ಹಾಸನ: ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಾಯಿಯ ನರಳಾಟಕಂಡು ಮನನೊಂದ ಪುತ್ರ ನೇಣು ಬಿಗಿದುಕೊಂಡುಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಹಿಮ್ಸ್ ಆಸ್ಪತ್ರೆಯ ಕೋವಿಡ್ ವಿಭಾಗದ ಕಟ್ಟಡದಲ್ಲಿ ಸೋಮವಾರ ನಡೆದಿದೆ.
ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕು ಶನಿವಾರಸಂತೆ ಗ್ರಾಮ ಸಮೀಪದ ಮಾದರೆಗ್ರಾಮದ ಶರತ್ ಕುಮಾರ್ (30) ಆತ್ಮಹತ್ಯೆ ಮಾಡಿಕೊಂಡವರು.
ಹಿಮ್ಸ್ ಆಸ್ಪತ್ರೆ 7ನೇ ಮಹಡಿಯಲ್ಲಿರುವ ನೀರಿನ ಟ್ಯಾಂಕ್‌ಗಳ ಪೈಪ್‌ಗ್ಳಿಗೆ ನೇಣು ಬಿಗಿದುಕೊಂಡುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆಆಸ್ಪತ್ರೆ ಸಿಬ್ಬಂದಿ ಸ್ವತ್ಛಗೊಳಿಸಲು ಹೋಗಿದ್ದಾಗ ನೀರಿನ ಪೈಪ್‌ನಲ್ಲಿ ಶವ ನೇತಾಡುತ್ತಿತ್ತು.
ಬೆಂಗಳೂರಿನಲ್ಲಿ ವಾಸ:ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶರತ್ ಕುಮಾರ್, ಕೆಲ ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿದ್ದ. 10 ದಿನಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ತಾಯಿಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದರು. ಆದರೆ, ಆಕೆ ಚೇತರಿಸಿಕೊಳ್ಳದೆ ನರಳಾಡುತ್ತಿದ್ದರು. ನೇಣಿಗೆ ಶರಣಾದ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ ನಂತರ ಆಸ್ಪತ್ರೆ ಸಿಬ್ಬಂದಿ ಶವವನ್ನು ಶವಾಗಾರಕ್ಕೆ ಸಾಗಿಸಿದರು. ಆನಂತರ ಮರಣೋತ್ತರಪರೀಕ್ಷೆ ನಡೆಸಿರುವ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.
“ಅಮ್ಮನನ್ನು ನೋಡಲು ಬಾ’ ಎಂದು ನೇಣಿಗೆ ಶರಣಾಗಿದ್ದ :
ಭಾನುವಾರ ರಾತ್ರಿ ತನ್ನ ಸಹೋದರ ಶಶಿಕುಮಾರ್‌ರಿಗೆ ಫೋನ್ ಮಾಡಿದ್ದ ಶರತ್ ಕುಮಾರ್, “ಅಮ್ಮಾ ತುಂಬಾ ನೋವು ಅನುಭವಿಸುತ್ತಿದ್ದಾರೆ. ಅದನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನೀನು ಆಸ್ಪತ್ರೆಗೆ ಬಂದು ಅಮ್ಮನನ್ನು ನೋಡು’ಎಂದಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆಶಶಿಕುಮಾರ್ ಆಸ್ಪತ್ರೆಯ ಬಳಿ ಬಂದು ಫೋನ್‌ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಕೆಲ ಸಮಯದ ನಂತರ ಶರತ್‌ಕುಮಾರ್ ಆಸ್ಪತ್ರೆ ಕಟ್ಟಡದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಶಶಿಕುಮಾರ್ ದುಃಖದಲ್ಲಿ ಮುಳುಗಿದ್ದರು.