Advertisement

Mathura: ಪ್ಲಾಟ್‌ಫಾರಂಗೆ ರೈಲು ಡಿಕ್ಕಿ

09:18 PM Sep 27, 2023 | Team Udayavani |

ಮಥುರಾ: ಉತ್ತರ ಪ್ರದೇಶದ ಮಥುರಾ ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಏಕಾಏಕಿ ರೈಲು ಪ್ಲಾಟ್‌ಫಾರ್ಮ್ಗೆ ನುಗ್ಗಿದ್ದು, ಇದರಿಂದ ಮಹಿಳೆಯೊಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ರೈಲ್ವೆ ಇಲಾಖೆ ಆದೇಶಿಸಿದೆ.

Advertisement

ಶಕುರ್‌ಬಸ್ತಿಯಿಂದ ಹೊರಟ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯುನಿಟ್‌(ಇಎಂಯು) ರೈಲು ಮಂಗಳವಾರ ರಾತ್ರಿ 10.50ಕ್ಕೆ ಮಥುರಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 2ಎಗೆ ಬಂದು ತಲುಪಿತು. ಎಲ್ಲಾ ಪ್ರಯಾಣಿಕರು ಸೇರಿದಂತೆ ರೈಲಿನ ಸಿಬ್ಬಂದಿ ಕೂಡ ರೈಲಿನಿಂದ ಕೆಳಕ್ಕೆ ಇಳಿದಿದ್ದರು. ಈ ವೇಳೆ ಇದಕ್ಕಿದ್ದಂತೆ ರೈಲು ಚಲಿಸಿದ್ದು, ರೈಲು ಪ್ಲಾಟ್‌ಫಾರ್ಮ್ ಮೇಲೆ ಏರಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಎಲೆಕ್ಟ್ರಿಕ್‌ ಶಾಕ್‌ಗೆ ಒಳಗಾಗಿ, ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next