ಮೈಸೂರು: ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಬಿದ್ದ ರಿಕ್ಷಾ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೈಸೂರು-ಬೆಂಗಳೂರು ರಸ್ತೆಯ ಫೈವ್‌ಲೈಟ್ ವೃತ್ತದ ಬಳಿ ಘಟನೆ ನಡೆದಿದೆ.
ಬನ್ನಿಮಂಪಟದ ಹಲೀಂ ನಗರದ ನಿವಾಸಿ ಏಜಾಜ್ ಪಾಷ(42) ಮೃತ ಆಟೋ ರಿಕ್ಷಾ ಚಾಲಕ. ರಿಕ್ಷಾದಲ್ಲಿದ್ದ ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಚರ್ಚ್ ಕಡೆಯಿಂದ ಪೈವ್‌ಲೈಟ್ ವೃತ್ತದ ಕಡೆ ಪ್ರಯಾಣಿಕರೊಂದಿಗೆ ಏಜಾಜ್ ಪಾಷ ಆಟೋ ರಿಕ್ಷಾದಲ್ಲಿ ಬರುತ್ತಿದ್ದಾಗ ಭಾರೀ ಗಾತ್ರದ ಮರವೊಂದು ಬುಡ ಸಮೇತ ರಿಕ್ಷಾದ ಮೇಲೆ ಬಿದ್ದಿದೆ. ಇದರಿಂದ ರಿಕ್ಷಾದಲ್ಲಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.