Advertisement

ವನಿತಾ ಟಿ20 ಚಾಲೆಂಜ್‌ ಫೈನಲ್‌; ಟ್ರೈಲ್‌ಬ್ಲೇಜರ್ ಗೆ ಮೊದಲ ಕಿರೀಟ

11:44 PM Nov 09, 2020 | mahesh |

ಶಾರ್ಜಾ: ಸ್ಮತಿ ಮಂಧನಾ ನಾಯಕತ್ವದ ಟ್ರೈಲ್‌ಬ್ಲೇಜರ್ ಮೊದಲ ಬಾರಿಗೆ ವನಿತಾ ಟಿ20 ಚಾಲೆಂಜ್‌ ಚಾಂಪಿಯನ್‌ ಆಗಿ ಮೂಡಿಬಂದಿದೆ. ಸೋಮವಾರದ ಫೈನಲ್‌ನಲ್ಲಿ ಅದು ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ, ಕಳೆ ದೆರಡು ಬಾರಿಯ ಚಾಂಪಿಯನ್‌ ಸೂಪರ್‌ನೋವಾಸ್‌ಗೆ 16 ರನ್ನುಗಳ ಸೋಲುಣಿಸಿ ಟ್ರೋಫಿಯನ್ನೆತು.

Advertisement

ಸಣ್ಣ ಮೊತ್ತದ ಈ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಟ್ರೈಲ್‌ಬ್ಲೇಜರ್ ಉತ್ತಮ ಆರಂಭದ ಹೊರತಾಗಿಯೂ 8 ವಿಕೆಟಿಗೆ ಕೇವಲ 118 ರನ್‌ ಗಳಿಸಿತು. ಜವಾಬಿತ್ತ ಸೂಪರ್‌ನೊàವಾಸ್‌ 7 ವಿಕೆಟಿಗೆ 102 ರನ್‌ ಗಳಿಸಿ ಶರಣಾಯಿತು.

ಸೂಪರ್‌ನೋವಾಸ್‌ ಪರ ಕೌರ್‌ ಸರ್ವಾಧಿಕ 30 ರನ್‌ ಹೊಡೆದರು. ಸಿರಿವರ್ಧನೆ 19 ರನ್‌ ಮಾಡಿದರೆ, ಕಳೆದೆರಡೂ ಪಂದ್ಯಗಳಲ್ಲಿ ಮಿಂಚಿದ್ದ ಚಾಮರಿ ಅತಪಟ್ಟು ಕೇವಲ 6 ರನ್‌ ಮಾಡಿ ನಿರ್ಗಮಿಸಿದರು. ಬಾಂಗ್ಲಾ ಸ್ಪಿನ್ನರ್‌ ಸಲ್ಮಾ ಖಾತುನ್‌ 3, ದೀಪ್ತಿ ಶರ್ಮ 2 ವಿಕೆಟ್‌ ಕಿತ್ತು ಸೂಪರ್‌ನೊàವಾಸ್‌ಗೆ ಕಡಿವಾಣ ಹಾಕಿದರು.

ಮಂಧನಾ ಅರ್ಧ ಶತಕ
ಟ್ರೈಲ್‌ಬ್ಲೇಜರ್ ಮೊತ್ತದಲ್ಲಿ ಮಂಧನಾ ಪಾಲೇ 68 ರನ್‌. ಎಡಗೈ ಸ್ಪಿನ್ನರ್‌ ರಾಧಾ ಯಾದವ್‌ 16 ರನ್ನಿಗೆ 5 ವಿಕೆಟ್‌ ಕಿತ್ತು ಮಂಧನಾ ಪಡೆಯ ದೊಡ್ಡ ಮೊತ್ತದ ಯೋಜನೆಯನ್ನು ವಿಫಲಗೊಳಿಸಿದರು. ಆದರೂ ಈ ಮೊತ್ತವನ್ನು ಉಳಿಸಿ ಕೊಳ್ಳುವಲ್ಲಿ ಅದು ಯಶಸ್ವಿಯಾಯಿತು.

ಮಂಧನಾ ಮತ್ತು ಡಿಯಾಂಟ್ರಾ ಡಾಟಿನ್‌ ಅವರಿಂದ ತಂಡಕ್ಕೆ ಉತ್ತಮ ಆರಂಭವೇನೋ ಲಭಿಸಿತು. ಆದರೆ ಮೊದಲ 3 ಓವರ್‌ಗಳ ಜೋಶ್‌ ಅನಂತರ ಕಂಡುಬರಲಿಲ್ಲ. 3 ಓವರ್‌ಗಳಲ್ಲಿ ಇವರಿಬ್ಬರು ಸೇರಿ 27 ರನ್‌ ರಾಶಿ ಹಾಕಿದ್ದರು. ಅನಂತರ ಸೂಪರ್‌ನೋವಾಸ್‌ ಬೌಲಿಂಗ್‌ ಬಿಗಿಯಾಗುತ್ತ ಹೋಯಿತು.

Advertisement

ಪೂನಂ ಯಾದವ್‌ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 20 ರನ್ನಿಗೆ 32 ಎಸೆತ (1 ಬೌಂಡರಿ) ತೆಗೆದುಕೊಂಡ ಡಾಟಿನ್‌ ಪೆವಿಲಿಯನ್‌ ಸೇರಿಕೊಂಡರು. ಮೊದಲ ವಿಕೆಟಿಗೆ 71 ರನ್‌ ಒಟ್ಟುಗೂಡಿತು. ಇದೇ ಓವರಿನಲ್ಲಿ ಮಂಧನಾ ಅವರ ಅರ್ಧ ಶತಕ ಪೂರ್ತಿಗೊಂಡಿತು. 15ನೇ ಓವರಿನಲ್ಲಿ ಸ್ಕೋರ್‌ ನೂರರ ಗಡಿ ದಾಟಿದೊಡನೆಯೇ ಮಂಧನಾ ವಿಕೆಟ್‌ ಬಿತ್ತು. ಸಿರಿವರ್ಧನೆ ಎಸೆತಕ್ಕೆ ಮುನ್ನುಗ್ಗಿ ಬಾರಿಸಲು ಹೋಗಿ ಸ್ಟಂಪ್ಡ್ ಆದರು. ಮಂಧನಾ ಕೊಡುಗೆ 49 ಎಸೆತಗಳಿಂದ 68 ರನ್‌. ಈ ಪ್ರಚಂಡ ಬ್ಯಾಟಿಂಗ್‌ ವೇಳೆ ಅವರು 6 ಫೋರ್‌, 3 ಸಿಕ್ಸರ್‌ ಬಾರಿಸಿದರು.ಮಂಧನಾ ಹೊರತುಪಡಿಸಿ ಉಳಿದವರಿಂದ ಬಿರುಸಿನ ಆಟ ಸಾಧ್ಯವಾಗಲಿಲ್ಲ. ಹೀಗಾಗಿ ಟ್ರೈಲ್‌ಬ್ಲೇಜರ್ ನಿರೀಕ್ಷಿತ ಮೊತ್ತ ಪೇರಿಸುವಲ್ಲಿ ವಿಫ‌ಲವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next