Advertisement

ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವ ದಂಪತಿ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ!

03:30 PM Aug 01, 2023 | Team Udayavani |

ವಿಜಯಪುರ: ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ನವದಂತಿ ಬಿದ್ದು ಮೃತಪಟ್ಟಿದ್ದಾರೆ.

Advertisement

ಇದು ಆತ್ಮಹತ್ಯೆಯೋ ಇಲ್ಲವೇ ಆಕಸ್ಮಿಕ ಘಟನೆಯೇ ಎಂಬುದು ತಿಳಿದು ಬಂದಿಲ್ಲ. ಕೆರೆಕೋಡಿ ನಿವಾಸಿ ರಮೇಶ್‌ (26) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಜರುಗಹಳ್ಳಿ ಗ್ರಾಮದ ಸಹನಾ (22) ಮೃತರು ಎಂದು ಗುರುತಿಸಲಾಗಿದೆ.

ದೇವನಹಳ್ಳಿಯ ರೆಡ್ಡಿ ಎಲೆಕ್ಟ್ರಾನಿಕ್ಸ್‌ನಲ್ಲಿ ವ್ಯವಸ್ಥಾಪಕರಾಗಿ ಆಗಿ ಕೆಲಸ ಮಾಡುತ್ತಿದ್ದ ರಮೇಶ್‌ ಅವರು ಜರುಗಹಳ್ಳಿಯ ಸಹನಾ ಅವರನ್ನು ಪ್ರೀತಿಸಿ ಐದು ತಿಂಗಳ ಹಿಂದೆ ಮದುವೆಯಾಗಿದ್ದರು. ಐದು ದಿನಗಳ ಹಿಂದೆ ಬಿಜ್ಜವಾರದ ಸಂಬಂಧಿಕರ ಮನೆಗೆ ಬಂದಿದ್ದರು. ಬಿಜ್ಜವಾರದ ಅಶ್ವತ್ಥನಾರಾಯಣ ಎಂಬುವರ ತೋಟದ ಕೃಷಿ ಹೊಂಡದಲ್ಲಿ ಸೋಮವಾರ ಬೆಳಗ್ಗೆ ಇಬ್ಬರ ಮೃತದೇಹಗಳು ಕಂಡು ಬಂದಿವೆ.

ತಕ್ಷಣ ತೋಟದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ವಿಜಯಪುರ ಪೊಲೀಸರು, ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಲಾಗಿದ್ದು, ತನಿಖೆ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next