Advertisement

ರದ್ದಾದ ಪಿಯು ಪರೀಕ್ಷೆ; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

10:34 AM Jun 13, 2021 | Team Udayavani |

ಶಿರಸಿ: ಕಾಲೇಜಿಗೆ ಪ್ರಥಮ ರ್‍ಯಾಂಕ್ ಬರಬೇಕು ಎಂದು ಶ್ರಮವಹಿಸಿ ಓದುತ್ತಿದ್ದ ವಿದ್ಯಾರ್ಥಿನಿರ್ಯೋಳು ಕೋವಿಡ್ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿ ಪ್ರಥಮ ಪಿಯುಸಿ ಅಂಕದ ಮೇಲೆ ದ್ವಿತೀಯ ಪಿಯು ಫಲಿತಾಂಶ ನೀಡಲಾಗುತ್ತದೆ ಎಂದು ಮನನೊಂದು ನೇಣು ಬಿಗಿದು ಸಾವಿಗೆ ಶರಣಾದ ಘಟನೆ ನಡೆದಿದೆ.

Advertisement

ತಾಲೂಕಿನ ಯಡಹಳ್ಳಿ ಸಮೀಪದ ಸಹಸ್ರಳ್ಳಿಯ ನಿವಾಸಿ, ಮೂಲತಃ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯ  ಜಿ.ಧನ್ಯಾ (18) ಮೃತ ಯುವತಿ.

ಇದನ್ನೂ ಓದಿ: ಸೋಮವಾರದಿಂದ ಶಿಖರ್ ಧವನ್‌ ಪಡೆಗೆ 14 ದಿನಗಳ ಕ್ವಾರಂಟೈನ್‌ ಆರಂಭ

ಕಾಲೇಜು ಕೋವಿಡ್ ಕಾರಣದಿಂದ ಬಂದ್ ಆಗಿದ್ದರೂ ಆನ್‌ಲೈನ್ ಮೂಲಕ ನಿರಂತರ ಅಭ್ಯಾಸ ಮಾಡುತ್ತಿದ್ದ ಈಕೆ ಶಿರಸಿಯ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀರೆಯಿಂದ ನೇಣಿಗೆ ಶರಣಾಗಿದ್ದಾಳೆ. ಮೃತ ಯುವತಿಯ ತಂದೆ ಗಂಗಾಧರ ದೇವಪ್ಪ ಆಚಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next