್ಗಿ ಸಂಚಾರಕ್ಕೆ ಅಡ್ಡಿಪಡಿಸಿದರು. ಅಭ್ಯರ್ಥಿಗಳು ಸಹಕಾರ ನೀಡಿದ್ದರೆ ರಾಣಿ ಚನ್ನಮ್ಮ ರೈಲು ಬೆಳಗ್ಗೆ 8:30ಕ್ಕೆ ಬೆಂಗಳೂರಿಗೆ ತಲುಪಬಹುದಿತ್ತು. ಪ್ರತಿಭಟಕಾರರು 3 ಗಂಟೆ ಕಂಬಾರಗಣವಿಯಲ್ಲಿ ಟ್ರ್ಯಾಕ್ ಮೇಲೆ ಕುಳಿತು ರೈಲು ಸಂಚಾರ ತಡೆದರು. ಕೆಲ ಪ್ರತಿಭಟನಾಕಾರರು ಎಂಜಿನ್‌ಗೆ ಕಲ್ಲೆಸೆದು ಗಾಜು ಒಡೆದರು. ಅಲ್ಲದೆ, ಚಾಲನಾ ಕಾರ್ಯಕ್ಕೆ ತಡೆಯೊಡ್ಡಿದರು. ಇದರಿಂದ ರೈಲು ಸಂಚಾರ ವಿಳಂಬವಾಯಿತು. ಆದರೆ, ಮಾನವೀಯತೆ ದೃಷ್ಟಿಯಿಂದ ರೈಲು ಸಂಚಾರಕ್ಕೆ ತಡೆಯೊಡ್ಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಲಾಗಿದೆ ಎಂದರು.