Advertisement

TRAI ವ್ಯಾಪ್ತಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಎಕ್ಸ್‌?

01:14 AM May 20, 2024 | Team Udayavani |

ಹೊಸದಿಲ್ಲಿ: ವಾಟ್ಸ್‌ಆ್ಯಪ್‌, ಸಿಗ್ನಲ್‌, ಫೇಸ್‌ಬುಕ್‌ ಹಾಗೂ ಎಕ್ಸ್‌ ಸೇರಿದಂತೆ ಇನ್ನೂ ಕೆಲವು ಒಟಿಟಿ ಪ್ಲಾಟ್‌ಫಾರ್ಮ್ಗಳನ್ನು ಶೀಘ್ರದಲ್ಲೇ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌)ವ್ಯಾಪ್ತಿಗೆ ತರುವ ಸಾಧ್ಯತೆಗಳಿದೆ. ಈ ಬಗ್ಗೆ ಈಗಾಗಲೇ ಮುಕ್ತ ಚರ್ಚೆಗಳನ್ನು ನಡೆಸುತ್ತಿರುವು ದಾಗಿ ಟ್ರಾಯ್‌ ತಿಳಿಸಿದೆ.

Advertisement

ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕಾರ ಗೊಂಡ ಟೆಲಿಕಾಂ ಕಾಯ್ದೆಯಲ್ಲಿ ಒಟಿಟಿ ಪ್ಲಾಟ್‌ಫಾರ್ಮ್
ಗಳನ್ನು ಟ್ರಾಯ್‌ ವ್ಯಾಪ್ತಿಯಿಂದ ಸರಕಾರ ಹೊರ ಗಿಟ್ಟಿತ್ತು. ಆ ಬೆನ್ನಲ್ಲೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ವಿಚಾರ ಸಂಕಿರಣವೊಂದರಲ್ಲಿ ಈ ಕುರಿತಂತೆ ಟ್ರಾಯ್‌ ಅಧ್ಯಕ್ಷ ಅನಿಲ್‌ ಕುಮಾರ್‌ ಲಹೋಟಿ ಮಾತನಾಡಿದ್ದು, ಒಟಿಟಿ ವೇದಿಕೆಗಳಿಗೆ ನಿಯಂತ್ರಕ ಕಾರ್ಯ ವಿಧಾನಗಳನ್ನು ರೂಪಿಸ ಬೇಕೆಂಬ ಹಲವು ಸಲಹೆಗಳನ್ನು ನಾವು ಸ್ವೀಕರಿಸಿದ್ದೇವೆ. ಇದಕ್ಕೆ ಸಂಬಂಧಿ ಸಿದಂತೆ ಸಂಸದೀಯ ಸಮಿತಿ ಕೂಡ ಶಿಫಾರಸು ನೀಡಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಸಮಾಲೋಚನೆ ಗಳನ್ನು ನಡೆಸಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next