ಅರಕಲಗೂಡು: ತಾಲೂಕಿನ ಕತ್ತಿಮಲ್ಲೇನಹಳ್ಳಿಯಲ್ಲಿ ಯುವಕರು ಗಣೇಶಮೂರ್ತಿಯನ್ನು ಕೆರೆಯಲ್ಲಿ ವಿಸರ್ಜನೆ ಮಾಡಿ ಮೆರವಣಿಗೆಗೆ ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಹಿಂದಿರುಗುತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದರೆ, ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಗ್ರಾಮದ 14 ವರ್ಷದ ಬಾಲಕ ಯಶ್ವಂತ್ ವಿದ್ಯುತ್ ಅವಘಡದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪ್ರಮೋದ್, ಮೋಹನ್ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಿಕೊಡಲಾಗಿದೆ. ಉಳಿದ 8 ಮಂದಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಆಗಿದ್ದೇನು?: ಸೋಮವಾರ ಮಧ್ಯಾಹ್ನ 2-30ರ ವೇಳೆ ಗ್ರಾಮದಲ್ಲಿ ಯುವಕರು ಕೂರಿಸಿದ್ದ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡುವ ಸಲುವಾಗಿ ಅಲಂಕೃತಗೊಂಡಿದ್ದ ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಅಲಂಕೃತ ಮಂಟಪಕ್ಕೆ ತಾಗುತ್ತಿದ್ದ ವೇಳೆ ಕೋಲಿನಿಂದ ಮೇಲಕ್ಕೆ ಎತ್ತಿ ವಾಹನವನ್ನು ಮುಂದಕ್ಕೆ ಚಾಲನೆ ಮಾಡಿದ್ದಾರೆ. ಆದರೆ, ವಿಸರ್ಜನೆ ಮಾಡಿ ಹಿದಿರುಗುವ ವೇಳೆ ಕಬ್ಬಿಣದಿಂದ ಮಾಡಿದ್ದ ಅಲಂಕೃತ ಬೋರ್ಡ್‌ನ ಗೋಪುರ ವಿದ್ಯುತ್ ತಂತಿಗೆತಾಗಿದ ವೇಳೆ ಇಡೀ ವಾಹನದಲ್ಲಿ ಕುಳಿತ್ತಿದ್ದ ಯುವಕರಿಗೆ ವಿದ್ಯುತ್ ಶಾಕ್ ಉಂಟಾಗಿದೆ. ವಾಹನ ಬಿಟ್ಟು ಚಾಲಕ ಮತ್ತು ಇತರೆ ಯುವಕರು ಜಿಗಿದಿದ್ದಾರೆ. ಸಕಾಲದಲ್ಲಿ ಇಳಿಯಲು ಸಾಧ್ಯವಾಗದ ಪರಿಣಾಮ ಬಾಲಕ ಯಶ್ವಂತ್ ವಾಹನದಲ್ಲೇ ಮೃತಪಟ್ಟಿದ್ದಾನೆ.
ಟ್ರ್ಯಾಕ್ಟರ್‌ನಲ್ಲಿ 20 ಮಂದಿ ಇದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ಇನ್ Õಪೆಕ್ಟರ್ ರಘುಪತಿ, ಪಿಎಸ್‌ಐ ಕಾಳೇಗೌಡ, ಕೆಇಬಿ ಅಧಿಕಾರಿ ಚಿದಂಬರ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಶಾಸಕ ಎ.ಮಂಜು ವಿಚಾರಿಸಿದರು.
ಎಚ್ಚರಿಕೆ ವಹಿಸಲಿ: ಬಹುತೇಕ ಗ್ರಾಮಗಳಲ್ಲಿ ಗಣೇಶಮೂರ್ತಿ ಇಡುವುದು ವಾಡಿಕೆಯಾಗಿದೆ. ಪಟ್ಟಣ ಪ್ರದೇಶದಲ್ಲಿಯೂ ಕೂಡ ಯುವಕರು ಇಡುತ್ತಾರೆ. ಗಣೇಶ ವಿಸರ್ಜನೆ ಮಾಡುವ ವೇಳೆ ಕೆಇಬಿ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು ಒಳಿತು. ಮೈಮರೆತು ಹಿಂದಿರುಗುವ ವೇಳೆ ಬಾಲಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಸುನೀಗಿದ್ದಾರೆ. ಮುಂದೆ ಆದರೂ ಯುವಕರು, ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಎಚ್ಚರಿಕೆ