Advertisement

Trailers ವೀಕ್ಷಕರನ್ನು ಸೆಳೆಯಲು ಇರುವ ಮಾಧ್ಯಮವಷ್ಟೇ: ಸುಪ್ರೀಂ

01:03 AM Apr 23, 2024 | Team Udayavani |

ಹೊಸದಿಲ್ಲಿ: ಸಿನೆಮಾ ಟ್ರೈಲರ್‌ಗಳಲ್ಲಿರುವ ಅಂಶಗಳು ಸಿನೆಮಾದಲ್ಲಿ ಇರಲೇಬೇಕು ಎಂದು ಹೇಳಲಾಗುವು ದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ. ಫ್ಯಾನ್‌ ಸಿನೆಮಾದ ಟ್ರೈಲರ್‌ನಲ್ಲಿದ್ದ ಹಾಡು ಸಿನಿ ಮಾದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಗ್ರಾಹಕ ಕೋರ್ಟ್‌ ಸಿನೆಮಾ ನಿರ್ಮಾಣ ಸಂಸ್ಥೆಗೆ 10 ಸಾವಿರ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ನಿರ್ಮಾಣ ಸಂಸ್ಥೆ ಯಶ್‌ರಾಜ್‌ ಫಿಲಂಸ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಹೆಚ್ಚು ಜನರು ಸಿನೆಮಾದ ಟಿಕೆಟ್‌ ಕೊಳ್ಳುವಂತೆ ಮಾಡಲು ಆಕರ್ಷಕ ಅಂಶಗಳನ್ನು ಟ್ರೈಲರ್‌ನಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next